Bengaluru: ಬೆಂಗ್ಳೂರಲ್ಲಿ ಕಸ ಆಯುವವನಿಗೆ ಅಮೇರಿಕಾ ಡಾಲರ್ ಸಿಕ್ಕ ಪ್ರಕರಣಕ್ಕೆ ರೋಚಕ ಟ್ವಿಸ್ಟ್ !!

Bengaluru ragpicker got American currency dollar notes case big twist

Bengaluru: ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಕಸ ಆಯುವವನಿಗೆ ದಾರಿ ಬದಿಯಲ್ಲಿ ಕಸ ಆಯುವ ವ್ಯಕ್ತಿಯೊಬ್ಬನಿಗೆ ಕೋಟಿ ಕೋಟಿ ಬೆಲೆ ಬಾಳುವ ಅಮೇರಿಕಾ ಡಾಲರ್(American dollars) ಸಿಕ್ಕಿ ಭಾರೀ ಸುದ್ದಿಯಾಗಿತ್ತು. ಆದರೀಗ ಈ ಪ್ರಕರಣ ರೋಚಕ ಟ್ವಿಸ್ಟ್ ಸಿಕ್ಕಿದೆ.

ಬೆಂಗಳೂರಿನ(Bengaluru) ಬೀದಿಯೊಂದರಲ್ಲಿ ಕಸದ ರಾಶಿಯಲ್ಲಿ (garbage) ಚಿಂದಿ ಆಯುವ ಕೆಲಸ ಮಾಡುವ ಸಲ್ಮಾನ್ ಶೇಖ್ ಎಂಬಾತನಿಗೆ ನವೆಂಬರ್ 1ರಂದು 23 ಬಂಡಲ್‌ನಷ್ಟು ಅಮೆರಿಕನ್ ಡಾಲರ್‌ಗಳಿದ್ದ ಬ್ಯಾಗ್ ದೊರೆತದ್ದು, ರೂಪಾಯಿಯಲ್ಲಿ ಇದರ ಮೌಲ್ಯ ಸುಮಾರು ₹25 ಕೋಟಿ ಆಗುವಷ್ಟು ಎಂಬುದು ಎಲ್ಲರಿಗೂ ತಿಳಿದಿದೆ. ಜೊತೆಗೆ ಇದು ನಕಲಿ ಹಣ ಎಂಬುದಾಗಿಯೂ ಗೊತ್ತಾಗಿದೆ. ಆದರೀಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕಿಡ್ನಾಪ್ ಮಾಡೋ ತನಕವೂ ಈ ನಕಲಿ ಡಾಲರ್ ಗಳು ಆಕರ್ಷಿಸಿವೆ ಎಂಬ ಸತ್ಯ ಹೊರಬಿದ್ದಿದೆ.

ಹೌದು, ಈ ನಕಲಿ ಡಾಲರ್ ಸಿಕ್ಕಿದ ಕಸ ಆಯುವವನನ್ನೇ ಗ್ರಾಂಗ್ ಒಂದು ಕಿಡ್ನಾಪ್ ಮಾಡಿದೆ. ಮೈಯೆಲ್ಲಾ ಸಾಲ ಮಾಡಿಕೊಂಡವನೊಬ್ಬನಿಗೆ ಕೋಟಿ ಕೋಟಿ ಮೌಲ್ಯದ ಡಾಲರ್ ಸಿಕ್ಕಿದೆ ಎಂಬದು ತಿಳಿಯುತ್ತಿದ್ದಂತೆ ಭಾರೀ ಖುಷಿಯಾಗಿದೆ. ಆ ಕೂಡಲೇ ಗ್ಯಾಂಗ್ ಕಟ್ಟಿಕೊಂಡು ರಾತ್ರೋ ರಾತ್ರಿಲ್ಲಿ ಡಾಲರ್ ಸಿಕ್ಕ ವ್ಯಕ್ತಿಯನ್ನು ಸಿನಿಮಾ ಸ್ಟೈಲ್ ನಲ್ಲಿ ಇನೋವಾ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಬಳಿಕ ಅವನಿಗೆ ಥಳಿಸಿ ಡಾಲರ್ ಬಗ್ಗೆ ವಿಚಾರಿಸಿದಾಗ ಸಲ್ಮಾನ್ ನಾನು ಪೋಲೀಸರಿಗೆ ಅದನ್ನು ತಲುಪಿಸಿದ್ದೀನಿ ಎಂದು ಹೇಳಿದ್ದಾನೆ. ಬಳಿಕ ಅವನನ್ನು ಕಾರಿಂದ ಇಳಿಸಿ ಹೋಗಿದ್ದಾರೆ.

ಸಾಲ ತೀರಿಸುವ ಬಯಕೆಯಲ್ಲಿ ಅರುಣ್ ಅಲಿಯಾಸ್ ಸರವಣ, ಸಲ್ಮಾನ್ ಅನ್ನು ಕಿಡ್ನಾಪ್ ಮಾಡಿದ ಕೂಡಲೇ ಕೇಸ್ ದಾಖಲಿಸಲಾಗಿದೆ. ಸಲ್ಮಾನ್ ಸಿಕ್ಕ ಬಳಿಕ ವಿಚಾರಣೆ ನಡೆಸಿದ ಪೋಲೀಸರಿಗೆ ನಡೆದ ವಿಚಾರ ತಿಳಿದು ಇದೀಗ ಅರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Transportation department: KSRTC ಯಿಂದ ಮತ್ತೊಂದು ಹೊಸ ಸೌಲಭ್ಯ ಘೋಷಣೆ!!

Leave A Reply

Your email address will not be published.