Tape worm: ವೈದ್ಯ ಲೋಕವೇ ಬಿಚ್ಚಿಬಿದ್ದ ಪ್ರಕರಣ- ವ್ಯಕ್ತಿಯ ಮೆದುಳು, ಎದೆಯಲ್ಲಿ 700ಕ್ಕೂ ಹೆಚ್ಚು ಹುಳುಗಳು ಪತ್ತೆ!! ಹೊಕ್ಕಿದ್ದಾದ್ರೂ ಹೇಗೆ ಗೊತ್ತೆ ?!

National news The worm's progression through the man's brain, over a four year period

Tape worm: ಚೀನಾದಲ್ಲಿ ವ್ಯಕ್ತಿಯೊಬ್ಬ ತಲೆನೋವು ಮತ್ತು ಮೂರ್ಛೆಯಿಂದ ಬಳಲುತ್ತಿದ್ದರಂತೆ. ಹೀಗಾಗಿ, ವೈದ್ಯರನ್ನು ಭೇಟಿಯಾದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಪೂರ್ವ ಚೀನಾದ ಹ್ಯಾಂಗ್‌ಝೌದಿಂದ 43 ವರ್ಷದ ಝು ಝಾಂಗ್-ಫಾ ಅವರು ತಲೆನೋವು ಹಾಗೂ ಮೂರ್ಛೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೀಗಾಗಿ, ಝೆಜಿಯಾಂಗ್ ಕಾಲೇಜ್ ಆಫ್ ಮೆಡಿಸಿನ್‌ನಲ್ಲಿ ವೈದ್ಯರನ್ನು ಭೇಟಿ ಮಾಡಿದ್ದಾರೆ.

ವೈದ್ಯರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದಾಗ ಝುಗೆ ಟೈನಿಯಾಸಿಸ್ ರೋಗ ಲಕ್ಷಣಗಳನ್ನು ತಿಳಿಸಿದ್ದಾರೆ. MRI ಸ್ಕ್ಯಾನ್‌ನಲ್ಲಿ ಅವರ ಮೆದುಳು, ಎದೆ ಮತ್ತು ಶ್ವಾಸಕೋಶಗಳು ಒಳಗೊಂಡಂತೆ ಅವರ ದೇಹದಲ್ಲಿ 700 ಕ್ಕೂ ಹೆಚ್ಚು ಟೇಪ್ ಹುಳುಗಳು (Tape worm)ಕಂಡುಬಂದಿದೆ ಎನ್ನಲಾಗಿದೆ. ಟೇಪ್ ವರ್ಮ್ ಮೊಟ್ಟೆಗಳನ್ನು ಒಳಗೊಂಡಿರುವ ಬೇಯಿಸದ ಇಲ್ಲವೇ w ಹಂದಿಮಾಂಸವನ್ನು ಸೇವಿಸಿದ ಬಳಿಕ ಝು ಅವರ ದೇಹದಲ್ಲಿ ಟೇಪ್ ವರ್ಮ್ಗಳು ಕಂಡುಬಂದಿವೆ.

ಇದನ್ನು ಓದಿ: Truck Drivers: ವಾಹನ ಮಾಲೀಕರಿಗೆ ಕೊನೆಯ ಎಚ್ಚರಿಕೆ ಕೊಟ್ಟ ಸಾರಿಗೆ ಇಲಾಖೆ – ಇದರ ಅಳವಡಿಕೆಗೆ ಡೆಡ್ ಲೈನ್ ಪ್ರಕಟ

ಟೇನಿಯಾ ಸೋಲಿಯಮ್ ಸೋಂಕು, ಟೇನಿಯಾಸಿಸ್, ಕಲುಷಿತ ಇಲ್ಲವೇ ಬೇಯಿಸದ ಹಂದಿಮಾಂಸದಲ್ಲಿ ಟೇಪ್ ವರ್ಮ್ ಮೊಟ್ಟೆಗಳನ್ನು ತಿಂದ ಬಳಿಕ ಕಂಡುಬರುತ್ತವೆ. ಮೊಟ್ಟೆಗಳು ಸುಮಾರು ಎರಡು ತಿಂಗಳಲ್ಲಿ ಪ್ರೌಢಾವಸ್ಥೆಗೆ ಬರಲಿದ್ದು, ಟೇಪ್ ವರ್ಮ್ಗಳು ಸಣ್ಣ ಕರುಳಿನಲ್ಲಿ ವರ್ಷಗಳವರೆಗೆ ನೆಲೆಸುತ್ತದೆ. ಎರಡರಿಂದ ಏಳು ಮೀಟರ್ ಉದ್ದದವರೆಗೆ ಬೆಳೆಯುತ್ತವೆ.

Leave A Reply

Your email address will not be published.