Fact check: ಕ್ರೈಸ್ತ ಮಹಿಳೆಯ ಮೇಲೆ ಹಿಂದೂಗಳಿಂದ ಅತ್ಯಾಚಾರ : ವೈರಲ್ ವಿಡಿಯೊದ ಸತ್ಯಾಸತ್ಯತೆ ಫ್ಯಾಕ್ಟ್ ಚೆಕ್ !

Fact check Viral Video Of Gangrape In Bengaluru In 2021 Falsely Shared As Manipur

 

Fact check: ಹಿಂದೂಗಳು ಮಣಿಪುರದಲ್ಲಿ (Manipur Violence) ಕ್ರೈಸ್ತ ಮಹಿಳೆಯೋರ್ವಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಹೇಳಿಕೆ ಜೊತೆಗೆ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡದೆ. ಆದರೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು BOOM ಪ್ಯಾಕ್ಟ್‌ ಚೆಕ್‌ (Fact check ) ವರದಿ ಮಾಡಿದ್ದು, ಇದು 2021 ರಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ನಡೆದ ಘಟನೆಯ ವೀಡಿಯೋ ಎಂದು ಹೇಳಲಾಗಿದೆ.

ಈ ವೀಡಿಯೋ ಮಣಿಪುರದಿಂದ ಕ್ರಿಶ್ಚಿಯನ್‌ ಹುಡುಗಿಯನ್ನು ಅಪಹರಿಸಿದ್ದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆಕೆ ಸಹಾಯಕ್ಕಾಗಿ ಅಂಗಲಾಚುತ್ತಿರುವಾಗ ಹಿಂದೂ ಪುರುಷರು ಆಕೆಯ ಬಟ್ಟೆಗಳನ್ನು ಹರಿದಾಡುತ್ತಿರುವುದು, ಈ ವೀಡಿಯೋ ಹಿಂದೂ ಪುರುಷರೇ ಬಿಟ್ಟಿರುವುದು, ಅವರು ಆಕೆ ಮೇಲೆ ಅತ್ಯಾಚಾರ ನಡೆಸಲಾಗಿದೆ. ಮಣಿಪುರದ ಹಿಂದೂಗಳಿಗೆ ಆಡಳಿತದ ಬೆಂಬಲವಿದೆ ಎಂಬ ಬರಹದೊಂದಿಗೆ ಈ ವೀಡಿಯೋ ಶೇರ್‌ ಮಾಡಲಾಗಿದೆ.

ಆದರೆ ಈ ವೀಡಿಯೋವನ್ನು ಪರಿಶೀಲನೆ ಮಾಡಿದಾಗ ಸಂತ್ರಸ್ತೆ ಬಂಗಾಳಿ ಭಾಷೆಯಲ್ಲಿ ಮಾತನಾಡುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಆಕೆ ಮಣಿಪುರದವಳಲ್ಲ ಎಂದು ಇದರಿಂದ ತಿಳಿಯಬಹುದು.

ವರದಿಯ ಪ್ರಕಾರ, ಬಾಂಗ್ಲಾದೇಶ ಮತ್ತು ಭಾರತದ ನಡುವೆ ಕಾರ್ಯನಿರ್ವಹಿಸುತ್ತಿರುವ ಕಳ್ಳಸಾಗಣೆ ದಂಧೆಯ ಕಿಂಗ್‌ಪಿನ್ ಅಶ್ರಫುಲ್ ಮೊಂಡಲ್ ಅಲಿಯಾಸ್ ಬಾಸ್ ರಫಿ ಮತ್ತು ಅಬ್ದುರ್ ರೆಹಮಾನ್ ಢಾಕಾದ ನ್ಯಾಯಾಲಯದಲ್ಲಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಐವರು ಪುರುಷರು ಮಹಿಳೆಯೊಬ್ಬರ ಮೇಲೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಭಯಾನಕ ವಿಡಿಯೊವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಟಿವಿ9 ವರದಿ ಮಾಡಿದೆ.

ಮೇ, 2021ರ ಎನ್‌ಡಿಟಿವಿ ವರದಿಯ ಪ್ರಕಾರ, ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಯಿತು. ವಿಡಿಯೊದ ದೃಶ್ಯಗಳಲ್ಲಿ “ಆರೋಪಿಗಳು ಮಹಿಳೆಗೆ ಚಿತ್ರಹಿಂಸೆ ನೀಡುತ್ತಿರುವುದನ್ನು ತೋರಿಸಿದೆ. ಆಕೆಯ ಗುಪ್ತಾಂಗಕ್ಕೆ ಬಾಟಲಿ ತುರುಕಿಸಿ, 22 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿತ್ತು. ಬೆಂಗಳೂರು ಪೊಲೀಸರು ಆರೋಪಿ ಬಂಧಿಸಿದ್ದಾರೆ ‘ಐದು ವಾರಗಳ ಅಲ್ಪಾವಧಿಯಲ್ಲಿ’ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ವರದಿ ಹೇಳಿದೆಯೆಂದು ಟಿವಿ9 ಕನ್ನಡ ಮಾಧ್ಯಮ ವರದಿ ಮಾಡಿದೆ.

ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Bus Stand Theft: ಬೆಂಗಳೂರಿನಲ್ಲಿ ಬಸ್‌ಸ್ಟ್ಯಾಂಡ್‌ ನಾಪತ್ತೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌, ನಾಪತ್ತೆ ರಹಸ್ಯ ಬಯಲು!!!

Leave A Reply

Your email address will not be published.