Belthangady: ಮರ ಕಟ್ಟಿಂಗ್‌ ಮಾಡುವಾಗ ಅವಘಡ, ಕೆಳಗೆ ಬಿದ್ದ ಮೆಷಿನ್‌, ಕುತ್ತಿಗೆಗೆ ಗರಗಸ ಸಿಲುಕಿ ವ್ಯಕ್ತಿ ಸಾವು!!

Share the Article

Belthangady: ಮರ ಕಟ್ಟಿಂಗ್‌ ಮಾಡುವ ಸಮಯದಲ್ಲಿ ಮೆಷಿನ್‌ ಆಯತಪ್ಪಿ ಕೆಳಗೆ ಬಿದ್ದಿದ್ದು, ಚಾಲನ ಸ್ಥಿತಿಯಲ್ಲಿದ್ದ ಮೆಷಿನ್‌ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆಯೊಂದು ಬೆಳ್ತಂಗಡಿಯಲ್ಲಿ ನಡೆದಿದೆ.

ಡಿ.19 ರ ಬೆಳಿಗ್ಗೆ 11.30 ರ ಸಮಯಕ್ಕೆ ಮರ ಕಟ್ಟಿಂಗ್‌ ಮಾಡಲು ಪ್ರಶಾಂತ್‌ ಪೂಜಾರಿ ಮತ್ತು ಸಹೋದರ ಪ್ರಮೋದ್‌ ಜೊತೆ ಮರ ಕಡಿಯುವ ಕಟ್ಟಿಂಗ್‌ ಮಿಷಿನ್‌ ಮೂಲಕ ಮರ ಕಡಿಯುವ ಸಮಯದಲ್ಲಿ ಪ್ರಶಾಂತ್‌ ಪೂಜಾರಿ ಕಟ್ಟಿಂಗ್‌ ಮಿಷಿನ್‌ ಜೊತೆ ಕೆಳಗೆ ಬಿದ್ದಿದ್ದು, ಚಾಲನಾ ಸ್ಥಿತಿಯಲ್ಲಿದ್ದ ಮೆಷಿನಿನ ಗರಗಸ ಆಕಸ್ಮಿಕವಾಗಿ ಕುತ್ತಿಗೆಗೆ ತಾಗಿ ತೀವ್ರ ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆದು ತಂದಿದ್ದಾರೆ.

ಆದರೆ ಚಿಕಿತ್ಸೆ ಫಲಿಸದೆ ಪ್ರಶಾಂತ್‌ ಪೂಜಾರಿ ಅವರು ಇಂದು ಬೆಳಗ್ಗಿನ ಜಾವ ಸುಮಾರು 2 ಗಂಟೆಗೆ ಮೃತ ಹೊಂದಿದ್ದಾರೆ. ಈ ಕುರಿತು ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಶಾಂತ್‌ ಅವರ ಸಹೋದರ ಪ್ರಮೋದ್‌ ದೂರು ನೀಡಿದ್ದಾರೆ.

ಇದನ್ನು ಓದಿ: Ramalinga Reddy: ಬಸ್‌ಗಳಲ್ಲಿ ಮಾಸ್ಕ್‌ ಧರಿಸಿ ಪ್ರಯಾಣ ಮಾಡಿ; ಸಚಿವ ರಾಮಲಿಂಗ ರೆಡ್ಡಿ ಸೂಚನೆ!!!

Leave A Reply