Hamas Terrorists: ಕ್ರೂರತೆಯ ಪರಮಾವಧಿ!!! ಗರ್ಭಿಣಿ ಹೊಟ್ಟೆಯನ್ನು ಸೀಳಿ, ಶಿಶುವಿನ ಶಿರಚ್ಛೇದ ಮಾಡಿದ ಹಮಾಸ್‌ ಉಗ್ರರು!

World news Hamas terrorist cut open pregnant womans stomach beheaded her unborn baby claims idf

Hamas Terrorists: ಹಮಾಸ್‌ ಭಯೋತ್ಪಾದಕರು ಮಾನವೀಯ ನೆಲೆಯನ್ನು ಕೂಡಾ ಮರೆತು ಯುದ್ಧ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಕತ್ತರಿಸಿ ಆಕೆಯ ಮಗುವನ್ನು ಶಿರಚ್ಛೇದ ಮಾಡಿದ್ದಾರೆ ಎಂದು ವರದಿಯಾಗಿದೆ. IDF ಈ ಮಾಹಿತಿಯನ್ನು ಹಂಚಿಕೊಂಡಿದ್ದು, x ಮಾರ್ಗಸೂಚಿ ಇರುವ ಕಾರಣ ಇದರ ಫೋಟೋವನ್ನು ಹಂಚಿಕೊಳ್ಳುತ್ತಿಲ್ಲ ಎಂದು ಪ್ರಕಟಿಸಿದೆ. ʼ

ಕಳೆದ ಹದಿನೇಳು ದಿನಗಳಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಅಪಾರ ಸಾವು ನೋವು, ನಷ್ಟ ಸಂಭವಿಸಿದೆ. ಇಸ್ರೇಲ್‌ ಗಾಜಾ ಮೇಲಿನ ದಾಳಿಯನ್ನು ತೀವ್ರಗೊಳಿಸಿದ್ದರೆ ಇನ್ನೊಂದು ಕಡೆಯಲ್ಲಿ ಹಮಾಸ್‌ ಭಯೋತ್ಪಾದಕರ ಕ್ರೂರ ಕೃತ್ಯ ಅಮಾನವೀಯ ನೆಲೆಯನ್ನು ನುಚ್ಚು ನೂರು ಮಾಡಿದೆ.

ಇವರ ಕೊಲ್ಲುವಿಕೆಯ ಕ್ರೂರತೆ ಎಷ್ಟು ಭಯಾನಕವಾಗಿದೆಯೆಂದರೆ, ಗರ್ಭಿಣಿ ಇಸ್ರೇಲಿ ಮಹಿಳೆಯನ್ನು ಕೂಡಾ ಬಿಡಲಿಲ್ಲ. ಇಸ್ರೇಲ್‌ ರಕ್ಷಣಾ ಪಡೆ (ಐಡಿಎಫ್‌) ಭಯೋತ್ಪಾದಕ ಉಗ್ರಗಾಮಿಗಳು ಗರ್ಭಿಣಿ ಇಸ್ರೇಲಿ ಮಹಿಳೆ ಮತ್ತು ಆಕೆಯ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ವರದಿ ಮಾಡಿದೆ.

ಇದನ್ನೂ ಓದಿ:  Dasara Holiday: ದಸರಾ ರಜೆ ಪ್ರಯಕ್ತ, ರಾಜ್ಯದ ಈ ಸ್ಥಳ ಜನರ ಫೆವರೇಟ್‌!!!

Leave A Reply

Your email address will not be published.