Home Interesting Mobile switch off: ನೀವು ಈ ಕಂಪೆನಿ ಮೊಬೈಲ್ ಯೂಸ್ ಮಾಡ್ತಿದ್ದೀರಾ? ಹಾಗಿದ್ರೆ ಡಿಸೆಂಬರ್ 20ರಂದು...

Mobile switch off: ನೀವು ಈ ಕಂಪೆನಿ ಮೊಬೈಲ್ ಯೂಸ್ ಮಾಡ್ತಿದ್ದೀರಾ? ಹಾಗಿದ್ರೆ ಡಿಸೆಂಬರ್ 20ರಂದು ಸ್ವಿಚ್ ಆಫ್ ಆಗುತ್ತೆ ನಿಮ್ಮ ಫೋನ್ !! ಯಾಕೆ ಗೊತ್ತಾ?!

Mobile switch off

Hindu neighbor gifts plot of land

Hindu neighbour gifts land to Muslim journalist

Mobile switch off: ಡಿಸೆಂಬರ್ 20 ರಂದು ಈ ಪ್ರತಿಷ್ಠಿತ ಮೊಬೈಲ್ ಕಂಪೆನಿ ಫೋನ್ ಸ್ವಿಚ್ ಆಫ್ ಅಭಿಯಾನವನ್ನು ಮಾಡುತ್ತಿದ್ದು ತನ್ನ ಎಲ್ಲಾ ಗ್ರಾಹಕರಿಗೆ ತಮ್ಮ ಸ್ಮಾರ್ಟ್ ಫೋನ್ ಸ್ವಿಚ್ ಆಫ್(Mobile switch off)ಮಾಡುವಂತೆ ಕೇಳಿದೆ.

ಹೌದು, ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ವಿವೋ(Vivo) ‘ಸ್ವಿಚ್‌ಆಫ್’ ಎಂಬ ವಿಶೇಷ ಅಭಿಯಾನವನ್ನು ಆರಂಭಿಸಿದೆ. ಈ ತಿಂಗಳ 20 ರಂದು ತನ್ನ ಎಲ್ಲಾ ಗ್ರಾಹಕರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಸ್ವಿಚ್ ಆಫ್ ಮಾಡಲು ಕೇಳಿಕೊಂಡಿದೆ. ಆದರೆ ಇದಕ್ಕೂ ಒಂದು ಪ್ರಮುಖ ಕಾರಣವಿದೆ. ಕುಟುಂಬ ಸಂಭಂಧಗಳಿಗೆ ಈ ಮಹತ್ವ ನೀಡಲು ಸಂಸ್ಥೆಯು ಈ ಯೋಜನೆಯನ್ನು, ಅಭಿಯಾನವನ್ನು ಶುರುಮಾಡಿದೆ.

ಹೌದು, ಜನರು ಡಿಸೆಂಬರ್(December) 20 ರಂದು ರಾತ್ರಿ 8 ರಿಂದ 9 ರವರೆಗೆ ಫೋನ್ ಸ್ವಿಚ್ ಆಫ್ ಮಾಡಿ ತಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಮತ್ತು ಮಕ್ಕಳು ತಮ್ಮ ಹೆತ್ತವರೊಂದಿಗೆ ಸಂತೋಷವಾಗಿರಲು ವಿವೋ ಕಂಪೆನಿ ಕೇಳಿಕೊಂಡಿದೆ.

ಇದನ್ನು ಓದಿ: P M Modi: ಚುನಾವಣೆಗೆ ಸ್ಪರ್ಧಿಸಲು ಮಹಿಳೆಯೋರ್ವಳಿಗೆ ಓಪನ್ ಆಗಿ ಆಫರ್ ಕೊಟ್ಟ ಮೋದಿ – ಮಹಿಳೆ ಹೇಳಿದ್ದು ಕೇಳಿ ಮೋದಿ ಶಾಕ್ !!

ಅಂದಹಾಗೆ ವಿವೋ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಶೇ.77ರಷ್ಟು ಪೋಷಕರು ತಮ್ಮ ಮಕ್ಕಳು ಅತಿಯಾಗಿ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ ಎಂದು ದೂರಿದ್ದಾರೆ. ಅಂದರೆ ಮಕ್ಕಳು ಊಟ ಮಾಡುತ್ತಿಲ್ಲ ಎಂದು ಅನೇಕ ಪೋಷಕರು ತಮ್ಮ ಮಕ್ಕಳ ಕೈಗೆ ಫೋನ್ ನೀಡುತ್ತಾರೆ. ಇದು ಮೊದಲಿಗೆ ಮೋಜಿನಂತೆ ಪ್ರಾರಂಭವಾಯಿತು. ಕ್ರಮೇಣ, ಇದು ಅವರಿಗೆ ವ್ಯಸನವಾಗುತ್ತಿದೆ. ಇದರೊಂದಿಗೆ. ಹಗಲಿನಲ್ಲಿ ಹೆಚ್ಚಿನ ಸಮಯ ಫೋನ್ ನಲ್ಲಿ ಕಳೆಯುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಕೆಲವು ಸಮೀಕ್ಷೆಗಳ ಪ್ರಕಾರ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 42 ರಷ್ಟು ಮಕ್ಕಳು ದಿನಕ್ಕೆ ಎರಡರಿಂದ ನಾಲ್ಕು ಗಂಟೆಗಳ ಕಾಲ ತಮ್ಮ ಫೋನ್ ಗೆ ಅಂಟಿಕೊಂಡಿರುತ್ತಾರೆ. ಇದು ಅಪಾಯಕಾರಿ ವಿಚಾರವಾಗಿರುವುದು ಹಾಗೂ ಸಂಬಂಧಗಳೇ ಮರೆತು ಹೋಗುತ್ತಿರುವುದರಿಂದ ಸಂಸ್ಥೆಯು ಈ ವಿಶೇಷ ಕಾರ್ಯ ಮಾಡುತ್ತಿದೆ. ಸಂಸ್ಥೆಯ ಈ ನಡೆಗೆ ಸದ್ಯ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.