Viral video: ದಿಢೀರ್ ಎಂದು ಬೆಂಕಿ ದುರಂತ ಸಂಭವಿಸಿದ್ರೆ ಪಾರಾಗೋದು ಹೇಗೆ ?! ವೈರಲ್ ಆಯ್ತು ಶಿಕ್ಷಕಿಯೊಬ್ಬರು ಮಕ್ಕಳಿಗೆ ಹೇಳಿದ ಪಾಠ

World news Viral news Teacher teaching to children's how to escape from Fire accident viral video

Viral video: ದಿನಂಪ್ರತಿ ಅದೆಷ್ಟೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡುತ್ತಲೇ ಇರುತ್ತದೆ. ಇದೀಗ, ವೈರಲ್ ಆಗಿರುವ ವೀಡಿಯೋವೊಂದು(Viral Video)ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಅಗ್ನಿ ಅವಘಡದಂತಹ ಸಂದರ್ಭದಲ್ಲಿ ಮಕ್ಕಳು ಹೇಗೆ ಧೈರ್ಯವಾಗಿ ಎದುರಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ಶಿಕ್ಷಕಿಯೊಬ್ಬರು ಮಕ್ಕಳಿಗೆ ಹೇಳಿಕೊಟ್ಟ ರೀತಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಬೆಂಕಿ ಆಕಸ್ಮಿಕದಂತಹ ಅವಘಡ ಸಂಭವಿಸಿದಾಗ ಹೇಗೆ ಅಪಾಯದಿಂದ ಪಾರಾಗಬೇಕು ಎಂಬುದನ್ನು ವಿವರಿಸಲಾಗಿದೆ.

ಅಗ್ನಿ ಅವಘಡದ ವೇಳೆ ಮಕ್ಕಳು ಹೇಗೆ ಸಂಕಷ್ಟದ ಸ್ಥಿತಿಯಿಂದ ಧೈರ್ಯವಾಗಿ ಪಾರಾಗಬೇಕು ಎಂಬುದನ್ನು ಈ ವಿಡಿಯೋದಲ್ಲಿ ಮನದಟ್ಟಾಗುವಂತೆ ಚಿತ್ರಿಸಲಾಗಿದೆ. ಏಕಾಏಕಿ ಬೆಂಕಿ ಬಿದ್ದು, ಸೈರನ್ ಕೂಗಲಾರಂಭಿಸಿದಾಗ ಪುಟಾಣಿ ಮಕ್ಕಳು ಕರವಸ್ತ್ರದಲ್ಲಿ ಮುಗು ಮುಚ್ಚಿಕೊಂಡು ಒಬ್ಬೊಬ್ಬರಾಗಿ ಘಟನಾ ಸ್ಥಳದಿಂದ ಎಚ್ಚರದಿಂದ ಪಾರಾಗುತ್ತಾರೆ. ಶಾಲೆಯಲ್ಲಿ ಶಿಕ್ಷಕರು ಅಪಾಯಕಾರಿ ಘಟನೆಗಳು ಸಂಭವಿಸಿದಾಗ ಹೇಗೆ ಪಾರಾಗಬೇಕು ಎಂಬುದನ್ನು ಹೇಳಿಕೊಡುವ ಮೂಲಕ ಮಕ್ಕಳಿಗೆ ಜಾಗೃತಿ ಮೂಡಿಸಿದರೆ ಎಂತಹ ಕಷ್ಟದ ಪರಿಸ್ಥಿತಿ ಎದುರಾದರು ಬಚಾವ್ ಆಗಬಹುದು.

ಇದನ್ನೂ ಓದಿ: ಬೀಡಿ ಕಂಪೆನಿ ಮಾಲಿಕರ ಮನೆಗೆ ಐಟಿ ರೈಡ್ – ಇದೇ ಕಾರಣಕ್ಕೆ ದಾಳಿ!

Leave A Reply

Your email address will not be published.