B S Yadiyurappa: ರಾಮ ಮಂದಿರ ಉದ್ಘಾಟನೆಗೆ ನಾನು ಹೋಗುವುದಿಲ್ಲ – ಬಿ ಎಸ್ ಯಡಿಯೂರಪ್ಪ !!

B S Yadiyurappa: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ, ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಕದರಲೆಲವರಂತೂ ವಾರದ ಮುಂಚಾತವಾಗಿ ಅಯೋಧ್ಯೆಗೆ ತೆರಳಿದ್ದಾರೆ. ಬಿಜೆಪಿ ನಾಯಕರಂತೂ ಇದು ನಮ್ಮ ಸಾಧನೆ ಎಂದು ಭೀಗುತ್ತ ಸಂಭ್ರಮಿಸುತ್ತಿದ್ದಾರೆ. ಆದರೆ ಈ ನಡುವೆ ಬಿಜೆಪಿ(BJP) ವರಿಷ್ಠ ಯಡಿಯೂರಪ್ಪನವರು(B S Yadiyurappa)ನಾನುಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂದು ಅಚ್ಚರಿ ಮೂಡಿಸಿದ್ದಾರೆ.

ಹೌದು, ನಾಳೆ ಅಂದರೆ ಜ. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳಲು. ನಾಳೆ ಅಯೋಧ್ಯೆಗೂ ಹೋಗುವುದಿಲ್ಲ. ಎಂದು ಬಿಎಸ್ ಯಡಿಯೂರಪ್ಪರು ಹೇಳಿದ್ದಾರೆ. ಅಲ್ಲದೆ ಏಕೆ ತೆರಳುತ್ತಿಲ್ಲ ಎಂಬ ಕಾರಣವನ್ನೂ ಅವರು ನೀಡಿಲ್ಲ.

ಅಂದಹಾಗೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ ಅವರು, ಈ ತಿಂಗಳೊಳಗೆಗೆ ಅಯೋಧ್ಯೆಗೆ ತೆರಳುತ್ತೇನೆ, ಶ್ರೀರಾಮನ ದರ್ಶನ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ಎಲ್ಲೆಡೆ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಬಗ್ಗೆ ಚರ್ಚೆಯಾಗುತ್ತಿದೆ. ಬಹಳ ಅದ್ದೂರಿಯಾಗಿ ಯಾವುದೇ ಅಡೆ ತಡೆ ಇಲ್ಲದೆ ಕಾರ್ಯಕ್ರಮ ನಡೆಯುತ್ತದೆ ಎನ್ನುವ ವಿಶ್ವಾಸವಿದೆ ಎಂದಷ್ಟೇ ಹೇಳಿದ್ದಾರೆ.

Leave A Reply

Your email address will not be published.