Canara bank: ಕೆನರಾ ಬ್ಯಾಂಕ್ ನಲ್ಲಿ ಸಾಲ ಮಾಡಿರೋರಿಗೆ ಬಂತು ಹೊಸ ರೂಲ್ಸ್ !!

Canara Bank: ಕೆನರಾ ಬ್ಯಾಂಕ್ ನಲ್ಲಿ (Canara Bank) ಸಾಲ ಮಾಡಿರೋರಿಗೆ ಹೊಸ ರೂಲ್ಸ್ ಬಂದಿದೆ. ಕೆನರಾ ಬ್ಯಾಂಕ್ ತನ್ನ ಸಾಲದ ದರವನ್ನು ಹೆಚ್ಚಿಸಿರುವುದಾಗಿ ತಿಳಿಸಿದೆ. MCLR (Marginal cost of funds based lending rate) ದರವನ್ನು ಕೆನರಾ ಬ್ಯಾಂಕ್ ಹೆಚ್ಚಿಸಿದೆ. ಎಂ ಎಸ್ ಸಿ ಎಲ್ ಆರ್ 0.05 ಬೇಸಿಸ್ ಪಾಯಿಂಟ್ ಗಳಿಗೆ ಏರಿಕೆಯಾಗಿದೆ. ಈ ರೀತಿ ಎಂ ಸಿ ಎಲ್ ಆರ್ ಹೆಚ್ಚಳದಿಂದಾಗಿ ಸಾಲ ತೆಗೆದುಕೊಂಡವರು ಪಾವತಿಸುವ ಈ ಎಂಐ ದರ ಕೂಡ ಹೆಚ್ಚಳವಾಗುತ್ತದೆ.

ಕೆನರಾ ಬ್ಯಾಂಕ್ ನಲ್ಲಿ ಹೆಚ್ಚಳವಾದ ಎಂಸಿಎಲ್‌ಆರ್ ದರ ಹೀಗಿದೆ. ಒಂದು ತಿಂಗಳ ಎಮ್ ಸಿ ಎಲ್ ಆರ್ ದರ 8.05% ಏರಿಕೆ. ಮೂರು ತಿಂಗಳ ಎಂ ಸಿ ಎಲ್ ಆರ್ ದರ 8.15% ಏರಿಕೆ. ಆರು ತಿಂಗಳ ಎಂ ಸಿ ಎಲ್ ಆರ್ ದರ 8.50% ಏರಿಕೆ. ಒಂದು ವರ್ಷದ ಎಂ ಸಿ ಎಲ್ ಆರ್ ದರ 8.70% ಏರಿಕೆ.

ಆರ್‌ಬಿಐ (RBI) ತನ್ನ ರೆಪೋ ದರ (repo rate) ವನ್ನು ಕೂಡ ಪರಿಷ್ಕರಿಸಿದೆ. ಇದೀಗ ರೆಪೋ ದರ 6.50 ನಷ್ಟು ಇದೆ. ಆದರೆ ಕಳೆದ ಪರಿಷ್ಕೃತ ದರಕ್ಕಿಂತ ಈ ಬಾರಿ ಯಾವುದೇ ವ್ಯತ್ಯಾಸ ಆಗದೆ ಇರುವ ಕಾರಣ ರೆಪೋದರ ಯಥಾ ಸ್ಥಿತಿಯಲ್ಲಿಯೇ ಉಳಿದುಕೊಂಡಿದೆ.
ಆರ್‌ಬಿಐ ತನ್ನ ರೆಪೋ ದರವನ್ನು ಘೋಷಿಸಿದ ನಂತರ ಬ್ಯಾಂಕುಗಳು (banks) ತಮ್ಮಲ್ಲಿನ ಸಾಲದ (Loan) ಹಾಗೂ ಡೆಪಾಸಿಟ್ (deposits) ಮೇಲಿನ ಬಡ್ಡಿ ದರವನ್ನು (interest rate) ಪರಿಷ್ಕರಿಸಿವೆ.

ಆದರೆ ಈ ಬಾರಿ ಬಡ್ಡಿದರ ಪರಿಷ್ಕರಣೆಯಿಂದಾಗಿ ಕೆನರಾ ಬ್ಯಾಂಕ್ ನ (Canara Bank) ಗ್ರಾಹಕರಿಗೆ ಆತಂಕ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಈ ಪರಿಷ್ಕರಣೆಯ ದರ ಗ್ರಾಹಕರ ಸಾಲದ (Loan) ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

Leave A Reply

Your email address will not be published.