Blood group: ಈ ‘ಬ್ಲಡ್‌ ಗ್ರೂಪ್ʼ ಇರೋರಿಗೆ ಹೆಚ್ಚು ಕಾಡಲಿದೆ ʼಮಧುಮೇಹʼ !!

Lifestyle Health news people with this blood group will suffer more diabetes

Blood group: ಮನುಷ್ಯನ ರಕ್ತದ ಗುಂಪು ವಿಭಿನ್ನ ಮತ್ತು ಒಂದೊಂದು ರಕ್ತದ ಗುಂಪುಗಳು (Blood group )ಬೇರೆ ಬೇರೆ ಸ್ವಭಾವವನ್ನು ಕೂಡ ಹೊಂದಿರುತ್ತವೆ. ಇಂತಹ ರಕ್ತದ ಸ್ವಭಾವ ( Blood nature) ವೇ ಮನುಷ್ಯನ ದೇಹ ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿ ತನ್ನ ಬ್ಲಡ್ ಗ್ರೂಪ್ ಕಾರಣದಿಂದಲೇ ಎಷ್ಟೋ ರೋಗಗಳಿಗೆ ಬಲಿಯಾಗುತ್ತಾನೆ. ಇಂದು ಇಲ್ಲಿ ಯಾವ ಯಾವ ಬ್ಲಡ್ ಗ್ರೂಪ್ ಹೊಂದಿರುವ ಜನರು ಮಧುಮೇಹ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದನ್ನು ನೋಡೋಣ.

ಮಧುಮೇಹವು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಒಮ್ಮೆ ಶುರುವಾದ್ರೆ ಗುಣಪಡಿಸಲು ಸಾಧ್ಯವಿಲ್ಲ. ಆದ್ರೆ ಜೀವನ ಶೈಲಿಯಲ್ಲಿ ಬದಲಾವಣೆ ತರುವ ಮೂಲಕ ರೋಗವನ್ನು ನಿಯಂತ್ರಿಸಬಹುದು. ಜೀವನಶೈಲಿ ಜೊತೆ ರಕ್ತದ ಗುಂಪು ಕೂಡ ಮಧುಮೇಹಕ್ಕೆ ಕಾರಣವಾಗುತ್ತದೆ. ಅಧ್ಯಯನದ ಪ್ರಕಾರ, A ಅಥವಾ B ರಕ್ತದ ಗುಂಪು ಹೊಂದಿರುವವರಿಗೆ ಟೈಪ್ 2 ಮಧುಮೇಹದ ಅಪಾಯ ಹೆಚ್ಚು.

ಮುಖ್ಯವಾಗಿ ರಕ್ತದ ಗುಂಪು ಒ ಆಗಿದ್ದರೆ ಅಪಾಯ ಕಡಿಮೆ. ಈ ಅಧ್ಯಯನ 80 ಸಾವಿರ ಮಹಿಳೆಯರ ಮೇಲೆ ನಡೆದಿದೆ. ಅಧ್ಯಯನದಲ್ಲಿ ರಕ್ತದ ಗುಂಪು ಮತ್ತು ಟೈಪ್ 2 ಮಧುಮೇಹದ ನಡುವಿನ ಸಂಬಂಧವೇನು ಎಂದು ತಿಳಿಯಲು ಪ್ರಯತ್ನಿಸಲಾಗಿದೆ. ಅಧ್ಯಯನದಲ್ಲಿ ಪಾಲ್ಗೊಂಡಿದ್ದ 3,553 ಮಹಿಳೆಯರಲ್ಲಿ ಟೈಪ್ 2 ಡಯಾಬಿಟಿಸ್ ಪತ್ತೆಯಾಗಿತ್ತು.

ಒ ರಕ್ತದ ಗುಂಪು ಹೊಂದಿರುವ ಮಹಿಳೆಯರಿಗಿಂತ ಎ ರಕ್ತದ ಗುಂಪು ಹೊಂದಿರುವ ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ಅಪಾಯ 10 ರಷ್ಟು ಹೆಚ್ಚಿತ್ತು. ಒ ರಕ್ತದ ಗುಂಪು ಹೊಂದಿರುವ ಮಹಿಳೆಯರಿಗಿಂತ ಬಿ ರಕ್ತದ ಗುಂಪು ಹೊಂದಿರುವ ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ಅಪಾಯ ಶೇಕಡಾ 21ರಷ್ಟಿತ್ತು. ಒ ನೆಗೆಟಿವ್ ರಕ್ತದ ಗುಂಪು ಹೊಂದಿರುವವರಲ್ಲಿ ಇದರ ಅಪಾಯ ಅತ್ಯಂತ ಕಡಿಮೆ. ಬಿ ಪಾಸಿಟಿವ್ ಹೊಂದಿರುವವರಲ್ಲಿ ಇದರ ಅಪಾಯ ಹೆಚ್ಚು.

ಒ ಗುಂಪು ಹೊರತುಪಡಿಸಿ ಬೇರೆ ರಕ್ತದ ಗುಂಪು ಹೊಂದಿರುವವರಲ್ಲಿ ವಿಶೇಷ ರೀತಿಯ ಪ್ರೋಟೀನ್ ಇರುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ: ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಭೀಕರ ಅಪಘಾತ: ಟೆನ್ಷನ್ ನಲ್ಲಿ ಬ್ರೇಕ್ ಬದಲು ಕಾರಿನ ಆ್ಯಕ್ಸಿಲರೇಟರ್ ಒತ್ತಿದ ಪ್ರೊಫೆಸರ್!

Leave A Reply

Your email address will not be published.