Teaching Job: ಟೀಚರ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಉದ್ಯೋಗಾವಕಾಶ!!! ಮಾಸಿಕ 40 ಸಾವಿರ ಸಂಬಳ!!!
Teaching Job: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ(University of Agriculture Sciences Dharwad) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಅನೇಕ ಗುತ್ತಿಗೆ ಶಿಕ್ಷಕ ಹುದ್ದೆಗಳು(UAS Dharwad Recruitment 2024) ಖಾಲಿಯಿದ್ದು, ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
ಹುದ್ದೆಯ ವಿವರ:
ಸಂಸ್ಥೆ – ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ
ಹುದ್ದೆ – ಗುತ್ತಿಗೆ ಶಿಕ್ಷಕ
ಉದ್ಯೋಗದ ಸ್ಥಳ- ಧಾರವಾಡ
ವಿದ್ಯಾರ್ಹತೆ- ಬಿ.ಟೆಕ್ ,ಸ್ನಾತಕೋತ್ತರ ಪದವಿ
ವೇತನ ಮಾಸಿಕ- ₹ 40,000
ಶಿಕ್ಷಕ ಹುದ್ದೆಗೆ 06/01/2024 ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದ್ದು, ಜನವರಿ 22, 2024 ರಂದು ಮಧ್ಯಾಹ್ನ 2.30ಕ್ಕೆ ಸಂದರ್ಶನ ನಡೆಯಲಿದೆ.
ಸಂದರ್ಶನ ನಡೆಯುವ ಸ್ಥಳ
ಶಿಕ್ಷಣ ಅಧಿಕಾರಿಗಳು, ಸಮುದಾಯ ವಿಜ್ಞಾನ ಕಾಲೇಜು
ಕೃಷಿ ವಿಶ್ವವಿದ್ಯಾಲಯ
ಧಾರವಾಡ – 580005
ಅರ್ಹತಾ ಮಾನದಂಡಗಳು:
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಅಧಿಸೂಚನೆ ಅನುಸಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಟೆಕ್, ಫುಡ್ ಸೈನ್ಸ್ & ಟೆಕ್ನಾಲಜಿ/ ಫುಡ್ ಪ್ರೊಸೆಸ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕಾಗಿದ್ದು, ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಇದರ ಜೊತೆಗೆ ಅಭ್ಯರ್ಥಿಗಳಿಗೆ ಫುಡ್ ಪ್ರೊಸೆಸಿಂಗ್ & ಟೆಕ್ನಾಲಜಿಯಲ್ಲಿ ಕನಿಷ್ಠ 1 ಅಥವಾ 2 ವರ್ಷ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು.
ಇದನ್ನೂ ಓದಿ: Happy Harmone: ನಿಮ್ಮ ಸಂತೋಷ ಉಕ್ಕಿ ಹರಿಯಬೇಕೇ? ಹಾಗಾದರೆ ಈ ಆಹಾರಗಳನ್ನು ಹೆಚ್ಚೆಚ್ಚು ತಿನ್ನಿ!!!
ಗುತ್ತಿಗೆ ಶಿಕ್ಷಕ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುತ್ತದೆ.ಜನವರಿ 22, 2024 ರಂದು ಮಧ್ಯಾಹ್ನ 2.30ಕ್ಕೆ ಸಂದರ್ಶನ ನಡೆಯಲಿದೆ.ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.