Belthangady: ಹೊಸವರ್ಷದ ಪಾರ್ಟಿಯಲ್ಲಿ ಕಿರಿಕ್ ! ಯುವಕನ ಮೂಗನ್ನೇ ಕಚ್ಚಿದ ಸ್ನೇಹಿತ

Belthangady: ಹೊಸ ವರ್ಷದ ಆಚರಣೆಯ ಪಾರ್ಟಿಯಲ್ಲಿ ಕ್ಷುಲ್ಲಕ ವಿಷಯವೊಂದಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿದ್ದು, ಕುಡಿದ ಮತ್ತಿನಲ್ಲಿ ಒಬ್ಬನ ಮೂಗು ಕಚ್ಚಿ ತುಂಡರಿಸಿದ ಘಟನೆಯೊಂದು ನಡೆದಿದೆ.

 

ಈ ಘಟನೆ ಬೆಳ್ತಂಗಡಿಯ ಪಿಲ್ಯದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದ ಉಲ್ಪೆ ಎಂಬಲ್ಲಿನ ದೀಕ್ಷಿತ್‌ (28) ಎಂಬಾತನೇ ಮೂಗು ತುಂಡರಿಸಿಕೊಂಡ ಯುವಕ. ಆರೋಪಿ ರಾಕೇಶ್‌ ಎಂಬಾತನೇ ಈ ಕೃತ್ಯ ಎಸೆಗಿದ ವ್ಯಕ್ತಿ.

ರಾಕೇಶ್‌ ಮೂಲತಃ ಮೂಡಿಗೆರೆ ತಾಲೂಕಿನವಾಗಿದ್ದು, ಈತ ಪಿಲ್ಯ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಕೆಲಸಕ್ಕೆ ಹೋಗುತ್ತಿದ್ದ ಎನ್ನಲಾಗಿದೆ.

ಡಿ.31 ರಂದು ರಾತ್ರಿ ಮದ್ಯ ಸೇವಿಸಿ, ಕ್ಷುಲ್ಲಕ ವಿಷಯಕ್ಕೆ ಸ್ನೇಹಿತರಿಬ್ಬರ ಗಲಾಟೆ ನಡೆದಿದೆ. ನಂತರ ಗಲಾಟೆ ವಿಕೋಪಕ್ಕೆ ಹೋಗಿ ಈ ಘಟನೆ ನಡೆದಿದೆ. ರಾಕೇಶ್‌, ದೀಕ್ಷಿತ್‌ ನ ಮೂಗು ಕಚ್ಚಿ ತುಂಡು ಮಾಡಿದ್ದಾನೆ.

ಇದನ್ನೂ ಓದಿ: Education News: 5, 8 ಮತ್ತು 9 ನೇ ತರಗತಿ ಮೌಲ್ಯಾಂಕ ಪರೀಕ್ಷೆ; ಶಿಕ್ಷಣ ಇಲಾಖೆಯಿಂದ ಸುತ್ತೋಲೆ

ಕೂಡಲೇ ದೀಕ್ಷಿತ್‌ನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ವೇಣೂರು ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Leave A Reply

Your email address will not be published.