Article 370: ಆರ್ಟಿಕಲ್ 370 ರದ್ದು ವಿಚಾರ – ಸುಪ್ರೀಂ ತೀರ್ಪಿನ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಪ್ರಧಾನಿ ಮೋದಿ

National Supreme Court Verdict On Article 370'S Abrogation PM Narendra Modi tweet

Article 370: ಜಮ್ಮು ಮತ್ತು ಕಾಶ್ಮೀರಕ್ಕೆ(Jammu and Kashmir) ಸಂವಿಧಾನದಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನ(Special Status) ಪರಿಚ್ಛೇದ 370 (Article 370)ಅನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಇಂದು ಸೋಮವಾರ (ಡಿಸೆಂಬರ್ 11) ಸುಪ್ರೀಂ ಕೋರ್ಟ್‌(Supreme Court)ಪ್ರಕಟಿಸಿದೆ.

ಸುಪ್ರೀಂಕೋರ್ಟ್ (Supreme Court) 370 ನೇ ವಿಧಿಯನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಹೊಸ ಜಮ್ಮು ಮತ್ತು ಕಾಶ್ಮೀರ (Jammu and Kashmir) ಹುಟ್ಟಿದೆ ಎಂದು ಮೋದಿ ಹೇಳಿದ್ದಾರೆ.

ಇದನ್ನು ಓದಿ: Pink Ball Test: ಕ್ರಿಕೆಟ್ ಪ್ರೇಮಿಗಳಿಗೆ ಬಿಗ್ ಶಾಕ್ ಕೊಟ್ಟ BCCI – ಭಾರತದಲ್ಲಿ ಇನ್ಮುಂದೆ ನಡೆಯಲ್ಲ ಪಿಂಕ್ ಬಾಲ್ ಟೆಸ್ಟ್ !!

“ಇಂದಿನ ಸುಪ್ರೀಂಕೋರ್ಟ್ ತೀರ್ಪು 370 ನೇ ವಿಧಿಯ ರದ್ದತಿ ಐತಿಹಾಸಿಕವಾಗಿದ್ದು, .ಲ್ 5 ಆಗಸ್ಟ್ 2019 ರಂದು ಭಾರತದ ಸಂಸತ್ ತೆಗೆದುಕೊಂಡ ನಿರ್ಣಯವನ್ನು ಇದು ಸಾಂವಿಧಾನಿಕವಾಗಿ ಎತ್ತಿಹಿಡಿಯುತ್ತದೆ. ಇದು ಭರವಸೆ, ಪ್ರಗತಿ ಮತ್ತು ಏಕತೆಯ ಪ್ರತಿಧ್ವನಿಸುವ ಘೋಷಣೆಯಾಗಿದೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನಲ್ಲಿರುವ ನಮ್ಮ ಸಹೋದರಿಯರು ಮತ್ತು ಸಹೋದರರಿಗಾಗಿ, ನ್ಯಾಯಾಲಯವು ಭಾರತೀಯರಾದ ನಾವು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮತ್ತು ಪ್ರೀತಿಸುವ ಏಕತೆಯ ಸಾರವನ್ನು ಬಲಪಡಿಸಿದೆ ಎಂದು ನರೇಂದ್ರ ಮೋದಿಯವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುಪ್ರೀಂ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಏಕತೆಯ ಬಂಧಗಳು ಬಲಗೊಂಡಿದ್ದು ಭಾರತದೊಂದಿಗೆ ಸಮಗ್ರತೆಯನ್ನು ಬಲಪಡಿಸಲಾಗಿದೆ ಎಂದು ಹೇಳಿದ್ದಾರೆ.

https://x.com/narendramodi/status/1734106830845133108?s=20

 

Leave A Reply

Your email address will not be published.