Truck Drivers: ವಾಹನ ಮಾಲೀಕರಿಗೆ ಕೊನೆಯ ಎಚ್ಚರಿಕೆ ಕೊಟ್ಟ ಸಾರಿಗೆ ಇಲಾಖೆ – ಇದರ ಅಳವಡಿಕೆಗೆ ಡೆಡ್ ಲೈನ್ ಪ್ರಕಟ

Transport news all new trucks to have AC canbins from 2025

Truck Drivers:ಕೇಂದ್ರ ಸಾರಿಗೆ ಇಲಾಖೆ (Government) ಸರಕು ಸಾಗಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಟ್ರಕ್‌ಗಳ ಚಾಲಕರ(truck drivers)ಹಿತದೃಷ್ಠಿಯಿಂದ ಮಹತ್ವದ ತೀರ್ಮಾನ ಕೈಗೊಂಡಿದೆ. ಈ ನಿಟ್ಟಿನಲ್ಲಿ ಹೊಸ ಟ್ರಕ್‌ಗಳಲ್ಲಿ ಎಸಿ ಅಳವಡಿಕೆ(AC cabins Mandates In Truck) ಕಡ್ಡಾಯಗೊಳಿಸಲು ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ. ಕೇಂದ್ರ ಸಾರಿಗೆ ಇಲಾಖೆ ಜಾರಿಗೊಳಿಸಿದ ಹೊಸ ಅಧಿಸೂಚನೆಯನುಸಾರ, 2025ರ ಅಕ್ಟೋಬರ್ 1ನೇ ತಾರೀಖಿನೊಳಗೆ ಎಲ್ಲಾ ಟ್ರಕ್‌ ಚಾಲಕರಿಗೆ ಎಸಿ ಕ್ಯಾಬಿನ್(Ac Cabin in Truck)ಇರಬೇಕು ಎಂದು ಆದೇಶ ನೀಡಲಾಗಿದೆ.

ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ(Nitin Gadkari) ಅವರು ಟ್ರಕ್ ಕ್ಯಾಬಿನ್‌ಗಳಲ್ಲಿ ಎಸಿ ಸಿಸ್ಟಮ್‌ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯನ್ನು ಅನುಮೋದಿಸಲಾಗಿದೆ ಎಂದು ಈ ಹಿಂದೆಯೇ ಹೇಳಿದ್ದರು. ಸಾರಿಗೆ ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುವ ಟ್ರಕ್ ಚಾಲಕರ ಕೆಲಸವನ್ನು ಸಲೀಸು ಮಾಡುವ ಸಲುವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಈ ತೀರ್ಮಾನ ಕೈಗೊಂಡಿದೆ. ಸರ್ಕಾರದ ಹೊಸ ಸೂಚನೆಯ ಅನುಸಾರ, ಅಕ್ಟೋಬರ್ 1, 2025ರ ನಂತರ ನಿರ್ಮಾಣವಾದ ಹೊಸ ಟ್ರಕ್‌ಗಳಿಗೆ ಎಸಿ ಕ್ಯಾಬಿನ್ (AC cabin) ಅಳವಡಿಕೆ ಕಡ್ಡಾಯವಾಗಿದೆ.

ಇದನ್ನು ಓದಿ: Crime: ಮನೆ ಬಳಿ ಮೇಯಲು ಬಂದವು 18 ಹಸುಗಳು – ಎಲ್ಲಕ್ಕೂ ‘ಆಸಿಡ್’ ಎರಚಿ ವಿಕೃತಿ ಮೆರೆದ ಮುದುಕ!!

ಅಕ್ಟೋಬರ್ 2025ರ ಬಳಿಕ ನಿರ್ಮಾಣವಾಗುವ ಟ್ರಕ್‌ಗಳಿಗೆ ಏರ್ ಕಂಡೀಷನ್ ಸಿಸ್ಟಂ (Air condition System) ಅಳವಡಿಸುವುದು ಕಡ್ಡಾಯವಾಗಿದೆ. ಅದರಲ್ಲೂ ಎನ್‌2 ಎನ್‌3 ಮಾದರಿಯ ( 3.5 ಟನ್‌ ಭಾರ ಮೀರಿದ ಆದರೆ 12 ಟನ್‌ಗಿಂತ ಹೆಚ್ಚಿಲ್ಲದ ಸರಕು ಸಾಗಣೆ ವಾಹನಗಳಿಗೆ ಕಡ್ಡಾಯವಾಗಿದೆ. ಎನ್ 3 ಎಂದರೆ ಗರಿಷ್ಠ 12 ಟನ್ ತೂಕ ಮೀರಿದ ಸರಕು ಸಾಗಣೆ ವಾಹನ) ಎಂದು ಸಚಿವಾಲಯ ಗೆಜೆಟೆಡ್ ನೊಟೀಫಿಕೇಷನ್‌ನಲ್ಲಿ ಮಾಹಿತಿ ನೀಡಿದೆ.

Leave A Reply

Your email address will not be published.