Suhasini Maniratnam: ‘ನಾಯಕನ ತೊಡೆ ಮೇಲೆ ಕೂರು, ಇದನ್ನು ತಿನ್ನಲೇಬೆಕು’ ಎಂದು ನನಗೂ ಹೇಳಿದ್ರು !! ಕಹಿ ಅನುಭವಗಳ ತೆರೆದಿಟ್ಟ ಸುಹಾಸಿನಿ

Tollywood news actress Suhasini Maniratnam recalls refusing to sit on hero lap during shoot

Suhasini Maniratnam: ಚಿತ್ರರಂಗದಲ್ಲಿ ನಾಯಕ ನಾಯಕಿಯರಿಗೆ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಹಲವಾರು ಸವಾಲುಗಳನ್ನು ಎದುರಿಸಲೇ ಬೇಕು. ಅಂತೆಯೇ ತಮಿಳಿನ ಖ್ಯಾತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರ ಪತ್ನಿ ನಟಿ ಸುಹಾಸಿನಿ ಮಣಿರತ್ನಂ ಅವರು ಇತ್ತೀಚೆಗೆ ಒಂದು ದೃಶ್ಯವನ್ನು ಮಾಡಲು ನಿರಾಕರಿಸಿದ್ದ ವಿಚಾರವನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ.

ಹೌದು, ನಾಯಕನ ಮಡಿಲಲ್ಲಿ ಕುಳಿತು ಅವನು ತಿನ್ನುತ್ತಿದ್ದ ಅದೇ ಐಸ್ ಕ್ರೀಂ ಅನ್ನು ತಿನ್ನಲು ಡೈರೆಕ್ಟರ್‌ ಸುಹಾಸಿನಿಗೆ (Suhasini Maniratnam) ಹೇಳಿದ್ದುದಾಗಿ ಈ ವಿಚಾರವನ್ನ ಅವರು ನೆನಪಿಸಿಕೊಂಡಿದ್ದಾರೆ. ಒಂದು ಉದ್ಯಾನವನದಲ್ಲಿ ಈ ಚಿತ್ರೀಕರಣ ನಡೆದಿತ್ತು. ನನಗೆ ನಾಯಕನ ಮಡಿಲಲ್ಲಿ ಕುಳಿತುಕೊಳ್ಳಲು ಹೇಳಿದರು. ನಾನು ನಿರಾಕರಿಸಿದೆ. ಭಾರತದಲ್ಲಿ 1981 ರಲ್ಲಿ ಯಾವುದೇ ಮಹಿಳೆ ಉದ್ಯಾನವನದಲ್ಲಿ ಪುರುಷನ ಮಡಿಲಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ. ಹಾಗಾಗಿ ನಾನು ಕುಳಿತುಕೊಳ್ಳುವುದಿಲ್ಲ ಎಂದೆ ಎಂದು ಹೇಳಿದರು.

ಚಿತ್ರೀಕರಣದಲ್ಲಿ ನಾಯಕ ಐಸ್ ಕ್ರೀಂ ತಿನ್ನುತ್ತಿದ್ದನು ಮತ್ತು ಅವನು ನನಗೆ ತಿನ್ನಿಸಬೇಕಿತ್ತು. ಅದಕ್ಕೆ ನಾನು ಒಪ್ಪಲಿಲ್ಲ . ನಾನು ಅದೇ ಐಸ್ ಕ್ರೀಮ್ ತಿನ್ನುವುದಿಲ್ಲ. ದೃಶ್ಯವನ್ನು ಬದಲಾಯಿಸಿ, ನನಗೆ ಇನ್ನೊಂದು ಐಸ್ ಕ್ರೀಮ್ ಅನ್ನು ತಂದುಕೊಡಿ ಎಂದು ಹೇಳಿದೆ. ಅದಕ್ಕೆ ನನ್ನ ನೃತ್ಯ ನಿರ್ದೇಶಕರು ಆಶ್ಚರ್ಯಚಕಿತರಾದರು ಎಂದು ಸುಹಾಸಿನಿ ಹೇಳಿದರು.

ಇಂತಹ ಯುದ್ಧಗಳಲ್ಲಿ ಒಬ್ಬಂಟಿಯಾಗಿ ಹೋರಾಡುವುದು ಕಷ್ಟಕರವಾದ ಕಾರಣ ನಾನು ಸೆಟ್‌ನಲ್ಲಿ ನನ್ನ ಪರವಾಗಿ ಇರುವವರನ್ನು ಕಂಡುಕೊಳ್ಳುತ್ತಿದ್ದೆ ಎಂದು ಸುಹಾಸಿನಿ ಹೇಳಿದರು. ಅಂತೆಯೇ ತನ್ನ ಸಹೋದ್ಯೋಗಿ ಶೋಭನಾ ಅವರಿಗೂ ಇದೇ ರೀತಿಯ ಅನುಭವವಾಗಿದೆ ಎಂದು ಸುಹಾಸಿನಿ ಹಂಚಿಕೊಂಡಿದ್ದಾರೆ. ಮಲಯಾಳಂ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಶೋಭನಾ ಅವರು ಒಂದು ದೃಶ್ಯವನ್ನು ಮಾಡಲು ನಿರಾಕರಿಸಿದಾಗ ಸುಹಾಸಿನಿಯಂತೆ ಏಕೆ ವರ್ತಿಸುತ್ತಿದ್ದೀರಿ ಎಂದು ಕೇಳಲಾಯಿತು. ಅದು ನನಗೆ ಇನ್ನೂ ನೆನಪಿದೆ ಎಂದಿದ್ದಾರೆ.

ಇದನ್ನೂ ಓದಿ: ರೇಷನ್ ಕಾರ್ಡ್ ಕುರಿತು ಶಾಕಿಂಗ್ ನಿರ್ಣಯ ಕೈಗೊಂಡ ಸರ್ಕಾರ – 3.26 ಪಡಿತರ ಕಾರ್ಡ್ ರದ್ದು ಮಾಡಲು ಮಹತ್ವದ ನಿರ್ಧಾರ !!

Leave A Reply

Your email address will not be published.