Vehicle rules: ವಾಹನಗಳನ್ನು ನ್ಯೂಟ್ರಲ್’ಗೆ ಹಾಕಿ ಇಳಿಜಾರಿನಲ್ಲಿ ಓಡಿಸಬಹುದಾ, ನಿಮಗೆ ಗೊತ್ತಿಲ್ಲದ ಹೊಸ ರೂಲ್ಸ್ !

Vehicle new rules: Can vehicles be put in neutral and driven on slopes here is detail

Vehicle rules: ಇಂಧನಗಳು ಭಾರಿ ಬೆಲೆ ಬಾಳುವಂತದ್ದು. ಹಾಗಾಗಿ ಜನರು ಒಂದಲ್ಲ ಒಂದು ಐಡಿಯಾಗಳನ್ನು ಬಳಸಿ ಇಂಧನ ಮಿತವ್ಯಯ ಮಾಡಲು ಕಾಯುತ್ತಿರುತ್ತಾರೆ. ಕೆಲವು ಜನರು ಇಳಿಜಾರಿನಲ್ಲಿ ವಾಹನ ಚಲಾಯಿಸುವಾಗ, ವಾಹನಗಳನ್ನು ನ್ಯೂಟ್ರಲಿನಲ್ಲಿಟ್ಟು ಓಡಿಸುವುದಿದೆ. ಮತ್ತೆ ಕೆಲವರು ಇಂಜಿನಲ್ಲಿ ಆಫ್ ಮಾಡಿ ಪೂರ್ತಿ ನ್ಯೂಟ್ರಲಿನಲ್ಲಿ ಗಾಡಿ ಚಲಾಯಿಸಿ ಪೆಟ್ರೋಲು ಡೀಸೆಲ್(Petrol-Desel) ಉಳಿಸಲು ನೋಡುತ್ತಾರೆ. ಇಂಧನ ಉಳಿಸುವ ನೆಪದಲ್ಲಿ ಸುರಕ್ಷತೆಯನ್ನು ಎಷ್ಟೋ ಸಲ ಜನರು ಮರೆಯುವುದಿದೆ. ಹಾಗಾದರೆ ಇಳಿಜಾರಿನಲ್ಲಿ ವಾಹನ ಓಡಿಸುವಾಗ ಯಾವ ಗೇರಿನಲ್ಲಿ ಹೋಗಬೇಕು ಅಥವಾ ನ್ಯೂಟ್ರಲ್ ನಲ್ಲಿ ಹೋಗಬಹುದಾ ಅಥವಾ ಪೂರ್ತಿ ಇಂಜಿನ್ ಆಫ್ ಮಾಡಿ ನ್ಯೂಟ್ರನ್ ನಲ್ಲಿ ಹೋದರೆ ಹೇಗೆ ಮುಂತಾದ ಎಲ್ಲಾ ಪ್ರಶ್ನೆಗಳಿಗೂ ಇವತ್ತು ಉತ್ತರ ನೀಡಲಿದ್ದೇವೆ(Vehicle rules).

ಉದಾಹರಣೆಗೆ-1: ಈಗ ಗಾಡಿ ಇಳಿಜಾರಿನಲ್ಲಿ ಸಾಗಬೇಕಿದೆ. ಇಂಜಿನ್ ಆನ್ ಇರುತ್ತದೆ. ಆದ್ರೆ ವಾಹನವನ್ನು ನ್ಯೂಟ್ರಲ್‌ಗೆ ಹಾಕ್ತೀರಾ ಅಂದುಕೊಳ್ಳಿ. ಹೀಗೆ ಬದಲಾಯಿಸುವುದರಿಂದ ಎಂಜಿನ್‌ಗೆ ಹೆಚ್ಚಿನ ಇಂಧನದ ಹರಿವು ನಿಲ್ಲುತ್ತದೆ, ವಾಹನವು ಐಡ್ಲಿಂಗ್ ಸ್ಥಿತಿಯಲ್ಲಿ ಇರುತ್ತದೆ. ಇಲ್ಲಿ ಸಣ್ಣ ಪ್ರಮಾಣದ ಇಂಧನದ ಉಳಿತಾಯ ಆಗುತ್ತದೆ. ಆದ್ರೆ, ವಾಹನ ನ್ಯೂಟ್ರಲ್ ನಲ್ಲಿ ಇಡುವುದರಿಂದ ವಾಹನಕ್ಕೆ ಸಾಮಾನ್ಯ ಬ್ರೇಕ್ ಗಳು ಮಾತ್ರ ಕಂಟ್ರೋಲ್. ಇಂಜಿನ್ ಗೇರಿನಲ್ಲಿ ಇದ್ದಾಗ ಅದೊಂದು ರೀತಿಯಲ್ಲಿ ಬ್ರೇಕಿನ ತರ ಕೆಲಸ ಮಾಡುತ್ತದೆ. ನ್ಯೂಟ್ರಲ್ ನಲ್ಲಿ ಗಾಡಿ ಓಡುತ್ತಿರುವಾಗ, ಇಂಜಿನ್ ಆನ್ ನಲ್ಲೇ ಇದ್ದರೆ ಅತ್ತ ಪೆಟ್ರೋಲ್ ಕೂಡ ಖರ್ಚಾಗುತ್ತದೆ. ಈ ಸಂದರ್ಭದಲ್ಲಿ ವಾಹನಕ್ಕೆ ಇಂಜಿನ್ ಬ್ರೇಕಿಂಗ್ ಸಿಗದ ಕಾರಣ ಕೇವಲ ಸಾಮಾನ್ಯ ಬ್ರೇಕ್ ಅನ್ನು ಮಾತ್ರ ಅವಲಂಬಿಸಬೇಕಾಗುತ್ತದೆ ಎಷ್ಟೋ ಸಲ ಇತರ ಗಾಡಿ ಚಲಾಯಿಸುವುದರಿಂದ ಅಪಘಾತಗಳಾಗುವ ಸಂಭವನೀಯತೆ ಹೆಚ್ಚು. ಹಾಗಾಗಿ ಇಳಿಜಾರಿನಲ್ಲಿ ಈ ರೀತಿ ಗಾಡಿ ಓಡಿಸಬೇಡಿ.

ಉದಾಹರಣೆಗೆ-2: ಇಲ್ಲಿ ಇಂಜಿನ್ ಆಫ್ ಮಾಡಲಾಗಿರುತ್ತದೆ ಮತ್ತು ಗಾಡಿಯನ್ನು ನ್ಯೂಟ್ರಲ್ ಗೆ ಹಾಕಲಾಗಿರುತ್ತದೆ. ಈ ರೀತಿ ಪೆಟ್ರೋಲ್ ಉಳಿಸಲು ಹೋಗಿ ಇಳಿಜಾರಿನಲ್ಲಿ ವಾಹನ ಚಲಾಯಿಸಿದರೆ ಅತ್ತ ಪೆಟ್ರೋಲ್ ಏನೋ ಉಳಿಯುತ್ತದೆ. ಆದರೆ ಬ್ರೇಕಿಂಗ್ ವಿಷಯಕ್ಕೆ ಬಂದಾಗ ಇಂಜಿನ್ ಬ್ರೇಕಿಂಗ್ ವಾಹನಕ್ಕೆ ಸಿಗದೇ ವಾಹನವು ಅಡ್ಡಾದಿಡ್ಡಿಯಾಗಿ ವೇಗ ಪಡೆದುಕೊಂಡು ನಿಯಂತ್ರಣಕ್ಕೆ ಸಿಗದೇ ಅಪಘಾತವುಗಳಾಗುವುದು ತೀರಾ ಸಾಮಾನ್ಯ. ಒಂದು ವೇಳೆ ತಕ್ಷಣ ಗಾಡಿಯನ್ನು ಗೇರಿಗೆ ಹಾಕಬೇಕಾದರೂ ಇಂಜಿನ್ ಆನ್ ಇರುವುದಿಲ್ಲ. ಇಂಜಿನ್ ಆನ್ ಮಾಡಿ ನಂತರ ಗಾಡಿಯನ್ನು ಗೇರಿಗೆ ಹಾಕುವಷ್ಟರಲ್ಲಿ ಅವಘಡ ಸಂಭವಿಸಿ ಹೋಗುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ನ್ಯೂಟ್ರಲಿನಲ್ಲಿ ಇಟ್ಟು, ವಾಹನದ ಇಂಜಿನ್ ಆಫ್ ಮಾಡಿ ಯಾವತ್ತೂ ವಾಹನ ಚಲಾಯಿಸಬೇಡಿ. ಅದೂ ಚಾರ್ಮಾಡಿ ಘಾಟ್ ನಂತಹ ತೀರ ಸ್ಲೋಪ್ ನಲ್ಲಿ ಗಾಡಿ ಚಲಾಯಿಸುವಾಗ ಯಾವತ್ತೂ ಹೀಗೆ ಮಾಡಬೇಡಿ. ಪೆಟ್ರೋಲ್ ಗಿಂತ ನಿಮ್ಮ ಮತ್ತು ನಿಮ್ಮ ಕುಟುಂಬದವರ ಸುರಕ್ಷತೆ ತುಂಬಾ ಬೆಲೆ ಬಾಳುವಂತದ್ದು.

ಇದನ್ನೂ ಓದಿ: Supreme court: ಮನೆಯ ಆಸ್ತಿ ಮಾರಲು ಹಿಂದೂಗಳಿಗೆ ಬಂತು ಹೊಸ ರೂಲ್ಸ್- ಕೋರ್ಟ್ ತೀರ್ಪು ಕೇಳಿ ಕುಟುಂಬದವರೆಲ್ಲ ಶಾಕ್ !!

ಹಾಗಾದರೆ ಇಳಿಜಾರಿನಲ್ಲಿ ಯಾವ ರೀತಿಯಲ್ಲಿ ವಾಹನ ಚಲಾಯಿಸಬೇಕು ಎನ್ನುವುದನ್ನು ಇಲ್ಲಿ ನೋಡೋಣ.
* ಇಳಿಜಾರಿನಲ್ಲಿ ಹೋದಾಗ ಯಾವುದೇ ಸಂದರ್ಭದಲ್ಲಿಯೂ ನ್ಯೂಟ್ರಲ್ ನಲ್ಲಿ ಹೋಗುವುದು ನಿಶಿದ್ಧ.
* ಇಳಿಜಾರಿನಲ್ಲಿ ಹೋದಾಗ ಆಯಾ ಇಳಿಜಾರಿನ ಅಂದಾಜನ್ನು ಮಾಡಿಕೊಂಡು ವಾಹನದ ವೇಗವನ್ನು ನಿರ್ಧರಿಸಿ. ಎಲ್ಲಾ ಇಳಿಜಾರಿನಲ್ಲಿ ವೇಗದ ಮಿತಿಗಳನ್ನು ಪ್ರದರ್ಶಿಸುತ್ತಿರುತ್ತಾರೆ. ಸಾಮಾನ್ಯವಾಗಿ ಆಯಾ ಇಳಿಜಾರಿನ ತೀವ್ರತೆಯನ್ನು ಆಧರಿಸಿಕೊಂಡು ವೇಗದಲ್ಲಿ 15 ಕಿ.ಮೀ ನಿಂದ 30 ಕಿಲೋ ಮೀಟರ್ ವರೆಗೆ ಇರಬಹುದು. (RTO ಫಲಕ ಗಮನಿಸಿ ಗಾಡಿ ಓಡಿಸಿ)
* ಇಳಿಜಾರು ಇರುವ ಸಂದರ್ಭಗಳಲ್ಲಿ ಮರೆಯದೆ ಫಲಕಗಳು ಸೂಚಿಸಿದ ವೇಗದಿಂದಲೇ ವಾಹನ ಚಲಾಯಿಸಿ.
* ಕಡಿದಾದ ಚಾರ್ಮಾಡಿ ಘಾಟಿ ಅಂತಹ ರಸ್ತೆಗಳಲ್ಲಿ ಎರಡನೆಯ ಗೇರ್ ನಲ್ಲಿ ವಾಹನವನ್ನು ಓಡಿಸುವುದು ಸೂಕ್ತ. ಕೆಲವು ಕಡೆ ಫಸ್ಟ್ ಗೇರಿನಲ್ಲಿ ಸಾಗುವ ಅಗತ್ಯ ಇರುತ್ತದೆ. ನಿಮ್ಮ ಡ್ರೈವಿಂಗ್ ಅನುಭವವನ್ನು ಸರಿಯಾಗಿ ಬಳಸಿಕೊಂಡು ನಿಧಾನಕ್ಕೆ ಚಲಿಸಿ.
* ಇಳಿಜಾರಿನಲ್ಲಿ ಸಾಗುವಾಗ ಇಂಧನ ಉಳಿಸುವುದು ನಮ್ಮ ಮೊದಲ ಆದ್ಯತೆಯಲ್ಲ, ಬದಲಿಗೆ ಜೀವ ಉಳಿಸಿಕೊಳ್ಳುವುದು ಪ್ರಾಮುಖ್ಯತೆ ಎಂಬುದನ್ನು ನೆನಪಿಡಿ.

ಇದನ್ನೂ ಓದಿ: ಈ ಎರಡು ಔಷಧ ಕಂಪನಿಗಳ ಸಿರಪ್‌ಗಳಲ್ಲಿ ವಿಷಕಾರಿ ರಾಸಾಯನಿಕ ಪತ್ತೆ!

Leave A Reply

Your email address will not be published.