8th Pay Commission Update: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್- ಹೊಸ ನಿಯಮದಂತೆ ಮೂಲ ವೇತನದಲ್ಲಿ ಭಾರೀ ಏರಿಕೆ !!

Government news 8th Pay Commission latest update govt employees salary hike new rules

8th Pay Commission Update: ಇನ್ನೇನು ಕೆಲವೇ ತಿಂಗಳುಗಳಲ್ಲಿ ಹೊಸ ವೇತನ ಆಯೋಗ ಜಾರಿಯಾಗಲಿದೆ. ಹೌದು, ವೇತನ ನಿಯಮದಲ್ಲಿ ಬದಲಾವಣೆಯಾಗಲಿದ್ದು, 8ನೇ ವೇತನ ಆಯೋಗವೇ (8th Pay Commission Update) ರಚನೆಯಾಗಲಿದೆ ಎನ್ನುವ ಮಾತು ಬಲವಾಗಿದೆ.

ಮುಂದಿನ ವರ್ಷ 2024 ರ ಜನವರಿಯಲ್ಲಿಯೇ 8ನೇ ವೇತನ ಆಯೋಗದ ಘೋಷಣೆಯಾಗಲಿದೆ ಎನ್ನಲಾಗಿದೆ. ಈಗಾಗಲೇ ಜುಲೈ ತುಟ್ಟಿಭತ್ಯೆ ಹೆಚ್ಚಳವಾಗಿದ್ದು, ಮುಂದಿನ ಡಿಎ ಜನವರಿ 2024 ರಲ್ಲಿ ಏರಿಕೆಯಾಗಬೇಕಿದೆ. ಸದ್ಯ ಜನವರಿಯಲ್ಲಿ ಡಿಎ ಶೇಕಡಾ 4 ರಷ್ಟು ಹೆಚ್ಚಿದರೆ, ಒಟ್ಟು ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪುತ್ತದೆ. ಹೀಗಾದರೆ ವೇತನ ಪರಿಷ್ಕರಣೆ ಮಾಡಬೇಕು. ವೇತನವನ್ನು ಪರಿಷ್ಕರಿಸಲು ಹೊಸ ವೇತನ ಆಯೋಗ ರಚನೆಯಾಗಬೇಕು ಅಥವಾ ವೇತನ ನಿಯಮದಲ್ಲಿ ಬದಲಾವಣೆಯಾಗಬೇಕು.

ವರದಿಗಳ ಪ್ರಕಾರ, 8 ನೇ ವೇತನ ಆಯೋಗ ಜಾರಿಯಾದಲ್ಲಿ ಪ್ರತಿ ವರ್ಷ ವೇತನವನ್ನು ಪರಿಷ್ಕರಣೆಯಾಗುತ್ತದೆ. ಪ್ರಸ್ತುತ, ಪ್ರತಿ 10 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತದೆ. ಪರಿಷ್ಕರಣೆ ಆದಲ್ಲಿ 8 ನೇ ವೇತನ ಆಯೋಗದ ಪ್ರಕಾರ ಉದ್ಯೋಗಿಗಳ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗಬಹುದು. ಅಂದರೆ ನೌಕರರ ಕನಿಷ್ಠ ವೇತನ ಶೇ.44.44ರಷ್ಟು ಏರಿಕೆಯಾಗುತ್ತದೆ ಎನ್ನಲಾಗಿದೆ. ಈ ಪ್ರಕಾರ ಮೂಲ ವೇತನ 18 ಸಾವಿರದಿಂದ 26 ಸಾವಿರಕ್ಕೆ ಹೆಚ್ಚಾಗುವುದು ಕನ್ಫರ್ಮ್.

ಇದನ್ನೂ ಓದಿ: ದ್ವಿತೀಯ PUC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ- ಖಾಸಗಿ ಅಭ್ಯರ್ಥಿಗಳಿಗೆ ಇಲ್ಲಿ ನೋಂದಣಿ ಕಡ್ಡಾಯ !!

Leave A Reply

Your email address will not be published.