Intresting news: ನಿಮ್ಮ ಕಾರು ಬೈಕುಗಳಲ್ಲಿ ಇರುವ ಮೂರನೆಯ ಬ್ರೇಕಿನ ಬಗ್ಗೆ ನಿಮಗೆ ಗೊತ್ತಾ ? ಕಾರು ಬೈಕಲ್ಲಿ ಇರುವ ಮೂರನೇ ಬ್ರೇಕ್ ಎಲ್ಲಿದೆ ಗೊತ್ತಾ ?!

Intresting news Did you know about the third brake on your car and bike here is detail

Intresting news : ಇತ್ತೀಚಿನ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಎಲ್ಲಾ ವಾಹನಗಳನ್ನು ಚಲಾಯಿಸುವುದು ಗೊತ್ತು. ಅದು ದ್ವಿಚಕ್ರ ವಾಹನವಾಗಲಿ ಅಥವಾ ಇತರ ಸಾಗಾಟದ ದೊಡ್ಡ ವಾಹನಗಳಾಗಲಿ, ಒಟ್ಟಾರೆ ವಾಹನಗಳು ನಮ್ಮ ದಿನನಿತ್ಯದ ತ್ವರಿತ ಸಂಪರ್ಕ ಸಾಧನಗಳಾಗಿವೆ. ನಾವಿವತ್ತು ವಾಹನಗಳಲ್ಲಿ ಇರುವ ಒಂದು ವಿಶೇಷ ಬ್ರೇಕ್ ನ ಬಗ್ಗೆ ಹೇಳಲಿದ್ದೇವೆ(Intresting news). ಇದುವೇ ವಾಹನಗಳಲ್ಲಿ ಇರುವ ಮೂರನೆಯ ಬ್ರೇಕು. ವಾಹನದಲ್ಲಿ ಇರೋದು ಎರಡೇ ಎರಡು ಬ್ರೇಕುಗಳು. ಇದ್ಯಾವುದೋ ಈ ಮೂರನೆಯ ಬ್ರೇಕ್ ಎಂದು ಆಶ್ಚರ್ಯ ಪಡುತ್ತಿದ್ದೀರಾ?

ಹೌದು, ವಾಹನಗಳಲ್ಲಿ ಮೂರನೆಯ ಬ್ರೇಕ್ ಇದೆ. ಎಲ್ಲರಿಗೂ ತಿಳಿದಿರುವಂತೆ ದ್ವಿಚಕ್ರ ವಾಹನದಲ್ಲಿ – ಅಂದ್ರೆ ಬೈಕ್ ಸ್ಕೂಟರ್ ಇತ್ಯಾದಿಗಳಲ್ಲಿ, ಹಿಂದಿನ ಚಕ್ರಕ್ಕೆ ಅಪ್ಲೈ ಆಗುವ ಬ್ರೇಕ್ ಕಾಲಿನಲ್ಲಿ (Leg Break) ಇರುತ್ತದೆ. ಅಲ್ಲದೆ ಫ್ರಂಟ್ ಬ್ರೇಕ್ ಅನ್ನು ಬಲಗೈಯ ಮೂಲಕ ಅಪ್ಲೈ ಮಾಡಲಾಗುತ್ತದೆ. ಹೀಗಾಗಿ ಟೂ ವೀಲರ್ ಗೆ ಬ್ರೇಕ್ ಅಪ್ಲೈ ಮಾಡಲು ಇರೋದೇ ಈ ಎರಡು ಬ್ರೇಕುಗಳು.
ಆದರೆ, ಕಾರಿನಲ್ಲಿ ಲೆಗ್ ಬ್ರೇಕ್ ಇದ್ದು ಅದನ್ನು ಒತ್ತಿದರೆ ಅದು ಒಟ್ಟಾರೆ ಚಲಿಸುತ್ತಿರುವ ಕಾರನ್ನು ತಡೆದು ನಿಲ್ಲಿಸಬಲ್ಲದು. ಡಿಸ್ಕ್ ಬ್ರೇಕ್, ಹೈಡ್ರಾಲಿಕ್ ಬ್ರೇಕ್, ಡ್ರಮ್ ಬ್ರೇಕ್, ಏರ್ ಬ್ರೇಕ್, ವ್ಯಾಕ್ಯೂಮ್ ಬ್ರೇಕ್ ಇತ್ಯಾದಿ ವಿವಿಧ ತರಹದ ಬ್ರೇಕ್ ಗಳು ಇದ್ದರೂ ಬ್ರೇಕ್ ಹಾಕಲು ಇರೋದು ಎರಡೇ ವಿಧಾನ. ಒಂದು, ಕಾಲಿನಿಂದ ಪೆಡಲ್ ಒತ್ತಿ ಬ್ರೇಕ್ ಹಾಕುವುದು. ಮತ್ತೊಂದು, ಪಾರ್ಕಿಂಗ್ ಸಂದರ್ಭ ಹಾಕುವ ಹ್ಯಾಂಡ್ ಬ್ರೇಕ್. ಹಾಗಾದ್ರೆ ಮೂರನೆಯ ಬ್ರೇಕ್ ಎಲ್ಲಿದೆ ಎಂದು ಕೇಳುತ್ತಿದ್ದೀರಾ?

‘ ಇಂಜಿನ್ ಬ್ರೇಕ್ ‘- ಬಳಕೆ ಹೇಗೆ ?
ಬ್ರೇಕುಗಳು ವಾಹನದ ವೇಗವನ್ನು ಕಡಿಮೆ ಮಾಡಲು ಬಳಸಲಾಗುವ ಸಾಧನಗಳು. ಬೈಕಿನಲ್ಲಿ ಮತ್ತು ಕಾರಿನಲ್ಲಿ ಕೂಡಾ ಮೂರನೆಯ ಸಾಧನ ಒಂದಿದೆ. ಅದನ್ನು ಬ್ರೇಕಿನಂತೆ ಬಳಸಲಾಗುತ್ತದೆ. ಹೌದು, ವಾಹನ ಹೋಗುತ್ತಿರುವಾಗ ವೇಗವನ್ನು ಕಮ್ಮಿ ಮಾಡಲು ಬಳಸುವ ಇನ್ನೊಂದು ಬ್ರೇಕಿನ ಹೆಸರು ‘ಇಂಜಿನ್ ಬ್ರೇಕ್ ‘. ಇಂಜಿನ್ ವಾಹನವನ್ನು ಮುಂದೆ ಕೊಂಡೊಯ್ಯಲು ಮಾತ್ರ ಸಹಾಯ ಮಾಡೋದಿಲ್ಲ. ವಾಹನದ ವೇಗವನ್ನು ಕಡಿಮೆ ಮಾಡಲು ಮತ್ತು ಸ್ಥಿರ ಮಾಡಲು ಕೂಡಾ ಸಹಾಯ ಮಾಡುತ್ತದೆ. ಗಾಡಿಯ ಗೇರ್ ಅನ್ನು ಸರಿಯಾಗಿ ಹಾಕಿ ವೇಗವನ್ನು ಕಡಿಮೆ ಮಾಡಬಹುದು. ಉದಾಹರಣೆಗೆ 5ಟಾಪ್ ಗೇರ್ ನಲ್ಲಿರುವ ವಾಹನವನ್ನು ಮೂರನೇ ಗೇರಿಗೆ ಬದಲಾಯಿಸಿದರೆ ವಾಹನದ ವೇಗ ಕಮ್ಮಿಯಾಗುತ್ತದೆ. ಮತ್ತಷ್ಟು ಕೆಳಹಂತಕ್ಕೆ ಬಂದರೆ ಗಾಡಿಯ ವೇಗ ಇನ್ನಷ್ಟು ತಗ್ಗುತ್ತದೆ.

ಇದೇ ಕಾರಣಕ್ಕೆ ಹೇಳೋದು, ವಾಹನವನ್ನು ನ್ಯೂಟ್ರಲ್ ನಲ್ಲಿ ಓಡಿಸುವಾಗ ಇಳಿಜಾರಿನಲ್ಲಿ ಓಡಿಸಬಾರದು ಎಂದು. ಗೇರ್ ನಲ್ಲಿದ್ದು, ಇಂಜಿನ್ ಆನ್ ಇದ್ದರೆ ಆಗ ವಾಹನ ಕಂಟ್ರೋಲ್ ನಲ್ಲಿ ಇರುತ್ತೆ ಅನ್ನೋದು ಇದರ ಹಿಂದೆ ಇರೋ ಲೆಕ್ಕಾಚಾರ. ಅಷ್ಟೇ ಅಲ್ಲದೆ, ವಾಹನಗಳನ್ನು ಪಾರ್ಕ್ ಮಾಡುವಾಗ ಕೂಡಾ ನಾವು ಗೇರ್ ನಲ್ಲಿ ನಿಲ್ಲಿಸುತ್ತೇವೆ. ಆಗ ಕೂಡಾ ನಾವು ಈಗ ಹೇಳಿದ ‘ಇಂಜಿನ್ ಬ್ರೇಕಿಂಗ್ ‘ ಅನ್ನು ಬ್ರೇಕ್ ಥರ ಬಳಸುತ್ತೇವೆ. ಕಾರಿನ ಎಂಜಿನ್ ಅನ್ನು ಬ್ರೇಕಿನ ಥರ ಬಳಸುವಾಗ ಅಕ್ಸೇಲೆರೇಟರ್ ನ ಪಾಲು ಮಹತ್ವದ್ದು. ಅದರ ಬಗ್ಗೆ ಸವಿಸ್ತಾರವಾಗಿ ಮುಂದಿನ ಭಾಗದಲ್ಲಿ ತಿಳಿದುಕೊಳ್ಳೋಣ.

ಇದನ್ನೂ ಓದಿ: Bus Stand Theft: ಬೆಂಗಳೂರಿನಲ್ಲಿ ಬಸ್‌ಸ್ಟ್ಯಾಂಡ್‌ ನಾಪತ್ತೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌, ನಾಪತ್ತೆ ರಹಸ್ಯ ಬಯಲು!!!

Leave A Reply

Your email address will not be published.