‘LPG’ ಗ್ಯಾಸ್ ಯೂಸ್ ಮಾಡೋರು ಮಿಸ್ ಮಾಡ್ದೆ ಈ ಸ್ಟೋರಿ ಓದಿ !!

Lifestyle LPG gas cylinder news everyone should read this story those who using an gas cylinder

LPG Gas Cylinder: ಗ್ಯಾಸ್ ಸಿಲಿಂಡರ್ ಅಡುಗೆ ಮಾಡಲು ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿಯು ಹೌದು. ಗ್ಯಾಸ್ ಲೀಕ್ ಸಂಬಂಧಿತ ಅಪಘಾತಗಳು ಮನೆಯಲ್ಲಿ, ಅಥವಾ ಇನಿತರ ಸ್ಥಳಗಳಲ್ಲಿ ಸಾವು (death) ಮತ್ತು ಗಾಯಗಳಿಗೆ ಕಾರಣ ಆಗಬಲ್ಲದು. ಏಕೆಂದರೆ ಅನಿಲ ಸೋರಿಕೆಯು (Gas Leak) ಬಹಳ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ ಮತ್ತು ಗಮನಿಸದೆ ಬಿಟ್ಟರೆ ಬೆಂಕಿಯ ದೊಡ್ಡ ಸ್ಫೋಟ ಸಹ ಉಂಟಾಗಬಹುದು. ಆದ್ದರಿಂದ ಗ್ಯಾಸ್ ಸಿಲಿಂಡರ್( LPG Gas Cylinder)ಬಳಸೋ ನೀವು, ಅದರ ಸುರಕ್ಷತೆಯ ಬಗ್ಗೆಯೂ ತಿಳಿದುಕೊಳ್ಳೋದು ಅಗತ್ಯವಿದೆ.

ಓರ್ವ ಮಹಿಳೆಯ ಅನುಭವದ ಪ್ರಕಾರ, ಒಂದು ಭಾನುವಾರ ಮಹಿಳೆ ಒಬ್ಬಳು ಸಿಲಿಂಡರ್ ಬದಲಿಸುವಾಗ ಗ್ಯಾಸ್ ವಾಸನೆ ಬಂತು, ಗ್ಯಾಸ್ ಲೀಕ್ ಆಗುತ್ತಿದೆ ಅನ್ನಿಸಿ ಕೂಡಲೇ ರೆಗ್ಯುಲೇಟರ್ ಬಂದ್ ಮಾಡಿ ಗ್ಯಾಸ್ ಏಜೆನ್ಸಿಗೆ ಫೋನ್ ಮಾಡಿದ್ದು, ಆದರೆ ಇವತ್ತು ಭಾನುವಾರ, ರಜೆ, ನಾವು ನಾಳೆ ಬರುತ್ತೇವೆ ಎಂಬ ಉತ್ತರ ಎಲ್ಲಾ ಗ್ಯಾಸ್ ಏಜೆನ್ಸಿಗಳಿಂದ… ಇವರಿಗೆ ಭಾನುವಾರ ಅಂತ ಬರದಿದ್ದರೆ ನಾನು ಗಂಡ ಮಕ್ಕಳಿಗೆ ಊಟ ಹಾಕುವುದು ಬೇಡವೇ!? ಅಡಿಗೆ ಮಾಡುವುದು ಬೇಡವೇ?? ಹಾಗಾದರೆ ತುರ್ತು ಸೇವೆ ಬೇಕಾದರೆ ಏನು ಮಾಡಬೇಕು ಅನ್ನುತ್ತಾ ಚಿಂತಿಸಿದರು.

ನಂತರ ಅವರು ಗೂಗಲ್ ಸರ್ಚ್ ಮಾಡಿದ್ದಾರೆ. ಅಲ್ಲಿ 1906 ನಂಬರ್ ಸಿಕ್ಕಿದೆ. ಈ ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆ ಮಾಡಿದೆ ಕೂಡಲೇ ಆ ಕಡೆಯಿಂದ ಮಹಿಳೆಯೊಬ್ಬಳು ಹಿಂದಿಯಲ್ಲಿ ಮಾತನಾಡಿದ್ದಾರೆ. ಅಡ್ರೆಸ್, ಫೋನ್ ನಂಬರ್ ಎಲ್ಲಾ ಕೇಳಿದರು, ಇನ್ನೊಂದು ಘಂಟೆಯೊಳಗೆ ಓರ್ವ ವ್ಯಕ್ತಿ ನಿಮ್ಮ ಮನೆಗೆ ಭೇಟಿ ಕೊಡುತ್ತಾರೆ ಅಂದು ತಿಳಿಸಿದ್ದಾರೆ.
ಅವರು ಹೇಳಿದಕ್ಕಿಂತ ಅರ್ಧ ಗಂಟೆ ಮೊದಲೇ ಓರ್ವ ಯುವಕ ಬಂದ, ಸಮಸ್ಯೆ ಏನೆಂದು ಕೇಳಿದ್ದಾನೆ. ಆ ಮಹಿಳೆ ಹೇಳಿದ್ದಾರೆ. ಅದಕ್ಕೆ ಆತ ವಾಷರ್ ಹಳೆಯದಾಗಿದೆ ಎಂದು ಹೇಳಿ ಹೊಸದು ಹಾಕಿ, ಚಿಕ್ಕ ಕೆಲಸವಿದು ಹಣವೇನು ಬೇಡ ಎಂದು ಹೇಳಿ ಹೊರಟುಹೋಗಿದ್ದಾನೆ.

ಅವನು ಹೋದ ಅರ್ಧ ಘಂಟೆಯಲ್ಲಿ ಆ ಮಹಿಳೆ ಮತ್ತೇ ಕಾಲ್ ಮಾಡಿ ನಿಮ್ಮ ಸಮಸ್ಯೆ ಬಗೆ ಹರಿಯಿತೇ? ಹುಡುಗ ಹಣವೇನಾದರು ಕೇಳಿದನೇ? ಎಂದು ಕೇಳಿದ್ದಾರೆ. ಆದ್ರೇ ಹಾಗೆ ಯಾವುದೇ ಹಣ ಪಡೆದಿಲ್ಲ. ತಕ್ಷಣವೇ ಪ್ರತಿಸ್ಪಂದಿಸಿದ್ದಕ್ಕೆ ಧನ್ಯವಾದಗಳನ್ನ ತಿಳಿಸಿದ್ದಾರೆ.

ಒಂದು ವೇಳೆ ನಿಮ್ಮ ಮನೆಯಲ್ಲಿ LPG ಗ್ಯಾಸ್ ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತುರ್ತು ಸೇವೆಗೆ ಸಂಪರ್ಕಿಸಲು ಉಚಿತ ಸಹಾಯವಾಣಿ ಸಂಖ್ಯೆ 1906 ಆಗಿದೆ. ನೀವು ಈ ನಂಬರ್ ಗೆ ಯಾವುದೇ ತುರ್ತು ಸಂದರ್ಭದಲ್ಲಿ ಸಂಪರ್ಕಿಸಿದ್ರೇ, ಕೂಡಲೇ ಪ್ರತಿಸ್ಪಂದನೆ ಸಿಗಲಿದೆ.

ಅದಲ್ಲದೆ ಫ್ಯಾಕ್ಟ್ ಚೆಕ್ ಮಾಡಲು ಗೂಗಲ್ ಗೇ ಹೋದರೆ ಅದು ನಿಮ್ಮನ್ನು services.india.gov.in ಕರೆದುಕೊಂಡು ಹೋಗುತ್ತದೆ. ಇದು ಎಲ್ಲಾ ಕಂಪೆನಿಗಳ LPG ಬಳಕೆದಾರರಿಗೆ 24×7 ಸೇವೆ ನೀಡುತ್ತದೆ.

ಇದನ್ನೂ ಓದಿ: ‘ನಾಯಕನ ತೊಡೆ ಮೇಲೆ ಕೂರು, ಇದನ್ನು ತಿನ್ನಲೇಬೆಕು’ ಎಂದು ನನಗೂ ಹೇಳಿದ್ರು !! ಕಹಿ ಅನುಭವಗಳ ತೆರೆದಿಟ್ಟ ಸುಹಾಸಿನಿ

Leave A Reply

Your email address will not be published.