Crime News: 70 ವರ್ಷದ ತಾಯಿಯನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ಥಳಿಸಿದ ಮಗ; ಕಾರಣವೇನು ಗೊತ್ತೇ?

Share the Article

Odisha News: ಮಹಿಳೆಯ ಕಿರಿಯ ಮಗನೋರ್ವ ತನ್ನ ಕೃಷಿಭೂಮಿಯಲ್ಲಿ ಬೆಳೆಸಿದ ಹೂಕೋಸನ್ನು ತನ್ನ ತಾಯಿ ಕಿತ್ತಿದ್ದಕ್ಕೆ ವಿದ್ಯುತ್‌ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ.

ಕಿರಿಯ ಮಗನ ಜಮೀನಿನಿಂದ ಹೂಕೋಸು ತಂದು ತಿಂದ ಬಳಿಕ ಕಿರಿಯ ಮಗ ಪ್ರಶ್ನೆ ಮಾಡಿದ್ದು, ನಂತರ ವಾಗ್ವಾದ ಜೋರಾಗಿದೆ. ಸಿಟ್ಟುಗೊಂಡ ಆಕೆಯ ಮಗ ತನ್ನ 70 ವರ್ಷದ ತಾಯಿಯನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾನೆ.

Crime News

ಇದನ್ನು ಪ್ರಶ್ನಿಸಲು ಬಂದ ಗ್ರಾಮಸ್ಥರಿಗೆ ಮಗ ಬೆದರಿಕೆಯೊಡ್ಡಿದ ಘಟನೆ ಕೂಡಾ ನಡೆದಿದೆ. ನಂತರ ಮಹಿಳೆಯನ್ನು ರಕ್ಷಿಸಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಗನ ವಿರುದ್ಧ ಹಲವು ಸೆಕ್ಷನ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನು ಓದಿ: School Holiday: ಡಿ.26 (ನಾಳೆ) ಈ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!!

Leave A Reply