Mobile Charger: ನೀವು ಬಳಸುವ ಚಾರ್ಜರ್ ಅಸಲಿಯೇ ನಕಲಿಯೇ ಹೀಗೆ ತಿಳಿದುಕೊಳ್ಳಿ!?

Mobile Charger: ಹೇಳಿ ಕೇಳಿ ಇದು ಡಿಜಿಟಲ್ ಯುಗ. ಮೊಬೈಲ್ ಎಂಬ ಸಾಧನ ಪ್ರತಿಯೊಬ್ಬರ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಆದರೆ, ನಾವು ಬಳಸುವ ಸ್ಮಾರ್ಟ್‌ಫೋನ್‌ಗೆ (Smartphone) ಚಾರ್ಜರ್(Mobile Charger) ಅತ್ಯಗತ್ಯವಾಗಿದ್ದು, ನಕಲಿ ಚಾರ್ಜರ್ ಬಳಕೆಯಿಂದ ಫೋನ್‌ನ ಬ್ಯಾಟರಿ (Tech Tips)ಬೇಗನೆ ಹಾಳಾಗಬಹುದು. ಹಾಗಿದ್ರೆ, ಚಾರ್ಜರ್ ಅಸಲಿಯೇ(Original), ನಕಲಿಯೇ(Duplicate)ತಿಳಿಯೋದು ಹೇಗೆ ಗೊತ್ತಾ??

ಹೆಚ್ಚಿನ ಮಂದಿ ಬೆಲೆ ಕಮ್ಮಿಯಿದೆ ಎಂದು ನಕಲಿ ಚಾರ್ಜರ್‌ಗಳನ್ನು ಖರೀದಿಸುತ್ತಾರೆ. ಇದರಿಂದ ಸ್ಮಾರ್ಟ್‌ಫೋನ್‌ಗೆ ಹಾನಿಯಾಗುವ ಅದರಲ್ಲಿಯೂ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮೊಬೈಲ್ ಚಾರ್ಜರ್ ಅಸಲಿಯೇ ನಕಲಿಯೇ ಎಂದು ಹೀಗೆ ತಿಳಿಯಿರಿ!!

# ಬ್ರ್ಯಾಂಡ್ ಹೆಸರು:
ನಿಜವಾದ ಚಾರ್ಜರ್‌ನಲ್ಲಿರುವ ಬ್ರ್ಯಾಂಡ್ ಹೆಸರು ಯಾವಾಗಲೂ ಸರಿಯಾಗಿರುತ್ತದೆ. ನಕಲಿ ಚಾರ್ಜರ್‌ನಲ್ಲಿರುವ ಬ್ರ್ಯಾಂಡ್ ಹೆಸರು ತಪ್ಪಾಗಿರುತ್ತದೆ. ಇಲ್ಲವೇ ಅದರ ಟೈಪಿಂಗ್ ತಪ್ಪಾಗಿರುವ ಸಾಧ್ಯತೆಯಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಿ.

# ವಿದ್ಯುತ್ ಬಳಕೆ:
ಮೂಲ ಚಾರ್ಜರ್ ಕಡಿಮೆ ಶಕ್ತಿಯನ್ನು ಬಳಸುತ್ತದೆ. ನಕಲಿ ಚಾರ್ಜರ್ ಹೆಚ್ಚಿನ ವಿದ್ಯುತ್ ಅನ್ನು ಬಳಕೆ ಮಾಡುತ್ತದೆ.
# ತೂಕ:
ನಿಜವಾದ ಚಾರ್ಜರ್ ನಕಲಿ ಚಾರ್ಜರ್‌ಗಿಂತ ಹೆಚ್ಚು ತೂಕವಿರುತ್ತದೆ.
# ಫೋನ್‌ನ ಚಾರ್ಜಿಂಗ್ ವೇಗ:
ಮೂಲ ಚಾರ್ಜರ್ನಲ್ಲಿ ಫೋನ್ ವೇಗವಾಗಿ ಚಾರ್ಜ್ ಆಗುತ್ತದೆ. ಆದರೆ, ನಕಲಿ ಚಾರ್ಜರ್ ಫೋನ್ ನಲ್ಲಿ ಚಾರ್ಜ್ ಬೇಗ ಆಗುವುದಿಲ್ಲ. ಅಷ್ಟೆ ಅಲ್ಲದೇ, ನಕಲಿಯಲ್ಲಿ ಸಾಮಾನ್ಯವಾಗಿ ಕನೆಕ್ಟರ್‌ಗಳು ಮತ್ತು ಪೋರ್ಟ್‌ಗಳು ಸಡಿಲವಾಗಿರುತ್ತವೆ.

# ವಿನ್ಯಾಸ:
ನಿಜವಾದ ಚಾರ್ಜರ್‌ನ ವಿನ್ಯಾಸವು ಯಾವಾಗಲೂ ನಕಲಿ ಚಾರ್ಜರ್‌ಗಿಂತ ಉತ್ತಮವಾಗಿರುತ್ತದೆ. ನಕಲಿ ಚಾರ್ಜರ್‌ನಲ್ಲಿ ಎಲ್ಲಾ ಕನೆಕ್ಟರ್‌ಗಳು ಮತ್ತು ಪೋರ್ಟ್‌ಗಳು ಮೂಲ ಚಾರ್ಜರ್‌ಗಿಂತ ಕೊಂಚ ಮಟ್ಟಿಗೆ ಭಿನ್ನವಾಗಿರುತ್ತದೆ.

# ಸೀಲ್:
ಒರಿಜಿನಲ್ ಚಾರ್ಜರ್ ನಲ್ಲಿ ಯಾವಾಗಲೂ ಅದರ ಮೇಲೆ ಸೀಲ್ ಅನ್ನು ಹೊಂದಿರುತ್ತದೆ. ನಕಲಿ ಚಾರ್ಜರ್‌ನಲ್ಲಿ ಯಾವುದೇ ಸೀಲ್ ಇರುವುದಿಲ್ಲ.
ಈ ಎಲ್ಲ ಅಂಶಗಳನ್ನು ಗಮನಿಸಿ,ನಿಮ್ಮ ಚಾರ್ಜರ್ ಅಸಲಿಯೇ ನಕಲಿಯೇ ಎಂದು ತಿಳಿದುಕೊಳ್ಳಿ.

Leave A Reply

Your email address will not be published.