Cock Fighting: ಸಂಕ್ರಾಂತಿ ಹುಂಜಗಳ ಕಾದಾಟಕ್ಕೆ ವಯಾಗ್ರ ಡೋಸ್‌!!!

Cock Fight: ರಾಜ್ಯದಲ್ಲಿ ಪ್ರತಿ ವರ್ಷ ಸಂಕ್ರಾಂತಿಯ ಸಂದರ್ಭ ಅವಿಭಜಿತ ಗುಂಟೂರು, ಕೃಷ್ಣ ಮತ್ತು ಎರಡು ಗೋದಾವರಿ ಜಿಲ್ಲೆಗಳಂತಹ ಪ್ರದೇಶಗಳಲ್ಲಿ  ಕೋಳಿ ಕಾದಾಟ(Cock Fight)ನಡೆಯುವ ಸಂಪ್ರದಾಯವಿದೆ. ಆಂಧ್ರಪ್ರದೇಶದಲ್ಲಿ ಕೋಳಿಗಳಿಗೆ ‘ರಾಣಿಖೇತ್’ ನಂತಹ ಮಾರಕ ರೋಗಗಳು ಹರಡುತ್ತಿವೆ. ಸಂಕ್ರಾಂತಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿರುವ ಸಂದರ್ಭದಲ್ಲಿ ಕೆಲವರು ಕೋಳಿಗಳಿಗೆ ವಯಾಗ್ರ ಮತ್ತು ಸ್ಟೀರಾಯ್ಡ್ ಮಿಶ್ರಿತ ಆಹಾರವನ್ನು ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಹುಂಜಗಳ ಕಾದಾಟದ ಸಮಯದಲ್ಲಿ ಭಾರಿ ಜೂಜು ನಡೆಯುತ್ತಿರುವ ಹಿನ್ನೆಲೆ ಕೆಲವು ತಳಿಗಾರರು ಕೋಳಿಗಳನ್ನು ದಷ್ಟಪುಷ್ಟವಾಗಿಸುವ ನಿಟ್ಟಿನಲ್ಲಿ ವಿಟಮಿನ್, ವಯಾಗ್ರ 100 ಮತ್ತು ಶಿಲಾಜಿತ್(Shilajit) ಗಳೊಂದಿಗೆ ಆಹಾರ ನೀಡಲು ಆರಂಭಿಸಿದ್ದಾರೆ. ಸಂಕ್ರಾಂತಿ ಸಮೀಪಿಸುತ್ತಿರುವಂತೆ ಹುಂಜಗಳನ್ನು ಹೋರಾಟಕ್ಕೆ ಸಿದ್ಧಗೊಳಿಸಲು ಶಕ್ತಿ ಹೆಚ್ಚಿಸುವ ಔಷಧಗಳನ್ನು ನೀಡಲಾಗುತ್ತಿದೆ. ಪಕ್ಷಿಗಳ ತೂಕ ಮತ್ತು ಅವುಗಳ ಚಲನಶೀಲತೆ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಪಕ್ಷಿ ಕಾದಾಟದ ಮೊದಲು ಔಷಧಿಗಳನ್ನು ನೀಡಲಾಗುತ್ತದೆ.

ಹಲವಾರು ತಳಿಗಾರರು ತಮ್ಮ ಕೋಳಿಗಳಿಗೆ ಕಾಮೋತ್ತೇಜಕಗಳನ್ನು ನೀಡಲು ಪ್ರಾರಂಭ ಮಾಡಿದ್ದಾರಂತೆ.ಅಲ್ಪಾವಧಿಗೆ ಕೋಳಿಗಳು ಬಲ ಪಡೆಯಬಹುದು ಎಂದಾದರೂ ಕೂಡ ಈ ಹಾರ್ಮೋನ್ ಉತ್ತೇಜಿಸುವ ಔಷಧಿಗಳು ದೀರ್ಘಾವಧಿಯಲ್ಲಿ ಅವುಗಳ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕೋಳಿಗಳನ್ನು ಮನುಷ್ಯರು ಸೇವಿಸಿದಾಗ ಇದು ರೂಪಾಂತರಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.