Udupi: ‘ರಾಕ್ಷಸಿ’ ಎಂದು ಹೆಂಡತಿಯ ನಂಬರ್ ಸೇವ್ ಮಾಡಿದ ಗಂಡ !! ಸೀದಾ ಕೋರ್ಟ್ ಗೇ ಹೋದ ಹೆಂಡ್ತಿ- ಜಡ್ಜ್ ಏನಂದ್ರು ಗೊತ್ತಾ ?!

Husband saved wife name as demon in mobile wife who stepped on court for divorce

Udupi: ಗಂಡ ಹೆಂಡತಿ ಜಗಳ ಮುಗಿಯೋ ಕಥೆಯಲ್ಲ. ಅದರಲ್ಲೂ ಹೆಂಡತಿಯನ್ನು ಮ್ಯಾನೇಜ್ ಮಾಡೋದು ಸ್ವಲ್ಪ ಕಷ್ಟವೇ ಸರಿ. ಹಾಗಂತ ಸುಮ್ನೇ ಬಿಡೋಕಾಗಲ್ಲ, ಅವರ ಮೇಲಿನ ಕೋಪವನ್ನು ಬೇರೆ ರೀತಿಯಲ್ಲಿ ಗಂಡಂದಿರು ತೋರಿಸುವುದು ಇದೆ. ಇನ್ನು ಹೆಂಡತಿಯರು ಯಾರು ಮೇಲು ಅಂತಾ ಒಂದು ಕೈ ನೋಡೇ ಬಿಡೋಣ ಅಂತಾ ತಗಾದೆ ತೆಗೆಯುತ್ತಲೇ ಇರುತ್ತಾರೆ. ಇದೀಗ ಇಲ್ಲೊಬ್ಬಳು ಸಣ್ಣ ಕಾರಣಕ್ಕೆ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಹೌದು, ಗಂಡ ನನ್ನ ಮೊಬೈಲ್‌ ನಂಬರ್‌ ಅನ್ನು ರಾಕ್ಷಸಿ ಎಂದು ಸೇವ್‌ ಮಾಡಿಕೊಂಡಿದ್ದಾನೆ ಎಂದು ಉಡುಪಿಯ ಮಹಿಳೆಯೊಬ್ಬರು ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಗಂಡನ ಮೊಬೈಲ್‌ನಲ್ಲಿ ನನ್ನ ಹೆಸರು ಹೇಗೆಂದು ಸೇವ್ ಆಗಿರಬಹುದು ಎಂದು ಕಾತುರದಿಂದ ನೋಡಿದ ಆಕೆಗೆ ದೊಡ್ಡ ಶಾಕ್‌ ಕಾದಿತ್ತು! ಯಾಕೆಂದರೆ ಗಂಡ ರಾಕ್ಷಸಿ ಎಂದು ಮೊಬೈಲ್ನಲ್ಲಿ ಸೇವ್‌ ಮಾಡಿಕೊಂಡಿದ್ದ. ಕೂಡಲೇ ಮಹಿಳೆ ವಿಚ್ಛೇದನಕ್ಕೆ ಕೋರ್ಟ್‌ ಮೆಟ್ಟಿಲೇರಿದ್ದಾಳೆ.

ಖಾಸಗಿತನದ ನೆಲೆಯಲ್ಲಿ ಸ್ಕ್ರೀನ್‌ ಲಾಕ್ ಆಗಿರುವ ಗಂಡ ಮೊಬೈಲ್‌ನಲ್ಲಿ ನನ್ನ ನಂಬರ್‌ ಏನೆಂದು ಸೇವ್‌ ಇರಬಹುದು ಹೀಗೊಂದು ಕುತೂಹಲ ಮೂಡಿದ್ದೇ ತಡ ಮಳೆಯು ಗಂಡ ಸ್ನಾನಕ್ಕೆ ತೆರಳಿದ್ದ ತಾನೆ ಗಂಡನ ಮೊಬೈಲ್‌ಗೆ ಕಾಲ್ ಕೊಟ್ಟು ನೋಡಿದ್ದಾಳೆ. ಅಷ್ಟು ತಿಳಿದದ್ದೇ ತಡ ಸ್ನಾನ ಮುಗಿಸಿ ಬಂದ ಪತಿಯೆದುರು ಮೊಬೈಲ್‌ನಲ್ಲಿ ಸೇವ್ ಮಾಡಿದ್ದ ಹೆಸರಿನ ನೈಜ ದರ್ಶನ ಮಾಡಿಸಿದ್ದಳು. ಅಷ್ಟೇ ಅಲ್ಲ ಗಂಡನ ಗ್ರಹಚಾರ ಬಿಡಿಸಿದ್ದು ಮಾತ್ರವಲ್ಲದೇ ಉಡುಪಿಯ(udupi)ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ ಮಾನಸಿಕ ಕ್ರೌರ್ಯದ ನೆಲೆಯಲ್ಲಿ ವಿಚ್ಛೇದನದ (Divorce Case) ಬೇಡಿಕೆ ಮುಂದಿಟ್ಟಳು.

ಇದನ್ನೂ ಓದಿ: ದೇಶದ ಎಲ್ಲಾ ಸರ್ಕಾರಿ ಬಸ್ ಗಳಿಗೆ ಬಂತು ಹೊಸ ರೂಲ್ಸ್ – ಬೆಳ್ಳಂಬೆಳಗ್ಗೆಯೇ ಆದೇಶ ಹೊರಡಿಸಿದ ಕೇಂದ್ರ

ಒಟ್ಟಿನಲ್ಲಿ ವಿಚಾರ ಸಣ್ಣದಾದರೂ ಮಾನಸಿಕ ಹಿಂಸೆಯ ಪರಿಣಾಮವನ್ನು ಇಬ್ಬರಿಗೂ ಮನದಟ್ಟು ಮಾಡಿದ ಜಡ್ಜ್ ಇಬ್ಬರಿಗೂ ಬುದ್ದಿ ಹೇಳಿ ಕಳಿಸಿದ್ದರು. ಇನ್ನು ಅನ್ಯರ ಸಂಪರ್ಕ ಸಂಖ್ಯೆಗೆ ಮೊಬೈಲ್‌ನಲ್ಲಿ ಹೆಸರು ದಾಖಲಿಸುವಾಗ ಖಾಸಗಿತನ, ಗೌರವಕ್ಕೆ ಚ್ಯುತಿಯಾಗದಂತೆ, ಮಾನಸಿಕ ಹಿಂಸೆಯಾಗದಂತೆ ಎಚ್ಚರ ವಹಿಸಬೇಕು. ಕೌಟುಂಬಿಕ ನ್ಯಾಯಾಲಯಕ್ಕೆ ಕ್ಷುಲ್ಲಕ ಕಾರಣಗಳಿಗಾಗಿ ಬಂದು ವಿಚ್ಛೇದನ ಕೇಳಬಾರದು. ಬುದ್ಧಿ ಹೇಳಿ ನಿಭಾಯಿಸಿ, ದಾಂಪತ್ಯ ಉಳಿಸಿ ಎಂದು ವಿಚ್ಛೇದನ ಕೊಡಿಸಲು ಮುಂದಾಗಿದ್ದ ನಾಯವಾದಿಗಳಿಗೆ ಕೋರ್ಟ್‌ ಸಲಹೆ ನೀಡಿದೆ.

ಇನ್ನು ಗಂಡ ಹೆಂಡತಿ ಹೆಸರನ್ನು ಗೌರವಯುತವಾಗಿ ದಾಖಲಿಸಬೇಕು
ಗಂಡ, ಹೆಂಡತಿ ಸಹಿತ ಅನ್ಯರ ಹೆಸರನ್ನು ಮೊಬೈಲ್‌ ಗಳಲ್ಲಿ ಗೌರವಯುತವಾಗಿ ದಾಖಲಿಸಬೇಕು. ತಪ್ಪಿದರೆ ಅದು ಮಾನಸಿಕ ಹಿಂಸೆ, ಕ್ರೌರ್ಯಕ್ಕೆ ಸಮನಾದೀತು. ಯಾವುದೇ ವ್ಯವಹಾರದಲ್ಲಿ ಸಾಮಾನ್ಯ ಜ್ಞಾನ (ಕಾಮನ್‌ಸೆನ್ಸ್) ಅತಿ ಮುಖ್ಯವಿದ್ದು, ಕ್ಷುಲ್ಲಕ ಕಾರಣಗಳಿಗಾಗಿ ಡೈವೋರ್ಸ್ ಕೇಳುವ ಪರಿಪಾಠ ಒಳಿತಲ್ಲ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಎಸ್‌ ಶರ್ಮಿಳಾ ತಿಳಿಸಿದ್ದಾರೆ.

ಇದನ್ನೂ ಓದಿ: ಅದಾನಿ ತೆಕ್ಕೆ ಸೇರಲಿದೆ ಮಂಗಳೂರು ವಿಮಾನ ನಿಲ್ದಾಣ – ಇಲ್ಲಿದೆ ನೋಡಿ ಸಂಪೂರ್ಣ ವಿವರ

Leave A Reply

Your email address will not be published.