Dasara Holiday: ದಸರಾ ರಜೆ ಪ್ರಯಕ್ತ, ರಾಜ್ಯದ ಈ ಸ್ಥಳ ಜನರ ಫೆವರೇಟ್‌!!!

Karnataka news Dasara holidays huge tourist visits this place

Dasara Holidays: ಮಕ್ಕಳಿಗೆ ದಸರಾ ರಜೆ ಇದ್ದ ಕಾರಣ ಈ ಬಾರಿ ಫ್ಯಾಮಿಲಿ ಟ್ರಿಪ್‌ ಜೋರಾಗಿದೆ. ಶೃಂಗೇರಿ, ಹೊರನಾಡು ದೇವಾಲಯಗಳು ಜನರಿಂದ ತುಂಬಿ ತುಳುಕಿವೆ. ಆಯುಧ ಪೂಜೆ, ವಿಜಯದಶಮಿ ಜೊತೆಗೆ ಶಾಲಾ ಕಾಲೇಜುಗಳಿಗೆ ರಜೆ ಇರುವ ಕಾರಣ ಮಕ್ಕಳ ಖುಷಿ ಪ್ರವಾಸದಲ್ಲಂತೂ ಹೇಳತೀರದು.

ಜಿಲ್ಲೆಯ ಆಕರ್ಷಣೀಯ ಸ್ಥಳಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕವಿಕಲ್‌ ಗಂಡಿ, ಹೊನ್ನಮ್ಮನಹಳ್ಳ, ಝರಿ ಜಲಪಾತ, ಮಾಣಿಕ್ಯಧಾರಾದಲ್ಲಿ ಕಾಲಿಡಲಾಗದಷ್ಟು ಜನ ತುಂಬಿದ್ದಾರೆ. ದಸರಾ ರಜೆಗೆ ಈ ಸ್ಥಳಗಳಿಗೆ ಜನರು ಹೆಚ್ಚು ಭೇಟಿ ನೀಡುತ್ತಿದ್ದಾರೆ.

ಜಿಲ್ಲಾಕೇಂದ್ರ ಚಿಕ್ಕಮಗಳೂರಿನಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿಯೇ ನಡೆಯುತ್ತಿದ್ದು, ಹೋಟೆಲ್‌ಗಳು, ಕಾಫಿಪುಡಿ ಅಂಗಡಿಗಳು, ಅಲ್ಲಲ್ಲಿ ಸಿಗುವ ಡ್ರೈಫ್ರೂಟ್ಸ್‌ ಅಂಗಡಿ ಜನರಿಂದ ತುಂಬಿದ್ದು, ಚಿಕ್ಕಮಗಳೂರು ಜಿಲ್ಲೆಯ ಆರ್ಥಿಕತೆ ಇದರಿಂದ ಚೇತರಿಸಿಕೊಳ್ಳಲಿದೆ ಎಂದು ಹೇಳಬಹುದು.

ಇದನ್ನೂ ಓದಿ: ‘ನಾಯಕನ ತೊಡೆ ಮೇಲೆ ಕೂರು, ಇದನ್ನು ತಿನ್ನಲೇಬೆಕು’ ಎಂದು ನನಗೂ ಹೇಳಿದ್ರು !! ಕಹಿ ಅನುಭವಗಳ ತೆರೆದಿಟ್ಟ ಸುಹಾಸಿನಿ

Leave A Reply

Your email address will not be published.