Hibiscus Health Tips: ಮನೆಯಂಗಳದಲ್ಲೇ ಸಿಗುವ ದಾಸವಾಳ ಹೂವಿನಲ್ಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ!

Health news lifestyle hibiscus health tips health benefits of hibiscus for your overall health

Hibiscus Health Tips: ಕೆಲವೊಂದಷ್ಟು ಬಾರಿ ಹಿತ್ತಲಲ್ಲೇ ಸಿಗೋ ಗಿಡ ಮೂಲಿಕೆಗಳ ಪ್ರಯೋಜನವು ಅರಿಯದೆ ಹೋಗಿರುತ್ತದೆ. ಅದೆಷ್ಟೋ ಇಂಗ್ಲಿಷ್ ಮದ್ದುಗಳನ್ನು ಮೀರಿಸುವ ಶಕ್ತಿ ಇರುವ ಔಷಧಿಗಳು ಮನೆಯ ಪಕ್ಕದಲ್ಲೇ ಇರುತ್ತದೆ. ಅಂತಹ ಉತ್ತಮ ಗಿಡಗಳಲ್ಲಿ ದಾಸವಾಳ (Hibiscus Health Tips) ಕೂಡ ಒಂದು.

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರೋ ಹಾಗೆ ದಾಸವಾಳ ಒಂದು ಹೂವು, ಪೂಜೆಗಳಲ್ಲಿ ಬಳಸುತ್ತಾರೆ ಎಂಬುದು. ಆದ್ರೆ ಅದೆಷ್ಟೋ ಜನರಿಗೆ ಇದರ ಉಪಯೋಗವೆ ತಿಳಿಯದೆ ಹೋಗಿದೆ. ಹೌದು. ದಾಸವಾಳವು ಕಾರ್ಬೋಹೈಡ್ರೇಟ್, ಕೊಬ್ಬು ,ಪ್ರೋಟೀನ್ ,ವಿಟಮಿನ್ ಸಿ ,ಕ್ಯಾಲ್ಸಿಯಂ ,ಕಬ್ಬಿಣ ಹೀಗೆ ಹಲವು ಪೋಷಾಕಾಂಶಗಳನ್ನು ಹೊಂದಿದೆ. ದಾಸವಾಳವು ಸೌಂದರ್ಯ ಹಾಗೂ ಚರ್ಮ ಮತ್ತು ಕೂದಲು ಸೇರಿದಂತೆ ಹಲವು ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚು ಪ್ರಯೋಜನಕಾರಿಯಾಗಿದೆ. ಹಾಗಿದ್ರೆ ಬನ್ನಿ ಇದರಲ್ಲಿರುವ ಔಷಧೀಯ ಗುಣಗಳು ಯಾವೆಲ್ಲ ಸಮಸ್ಯೆಗೆ ಪರಿಹಾರವಾಗಬಹುದು ಎಂಬುದನ್ನು ತಿಳಿಯೋಣ.

ಮಧುಮೇಹ ನಿಯಂತ್ರಣ:
ದಾಸವಾಳದ ಸಾರವು ಆಂಟಿ-ಇನ್ಸುಲಿನ್ ಪ್ರತಿರೋಧ ಗುಣಲಕ್ಷಣಗಳನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಲಾಗಿದೆ ಅಧಿಕ ರಕ್ತದ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ

ಕೂದಲಿನ ಆರೈಕೆ :
ಕೇಶರಾಶಿಗೆ ಸಹಕಾರಿ ದಾಸವಾಳದ ಎಲೆಗಳು ಮತ್ತು ಹೂವುಗಳು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ ಗುಣಗಳನ್ನು ಹೊಂದಿದೆ. ದಾಸವಾಳದ ಎಲೆಗಳು ಮತ್ತು ಹೂವುಗಳು ನೈಸರ್ಗಿಕ ವರ್ಣದ್ರವ್ಯವಾಗಿದೆ. ಆಕ್ಸಿಡೀಶನ್‌ ನಿರೋಧಕಗಳು ಮತ್ತು ವಿಟಮಿನ್‌ಗಳನ್ನು ಒಳಗೊಂಡಿರುತ್ತವೆ. ವಾರದಲ್ಲಿ ಎರಡುಬಾರಿ ದಾಸವಾಳ ಎಲೆ ಅಥವಾ ಹೂಗಳನ್ನು ಕೂದಲಿಗೆ ಹಚ್ಚುವುದರಿಂದ ನೇರವಾಗಿ ಪರಿಣಾಮ ಬೀರಿ ಉತ್ತಮ ಕೇಶರಾಶಿ ಹೊಂದಲು ಸಹಕರಿಸುತ್ತದೆ.

ಉತ್ತಮ ತ್ವಚ್ಛೆಗೆ:
ಹೈಬಿಸ್ಕಸ್ ಸಸ್ಯಗಳು ಲೋಳೆಗಳ ಅಂಶಗಳನ್ನು ಹೆಚ್ಚು ಹೊಂದಿರುವುದರಿಂದ ಅವುಗಳು ಪಾಲಿಸ್ಯಾಕರೈಡ್ಗಳ ಗುಂಪಿಗೆ ಸೇರುತ್ತವೆ. ಇದರ ಎಲೆಗಳನ್ನು ಚರ್ಮದ ಕಾಯಿಲೆಗಳನ್ನು ಬಳಸಲಾಗುತ್ತದೆ. ಹೈಬಿಸ್ಕಸ್ ಲೋಳೆಯ ಸಾರವು ಗ್ಲಿಸರಿನ್ ಅನ್ನು ಹೊಂದಿರುತ್ತದೆ, ಇದು ಚರ್ಮವನ್ನು ವೃಧುವಾಗಿಸುದಲ್ಲದೇ ಕಾಂತಿಯುತವಾಗಿಸುತ್ತದೆ.

ದೇಹಕ್ಕೆ ತಂಪು:
ಬಾಡಿ ಹೀಟ್ ಆಗಿದ್ದರೆ ಅದನ್ನು ಕಮ್ಮಿ ಮಾಡಲು ದಾಸವಾಳ ಹೂವಿನ ಜ್ಯೂಸ್ ಕುಡಿದರೆ ಒಳ್ಳೆಯದು. ದಾಸವಾಳದ ರಸ ದೇಹದ ಉಷ್ಣತೆಯನ್ನು ಕಡಿಮೆಮಾಡುತ್ತದೆ, ಅದರಲ್ಲೂ ಬಿಳಿ ಬಣ್ಣದ ದಾಸವಾಳದಲ್ಲಿ ತಂಪು ನೀಡುವ ಅಂಶ ಹೆಚ್ಚಿರುವುದರಿಂದ, ಅದು ಕಣ್ಣುಗಳನ್ನು ಆಯಾಸದಿಂದ ಮುಕ್ತವಾಗಿರಿಸಿ, ತಂಪನ್ನು ನೀಡುತ್ತದೆ.

ಕ್ಯಾನ್ಸರ್‌ ದೂರ:
ದಾಸವಾಳ ಹೂವಿನಲ್ಲಿರುವ anti oxidants ಗುಣ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ. ದಾಸವಾಳ ಹೂವಿನ ಟೀ ಮಾಡಿ ಕುಡಿಯುವುದು ತುಂಬಾ ಒಳ್ಳೆಯದು. ಬಿಳಿ ದಾಸವಾಳ ಎಲ್ಲಕ್ಕಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಹೂವುಗಳನ್ನು ಬೇವಿನ ಮರದ ಅಡಿಯಲ್ಲಿ (ನೆರಳಿನಲ್ಲಿ) ಒಣಗಿಸಬೇಕು. ನಂತರ ಇದನ್ನು ಪುಡಿ ಮಾಡಿ ಸೇವಿಸಿದರೆ ಎಲ್ಲ ಬಗೆಯ ಕ್ಯಾನ್ಸರ್‌ಗಳಿಗೆ ಉಪಶಮನಕಾರಿ.

ಮೊಡವೆಗೆ ಮದ್ದು:
ಮೊಡವೆ ಕಡಿಮೆ ಮಾಡಲು ದುಬಾರಿ ಚಿಕಿತ್ಸೆ ಮಾಡಿಸುತ್ತೇವೆ, ಆದರೆ ದಿನಾ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಮೊಡವೆ ಬರುವುದನ್ನು ತಡೆಯಬಹುದು, ಅಲ್ಲದೆ ಈ ಜ್ಯೂಸ್ ನಿಮ್ಮ ತ್ವಚೆ ಕಾಂತಿಯನ್ನೂ ಹೆಚ್ಚಿಸುತ್ತದೆ.

ದೇಹದ ನೀರಿನಂಶ:
ದೇಹದಲ್ಲಿ ನೀರಿನಂಶ ಕಮ್ಮಿಯಾಗದಂತೆ ನೋಡಿಕೊಳ್ಳುತ್ತದೆ. ನೀರಿನಂಶದ ಕೊರತೆಯಿಂದ ಬಳಲುತ್ತಿರುವವರು, ಡ್ರೈ ಸ್ಕಿನ್ ಇರುವವರು ಇದರ ಜ್ಯೂಸ್ ಕುಡಿಯುವುದು ಒಳ್ಳೆಯದು. ಕೆಲವರಿಗೆ ಹೊಟ್ಟೆ ಸರಿಯಾಗಿ ಹಸಿಯುವುದಿಲ್ಲ, ಹೊಟ್ಟೆ ಹಸಿಯುತ್ತಿಲ್ಲ ಎಂದು ಊಟ ಸರಿಯಾಗಿ ಮಾಡದಿದ್ದರೆ ನಿಶ್ಯಕ್ತಿ ಉಂಟಾಗುವುದು. ಹೊಟ್ಟೆ ಹಸಿವು ಸರಿಯಾದ ರೀತಿಯಲ್ಲಿ ಆಗಲು ದಾಸವಾಳವನ್ನು ತಿನ್ನುವುದು ಒಳ್ಳೆಯದು.

ಇದನ್ನೂ ಓದಿ: Broom Vastu Tips : ನೆನಪಿರಲಿ ನಿಮಗೆ ಪೊರಕೆಗೆ ಸಂಬಂಧಿಸಿದ ಈ ಅಂಶಗಳು : ಶ್ರೀಮಂತಿಕೆಗೆ ಹಾಗೂ ಹಣದ ಅಡಚಣೆಗೆ ಇದು ಅಡ್ಡಿಯಾಗದು!

Comments are closed.