Kerala Fifty Fifty Lottery: ತನ್ನ ಅಂಗಡಿಯಲ್ಲಿ ಕುಳಿತಿದ್ದಳು ಲಕ್ಷ್ಮಿ, ಲಾಟರಿ ಏಜೆಂಟ್‌ಗೆ ಒಲಿದ 1 ಕೋಟಿ ಬಂಪರ್‌ ಬಹುಮಾನ !!! ಹೇಗಂತೀರಾ?

Kerala fifty fifty lottery result lottery agent wins 1 crore first prize in Kozhikode

Kerala Fifty Fifty Lottery: ಕೆಲವೊಮ್ಮೆ ಅದೃಷ್ಟ ಯಾವ ರೀತಿ ನಮ್ಮ ಕಾಲ ಬುಡದಲ್ಲಿ ಇರುತ್ತೆ ಅನ್ನೋದಕ್ಕೆ ಇದೊಂದು ತಾಜಾ ಉದಾಹರಣೆ. ನಮ್ಮಲ್ಲಿ ಹೆಚ್ಚಿನವರು ಅದೃಷ್ಟ ಪರೀಕ್ಷೆಗೆಂದು ಲಾಟರಿ ಟಿಕೆಟ್‌ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಇಲ್ಲಿ ನಡೆದಿರುವು ಉಲ್ಟ. ಅದೇನೆಂದರೆ, ಕೇರಳ ರಾಜ್ಯ ಸರಕಾರ ನಡೆಸುವ ಫಿಫ್ಟಿ ಫಿಫ್ಟಿ ಲಾಟರಿಯಲ್ಲಿ ((Kerala fifty fifty lottery bumper prize) ಬಂಪರ್‌ ಬಹುಮಾನವೊಂದು ಲಾಟರಿ ಶಾಪ್‌ ಇಟ್ಟುಕೊಂಡವರಿಗೆನೇ ದೊರೆತಿದೆ. ಹೇಗಂತೀರಾ? ಇವರ ಶಾಪ್‌ನಲ್ಲಿ ಮಾರಾಟವಾಗದೇ ಉಳಿದ ಟಿಕೆಟ್‌ನಲ್ಲಿ ಒಂದು ಟಿಕೆಟ್‌ಗೆ ಒಂದು ಕೋಟಿ ಬಂಪರ್‌ ಬಹುಮಾನ ಲಭ್ಯವಾಗಿದೆ. ಇದಕ್ಕೆ ಅಲ್ಲವೇ ಹೇಳುವುವು, ದೇನೇವಾಲ ಜಬ್‌ ದೇತಾ ಹೈ ತೋ ಚಪ್ಪಡ್‌ ಪಾಡ್‌ಕೇ ದೇತಾ ಹೈ ಅಂತ.

ಇವಿಷ್ಟು ಮಾತ್ರವಲ್ಲದೇ ಈತನ ಸ್ಟಾಲ್‌ನಲ್ಲಿ ವಿತರಣೆ ಆಗಿರುವ ಆರು ಲಾಟರಿ ಟಿಕೆಟ್‌ಗೆ 50,000ರೂ. ಬಹುಮಾನ ದೊರೆತಿದೆ.

ಒಂದು ಕೋಟಿಯನ್ನು ಪಡೆದ ಅದೃಷ್ಟವಂತ ವ್ಯಕ್ತಿಯೇ ಎನ್‌ ಕೆ ಗಂಗಾಧರ್‌. ಇವರು ಸುಮಾರು ಮೂವತ್ತಮೂರು ವರ್ಷಗಳ ಕಾಲ ಬಸ್‌ ಕಂಡಕ್ಟರ್‌ ಆಗಿ ಕೆಲಸ ಮಾಡಿದ್ದು, ನಂತರ ಮೂವರು ವರ್ಷಗಳ ಹಿಂದೆ ಲಾಟರಿ ಶಾಪ್‌ ಓಪನ್‌ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಇವರ ಅಂಗಡಿಗೆ ಬಂಪರ್‌ ಲಾಟರಿ ಟಿಕೆಟ್‌ ಒಲಿದಿದೆ. ಮಾರಾಟವಾಗದೇ ಉಳಿದ ಟಿಕೆಟ್‌ಗೆ ಈ ಬಂಪರ್‌ ಬಹುಮಾನ ಲಭಿಸಿದ್ದು, ಕೇಳಿ ನಿಜಕ್ಕೂ ಗಂಗಾಧರ್‌ ಅವರು ದಿಗ್ಮೂಢರಾಗಿದ್ದಾರೆಂದು ವರದಿಯಾಗಿದೆ.

ತನ್ನಲ್ಲಿರುವ ಆ ಟಿಕೆಟ್‌ ಕಳ್ಳತನ ಆಗುವ ಭಯದಲ್ಲಿ ಗಂಗಾಧರ್‌ ಅವರು ಅದನ್ನು ಬ್ಯಾಂಕಿಗೆ ನೀಡುವವರೆಗೆ ಯಾರಗೂ ಈ ವಿಷಯ ಹೇಳಿರಲಿಲ್ಲವಂತೆ.

ಇದನ್ನೂ ಓದಿ: ಧರ್ಮಸ್ಥಳ : ಅರಣ್ಯ ಇಲಾಖೆಯ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ , ಇಲಾಖಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ,11 ಜನರ ವಿರುದ್ಧ ಪ್ರಕರಣ ದಾಖಲು

Leave A Reply

Your email address will not be published.