Supreme court: ಮನೆಯ ಆಸ್ತಿ ಮಾರಲು ಹಿಂದೂಗಳಿಗೆ ಬಂತು ಹೊಸ ರೂಲ್ಸ್- ಕೋರ್ಟ್ ತೀರ್ಪು ಕೇಳಿ ಕುಟುಂಬದವರೆಲ್ಲ ಶಾಕ್ !!

Head of Hindu undivided family right to sell property Supreme court order

Supreme court: ಹಿಂದೂ ಅವಿಭಕ್ತ ಕುಟುಂಬದಲ್ಲಿ ಆಸ್ತಿಯನ್ನು ಮತ್ತೊಬ್ಬರಿಗೆ ಹಸ್ತಾಂತರಿಸುವ, ಮಾರಾಟ ಮಾಡುವ ಅಥವಾ ಅಡ‌ಮಾನ ಇಡುವ ಅಧಿಕಾರವನ್ನು ಹಿರಿಯ ಸದಸ್ಯನು (‘ಕರ್ತ’) ಹೊಂದಿದ್ದಿರುತ್ತಾನೆ. ಇದಕ್ಕೆ ಮನೆಯ ಇತರ ಸದಸ್ಯರುಗಳ ಅನುಮತಿ ಬೇಕಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌(Supreme court)ಹೇಳಿದೆ.

ಹೌದು, ಕುಟುಂಬದ ಅಪ್ರಾಪ್ತ ವಯಸ್ಕ ಸದಸ್ಯನೂ ಆಸ್ತಿಯಲ್ಲಿ ಹಕ್ಕು ಹೊಂದಿರಬಹುದು. ಆದಾಗ್ಯೂ, ಆಸ್ತಿಯ ಹಸ್ತಾಂತರ, ಮಾರಾಟ ಅಥವಾ ಅಡಮಾನ ಇಡುವುದಕ್ಕಾಗಿ ಮುಖ್ಯಸ್ಥನು ಕುಟುಂಬದ ಎಲ್ಲಾ ಸದಸ್ಯರ ಒಪ್ಪಿಗೆ ಕೇಳಬೇಕಾಗಿಲ್ಲ ಎಂದೂ ಸುಪ್ರೀಂ ಕೋರ್ಟ್‌ ನ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಎಸ್‌.ವಿ.ಎನ್‌.ಭಟ್ಟಿ ಅವರಿದ್ದ ನ್ಯಾಯಪೀಠವು ಅರ್ಜಿಯೊಂದರ ವಿಚಾರಣೆ ವೇಳೆ ಈ ತೀರ್ಪನ್ನು ನೀಡಿದೆ.

ಇದನ್ನೂ ಓದಿ: Mahisha Dasara: ಸರ್ಕಾರದಿಂದಲೇ ‘ಮಹಿಷಾ ದಸರಾ’ ಆಚರಣೆ ?! ಸಿಎಂ ಸಿದ್ದು ಕೊಟ್ರು ಬಿಗ್ ಅಪ್ಡೇಟ್

ಅಂದಹಾಗೆ ಹಿಂದೆ ಎನ್‌.ಎಸ್‌.ಬಾಲಾಜಿ ಎಂಬುವರು ವಿವಾದಿತ ಆಸ್ತಿಯು ಅವಿಭಕ್ತ ಕುಟುಂಬದ ಆಸ್ತಿ ಅಥವಾ ಹಿಂದೂ ಅವಿಭಜಿತ ಕುಟುಂಬ (ಎಚ್ಯುಎಫ್) ಆಸ್ತಿಯಾಗಿದ್ದು, ಇದನ್ನು ಅವರ ತಂದೆ ಖಾತರಿದಾರರಾಗಿ ಅಡವಿಟ್ಟಿದ್ದರು ಎಂದು ಹೇಳಿ ಮದ್ರಾಸ್‌ ಹೈಕೋರ್ಟ್‌‌ಗೆ ಅರ್ಜಿ ಸಲ್ಲಿಸಿದ್ದರು. ಮದ್ರಾಸ್‌ ಹೈಕೋರ್ಟ್‌, ಬಾಲಾಜಿ ಅವರ ಅರ್ಜಿಯನ್ನು ತಳ್ಳಿ ಹಾಕಿ ‌ಜುಲೈ 31ರಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಬಾಲಾಜಿ ಅವರು ರಜಾಕಾಲದ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು.

ಮದ್ರಾಸ್‌ ಹೈಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿರುವ ನ್ಯಾಯಪೀಠ, ಬಾಲಾಜಿ ಅವರ ಮೇಲ್ಮನವಿಯನ್ನು ವಜಾಗೊಳಿಸಿದೆ. ಅಲ್ಲದೆ ಅರ್ಜಿದಾರನ ತಂದೆ ಹಿಂದೂ ಅವಿಭಕ್ತ ಕುಟುಂಬದ ‘ಕರ್ತ’ ಆಗಿದ್ದು, ಕುಟುಂಬದ ಆಸ್ತಿಯನ್ನು ಅಡಮಾನ ಇಡುವ ಅಧಿಕಾರ ಹೊಂದಿದ್ದಾರೆ’ ಎಂದೂ ಹೇಳಿದೆ.

ಇದನ್ನೂ ಓದಿ: ‘ರಾಕ್ಷಸಿ’ ಎಂದು ಹೆಂಡತಿಯ ನಂಬರ್ ಸೇವ್ ಮಾಡಿದ ಗಂಡ !! ಸೀದಾ ಕೋರ್ಟ್ ಗೇ ಹೋದ ಹೆಂಡ್ತಿ- ಜಡ್ಜ್ ಏನಂದ್ರು ಗೊತ್ತಾ ?!

Leave A Reply

Your email address will not be published.