Udupi Fire Tragedy: ಉಡುಪಿಯಲ್ಲಿ ದೀಪಾವಳಿ ಪೂಜೆ ವೇಳೆ ಅವಘಡ; ಏಳು ಬೋಟ್‌ಗಳಿಗೆ ಹತ್ತಿದ ಬೆಂಕಿ!!

Udupi news Fishing boat gutted in fire tragedy at gangolli port latest news

Udupi Fire Tragedy: ಎಲ್ಲೆಡೆ ದೀಪಾವಳಿ ಸಂಭ್ರಮ ಸಡಗರ. ಹಾಗೆಗೇ ಕೆಲವೊಂದು ಕಡೆ ಪಟಾಕಿ ಅನಾಹುತ ನಡೆದಿದೆ. ಪಟಾಕಿಯಿಂದಾಗಿ ಹಲವರಿಗೆ ಗಾಯವಾದ ಘಟನೆ ರಾಜ್ಯದಲ್ಲಿ ವರದಿಯಾಗಿದೆ.

ಅಂತಹುದೇ ಒಂದು ಘಟನೆ ಈಗ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಲಂಗರು ಹಾಕಿದ್ದ ಬೋಟ್‌ನಲ್ಲಿ (Fishing boats gutted in fire tragedy) ಬೆಂಕಿ ಕಾಣಿಸಿಕೊಂಡು, ಏಳು ಬೋಟ್‌ಗಳಿಗೆ ವಿಸ್ತರಿಸಿ ಅವೆಲ್ಲವೂ ಸುಟ್ಟು ಹೋಗಿದೆ.

ಲೂ

ದೀಪಾವಳಿ ಪ್ರಯುಕ್ತ ಪೂಜೆ ನಡೆಯುತ್ತಿದ್ದ ವೇಳೆ ಗಂಗೊಳ್ಳಿ ಮೀನುಗಾರಿಕಾ ಬಂದರು ಪರಿಸರದಲ್ಲಿ ಈ ದುರಂತ ಸಂಭವಿಸಿದೆ. ಪಟಾಕಿ ಸಿಡಿದು ಬೆಂಕಿ ಹಬ್ಬಿರಬಹುದೇ ಎಂಬ ಅನುಮಾನ ಕಾಡಿದೆ. ಸ್ಥಳೀಯ ಅಗ್ನಿಶಾಮಕ ದಳದಿಂದ ರಕ್ಷಣಾ ಕೆಲಸ ನಡೆಯುತ್ತಿದೆ. ಬೆಂಕಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಘಟನೆಯಿಂದ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ( Udupi Fire Tragedy)ಎಂದು ಹೇಳಲಾಗಿದೆ.

ಘಟನಾ ಸ್ಥಳದ ಸಮೀಪದಲ್ಲಿ ದೀಪಾವಳಿ ಹಬ್ಬ ನಡೆದಿದು, ದೊಡ್ಡ ಮಟ್ಟದಲ್ಲಿ ಪಟಾಕಿ ಸಿಡಿಸಿದ್ದು, ಹೀಗೆ ಸಿಡಿಸುವಾಗ ಕಿಡಿ ಏನಾದರೂ ಬೋಟ್‌ಗೆ ತಗುಲಿ ಈ ಅನಾಹುತ ಸಂಭವಿಸಿರಬಹುದೇ ಎಂದು ಸಂಶಯ ಉಂಟಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯಬೇಕಾಗಿದೆ.

ಇದನ್ನೂ ಓದಿ: Udupi: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಮೃತದೇಹ ಕಂಡು ಕಣ್ಣೀರಾದ ಪುತ್ರ- ಪೊಲೀಸರಿಂದ ಆರೋಪಿ ಪತ್ತೆ ನಾಲ್ಕು ತಂಡ ರಚನೆ!!!

Leave A Reply

Your email address will not be published.