Bengalore: ಬೆಂಗಳೂರಿನ ಹಿಂದೂಗಳಿಗೆ ಬಿಗ್ ಶಾಕ್- ಪೋಲೀಸ್ ಇಲಾಖೆಯಿಂದ ಹೊರಬಿತ್ತು ಮಹತ್ವದ ಆದೇಶ

Bengalore news Shocking news for Hindus Ganesh procession banned by police department latest news

Bengalore: ಗೌರಿ ಗಣೇಶ ಹಬ್ಬ ಮುಗಿದು ಒಂದು ತಿಂಗಳಾಗುತ್ತಾ ಬರುತ್ತಿದೆ. ಈಗಾಗಲೇ ಹಲವಡೆ ಗಣೇಶ ಮೂರ್ತಿಯ ವಿಸರ್ಜನೆ ಆಗಿದೆ. ಕೆಲವೆಡೆ ಭಾರಿ ವಿಜೃಂಭಣೆಯಿಂದ ಮೂರ್ತಿ ವಿಸರ್ಜನೆ ನಡೆಯುತ್ತಿದ್ದು ಅಲ್ಲಲ್ಲಿ ಸಂಭ್ರಮದ ಆಚರಣೆಗಳು ಕಂಡುಬರುತ್ತಿದೆ. ಆದರೆ ಇದೀಗ ಈ ವಿಚಾರವಾಗಿ ಬೆಂಗಳೂರಿನ(Bengalore) ಜನತೆಗೆ ಪೊಲೀಸ್ ಇಲಾಖೆಯ ಬಿಗ್ ಶಾಕ್ ನೀಡಿದೆ.

ಹೌದು, ಬೆಂಗಳೂರಿನ ಹಿಂದೂ ಬಾಂಧವರಿಗೆ ಪೋಲೀಸ್ ಇಲಾಕೆಯು ಬಿಗ್ ಶಾಕ್ ನೀಡಿದ್ದು, ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ಹಾಗೂ ಡಿಜೆ ಡ್ಯಾನ್ಸ್‌ಗೆ ಅನುಮತಿ ನೀಡದಿರಲು ಬೆಂಗಳೂರು ನಗರ ಪೊಲೀಸ್‌ ಇಲಾಖೆಯು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಣೇಶ ಹಬ್ಬದ ವೇಳೆ ಸಾಲು ಸಾಲು ಧಾರ್ಮಿಕ ಅವಘಡಗಳು ಹಾಗೂ ಗಲಾಟೆ ಮತ್ತು ಕೊಲೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.

Bengalore

ಅಂದಹಾಗೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಹೋಗುತ್ತಿದ್ದಾಗ, ಡ್ಯಾನ್ಸ್ ಮಾಡುವ ವಿಚಾರಕ್ಕೆ ಗಲಾಟೆ ನಡೆದು ಕೊರಿಯರ್ ಬಾಯ್‍ಗೆ ಡ್ರ್ಯಾಗರ್‌ನಿಂದ ಹೊಟ್ಟೆಗೆ ಇರಿದು ಕೊಲೆ (Murder) ಮಾಡಲಾಗಿತ್ತು. ಮತ್ತೊಂದೆಡೆ ಮೆರವಣಿಗೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಗಳು ನಡೆದಿದ್ದವು. ಹೀಗಾಗಿ ಗಣೇಶ ಮೆರವಣಿಗೆ (Ganesh Visarjan Procession) ವೇಳೆ ನಗರದಲ್ಲಿ ನಡೆದ ಸಾಲು ಸಾಲು ಘಟನೆಗಳ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು ಇನ್ಮುಂದೆ ಗಣೇಶ ಮೆರವಣಿಗೆಗೆ ಅನುಮತಿ ನೀಡದಂತೆ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ನಗರದ ಎಲ್ಲಾ ಪೊಲೀಸರಿಗೂ ಸೂಚನೆ ನೀಡಿದ್ದಾರೆ.

ಈಗಲೂ ಗಣೇಶ ಹಬ್ಬದ ಮೆರವಣಿಗೆ ಹಾಗೂ ಡಿಜೆಗೆ ಅನುಮತಿ ಕೋರಿ ಹಲವು ಸಂಘಟನೆಗಳು ಹಾಗೂ ಯುವಕರು ಬರುತ್ತಿದ್ದಾರೆ. ಆದರೆ, ಮೆರವಣಿಗೆ ವೇಳೆ ನಡೆದ ಗಲಾಟೆ, ಕೊಲೆ ಹಿ‌ನ್ನಲೆಯಲ್ಲಿ ಇನ್ನುಮುಂದೆ ಅನುಮತಿ ಕೊಡುತ್ತಿಲ್ಲ. ಒಂದು ವೇಳೆ ಅನುಮತಿ ನಿರಾಕರಣೆ ನಡುವೆಯೂ ಸಂಘಟನೆಗಳು ಅಥವಾ ಯುವಕರು ಗಣೇಶ ಮೂರ್ತಿಮೆರವಣಿಗೆ ಮಾಡಿದರೆ ಅಥವಾ ಗಲಾಟೆ ನಡೆದಲ್ಲಿ ಆಯಾ ಠಾಣಾ ಇನ್ಸ್ಪೆಕ್ಟರ್ ಹೊಣೆಗಾರರಾಗಿರುತ್ತಾರೆ. ಈ ಬಗ್ಗೆ ನೇರವಾಗಿ ಆಯಾ ಠಾಣಾ ಇನ್ಸ್ಪಪೆಕ್ಟರ್ ಮೇಲೆ ಕ್ರಮ ಜರುಗಿಸೋದಾಗಿ ಪೊಲೀಸ್‌ ಕಮೀಷನರ್ ತಿಳಿಸಿದ್ದಾರೆ.

ಇದನ್ನೂ ಓದಿ: Indian Congress: ಇಸ್ರೇಲ್-ಪ್ಯಾಲೇಸ್ತೀನ್ ಯುದ್ಧದಲ್ಲಿ ಪ್ಯಾಲೇಸ್ತೀನ್ ಗೆ ನಮ್ಮ ಬೆಂಬಲ ಎಂದ ಕಾಂಗ್ರೆಸ್ !! ಭಾರೀ ಅಚ್ಚರಿ ಮೂಡಿಸಿದ ನಡೆ

Leave A Reply

Your email address will not be published.