Dharmasthala: ಅರಣ್ಯ ಇಲಾಖೆಯ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ , ಇಲಾಖಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ,11 ಜನರ ವಿರುದ್ಧ ಪ್ರಕರಣ ದಾಖಲು

Dharamsthala news Illegal house construction in forest department land case registered against 11 people

Dharmasthala: ಕಳೆಂಜ ಗ್ರಾಮದ ಅಮ್ಮಿನಡ್ಕದ ಅರಣ್ಯ ಇಲಾಖೆಗೆ ಸೇರಿದ ಜಾಗದ ವಿವಾದ ಕುರಿತು ಈಗ ಧರ್ಮಸ್ಥಳ(Dharmasthala) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರಣ್ಯ ಇಲಾಖೆಗೆ ಸೇರಿದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅ.7 ರಂದು ಅಕ್ರಮವಾಗಿ ಮನೆ ನಿರ್ಮಾಣ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರ ಬಗ್ಗೆ ಅ.7ರಂದು ರಾತ್ರಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: KPSC ಇಂದ ಗ್ರೂಪ್‌ ಸಿ ಪರೀಕ್ಷೆ ದಿನಾಂಕ ಪ್ರಕಟ!

ಘಟನೆ ವಿವರ: ಕಳೆಂಜ ಗ್ರಾಮದ ಅಮ್ಮಿಡ್ಕ ಕುದ್ದಮನೆ ಸೇಸ ಗೌಡ ಎಂಬುವವರ ಕುಟುಂಬವು 150 ವರ್ಷದ ಹಿಂದೆ ತಮ್ಮ ಸ್ವಾಧೀನದ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಮುಂದಾಗಿತ್ತು. ಆದರೆ ಅ.6 ರಂದು ಅರಣ್ಯ ಇಲಾಖೆ ಬಡ ಕುಟುಂಬದ ಫೌಂಡೇಶನ್‌ ಕಿತ್ತೆಸೆದಿದೆ. ಇದರಿಂದ ನೊಂದ ಮನೆ ಮಗ ನೊಂದು ಆತ್ಮಹತ್ಯೆಗೆ ಮುಂದಾಗಿದ್ದ.

ನಂತರ ಸ್ಥಳಕ್ಕೆ ಬಂದ ಶಾಸಕ ಹರೀಶ್‌ ಪೂಂಜ ಅವರು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅರಣ್ಯ ಇಲಾಖೆ ಮತ್ತು ಶಾಸಕರ ಮಧ್ಯೆ ಗಂಭೀರ ಮಾತಿನ ಚಕಮಕಿ ನಡೆಯಿತು. ನಂತರ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರಿಗೆ ಕರೆ ಮಾಡಿದ ಹರೀಶ್ ಪೂಂಜಾ ಸಮಸ್ಯೆ ಬಗ್ಗೆ ಹೇಳಿದ್ದು, ಸಚಿವರು ಸದ್ಯ ತೆರವುಗೊಳಿಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಮೇಲಾಧಿಕಾರಿಗಳಿಂದ ವರದಿ ಪಡೆದು ಬಳಿಕ ನಿರ್ಧಾರ ಕೈಗೊಳ್ಳಲು ಆದೇಶ ನೀಡಿದ್ದರು.

ಇದನ್ನೂ ಓದಿ: Ration Card E-KYC: ಪಡಿತರ ಚೀಟಿದಾರರೇ E-KYC ಮಾಡೋದು ಹೇಗೆ ಗೊತ್ತೇ? ಸಂಪೂರ್ಣ ಮಾಹಿತಿ ಇಲ್ಲಿದೆ!

Leave A Reply

Your email address will not be published.