Mangaluru: ಹುಲಿಕುಣಿತದ ವೇಳೆ ಹುಲಿವೇಷಧಾರಿಯೊಬ್ಬ ಬಿದ್ದು ಗಾಯ! ತಪ್ಪಿದ ಭಾರೀ ಅನಾಹುತ!!

Mangaluru news A tiger costumer fell and got injured during the tiger dance latest news

Mangaluru: ಮಂಗಳೂರು ನಗರದಾದ್ಯಂತ ದಸರಾ ಸಂಭ್ರಮದಲ್ಲಿ ಜನ ಮಿಂದೇಳುತ್ತಿದ್ದಾರೆ, ವಿಜೃಂಭಣೆಯಿಂದ ಆಚರಣೆ ನಡೆಯುತ್ತಿದ್ದು, ಇಲ್ಲಿ ಹುಲಿ ಕುಣಿತ ವೇಷ ಪ್ರಮುಖವಾಗಿದೆ. ಆದರೆ ಈ ಹುಲಿವೇಷ ಕುಣಿತದ ಸಂದರ್ಭ ಹುಲಿವೇಷಧಾರಿಯೊಬ್ಬ ಆಯತಪ್ಪಿ ಬಿದ್ದು ಗಾಯಗೊಂಡ ಘಟನೆಯೊಂದು ನಡೆದಿದೆ. ಆಯತಪ್ಪಿ ನೆಲಕ್ಕೆ ಬಡಿದ ಘಟನೆ ನಡೆದಿದೆ.

Mangaluru

ಈ ಘಟನೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಇಂದು( ಮಂಗಳವಾರ) ನಡೆದಿದೆ. ಮುಳಿಹುತ್ಲು ಎಂಬಲ್ಲಿನ ಹುಲಿವೇಷ ತಂಡದ ಕುಣಿತದ ವೇಳೆ ಹುಲಿವೇಷಧಾರಿಯೊಬ್ಬ ರಿವರ್ಸ್‌ ಪಲ್ಟಿ ಹೊಡೆಯಲು ಹೋದಾಗ ಈ ದುರ್ಘಟನೆ ನಡೆದಿದೆ. ತಲೆ ನೆಲಕ್ಕೆ ಬಡಿದು ಕತ್ತು ಉಳುಕಿದ ಪರಿಣಾಮ ಗಾಯವಾಗಿದೆ. ತಕ್ಷಣ ಹುಲಿವೇಷಧಾರಿ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: Hamas Terrorists: ಕ್ರೂರತೆಯ ಪರಮಾವಧಿ!!! ಗರ್ಭಿಣಿ ಹೊಟ್ಟೆಯನ್ನು ಸೀಳಿ, ಶಿಶುವಿನ ಶಿರಚ್ಛೇದ ಮಾಡಿದ ಹಮಾಸ್‌ ಉಗ್ರರು!

Leave A Reply

Your email address will not be published.