Free Bus: ಫ್ರೀ ಬಸ್ ಎಫೆಕ್ಟ್- 33 ತಾಸು ನಿರಂತರವಾಗಿ ಬಸ್ಸಲ್ಲೇ ಓಡಾಡಿದ 12ರ ಬಾಲಕಿ !! ಮುಂದೇನಾಯ್ತು??

Share the Article

Free Bus: ತೆಲಂಗಾಣದಲ್ಲಿ ಹೈದರಾಬಾದ್‌(Hyderabad)ಹಾಸ್ಟೆಲ್‌ಗೆ(Hostel)ಹೋಗುವುದನ್ನು ತಪ್ಪಿಸಲು 12 ವರ್ಷದ ಬಾಲಕಿಯೊಬ್ಬಳು(Girl)ಉಚಿತ ಬಸ್‌ ಸೇವೆಯ ಮೂಲಕ 33 ಗಂಟೆಗಳ ಕಾಲ ಪ್ರಯಾಣ(Travel)ಮಾಡಿದ ಘಟನೆ ವರದಿಯಾಗಿದೆ.

ವಿದ್ಯಾರಣ್ಯಪುರಿಯ ನಿವಾಸಿಯಾದ ಬಾಲಕಿಯೊಬ್ಬಳು ಖಾಸಗಿ ಶಾಲೆಯೊಂದರ ಹಾಸ್ಟೆಲ್‌ನಲ್ಲಿದ್ದುಕೊಂಡು 8ನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಈ ನಡುವೆ, ಬಾಲಕಿ ಕ್ರಿಸ್ಮಸ್‌ ರಜೆಗಾಗಿ ಪೆದ್ದಪಳ್ಳಿಯಲ್ಲಿರುವ ತಾತನ ಮನೆಗೆ ತೆರಳಿದ್ದಾಳೆ. ರಜೆಯ ಬಳಿಕ ತಾತನ ಮನೆಯಿಂದ ಹೊರಟ ಬಾಲಕಿ ಹಾಸ್ಟೆಲ್‌ಗೆ ಹೋಗಲು ಮನಸ್ಸಿಲ್ಲದೆ ಒಂದಾದ ಮೇಲೊಂದರಂತೆ ಬಸ್‌ ಬದಲಾಯಿಸುತ್ತಾ ಸುಮಾರು 33 ಗಂಟೆ ಪ್ರಯಾಣ ಮಾಡಿದ್ದಾಳೆ ಎನ್ನಲಾಗಿದೆ.

ಬಸ್‌ ಹತ್ತಿಸಿದ ಬಳಿಕ ಬಾಲಕಿ ಊರು ತಲುಪಿಲ್ಲ ಎಂಬ ವಿಚಾರ ಬಾಲಕಿಯ ತಾತನಿಗೆ ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬಾಲಕಿಯ ಪತ್ತೆಗೆ ಬಲೆ ಬೀಸಿದ್ದಾರೆ. ಬಾಲಕಿ ತಪ್ಪಿಸಿಕೊಂಡಿರುವ ಹಿನ್ನಲೆಯಲ್ಲಿ ನೀಡಲಾದ ದೂರನ್ನು ಆಧರಿಸಿ ಪೊಲೀಸರು ಬಾಲಕಿಯನ್ನು ಹೈದರಾಬಾದ್‌ನ ಜ್ಯೂಬಿಲಿ ಬಸ್‌ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಪೋಷಕರ ವಶಕ್ಕೆ ನೀಡಿದ್ದಾರೆ ಎನ್ನಲಾಗಿದೆ.

Leave A Reply