Car Accident in Bengaluru: ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಭೀಕರ ಅಪಘಾತ: ಟೆನ್ಷನ್ ನಲ್ಲಿ ಬ್ರೇಕ್ ಬದಲು ಕಾರಿನ ಆ್ಯಕ್ಸಿಲರೇಟರ್ ಒತ್ತಿದ ಪ್ರೊಫೆಸರ್!

Bengaluru news Bengaluru maharani college professor car accident 3 student injuried latest news

Car Accident in Bengaluru: ಬೆಂಗಳೂರು ಮಹಾರಾಣಿ ಕಾಲೇಜಿನ ಆವರಣದಲ್ಲಿ ಇಂಗ್ಲೀಷ್ ಪ್ರೊಫೆಸರ್ ಒಬ್ಬರ ಕಾರು ಮತ್ತೊಬ್ಬ ಪ್ರೊಫೆಸರ್ ಅವರ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರಣದಿಂದಾಗಿ, ಒಬ್ಬ ಶಿಕ್ಷಕಿ, ಒಬ್ಬ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮಾಹಿತಿ ಪ್ರಕಾರ, ಬೆಂಗಳೂರಿನ ಮಹಾರಾಣಿ ಕಾಲೇಜು ಆವರಣದಲ್ಲಿ ಬೆಳಗ್ಗೆ 9.30ರ ಅಪಘಾತ ಸಂಭವಿಸಿದ್ದು (Car Accident in Bengaluru) , ಪ್ರೊಫೆಸರ್ ನಾಗರಾಜ್ ಎಂಬುವರು ಕಾರು, ಕಾಲೇಜು ಆವರಣದಲ್ಲಿ ಮೂವರಿಗೆ ಡಿಕ್ಕಿ ಹೊಡೆದಿದ್ದರಿಂದಾಗಿ ಓರ್ವ ಸಂಗೀತ ಶಿಕ್ಷಕಿ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಹತ್ತಿರದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲೇಜು ಆವರಣದೊಳಗೆ ಕಾರು ಸಾಗಿ ಬರುವಾಗ ವಿದ್ಯಾರ್ಥಿನಿಯರು ಅಡ್ಡ ಬಂದ ಹಿನ್ನೆಲೆಯಲ್ಲಿ ಪ್ರೊಫೆಸರ್ ಅವರು ಬ್ರೇಕ್ ಬದಲು ಆ್ಯಕ್ಸಿಲರೇಟರ್ ಒತ್ತಿದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಎಂದಿನಂತೆ ಪ್ರೊಫೆಸರ್ ನಾಗರಾಜ್ ಅವರು ಕಾಲೇಜಿಗೆ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಕಾರು ಕಾಲೇಜು ಒಳ ಆವರಣದಲ್ಲಿ ಬರುತ್ತಿದ್ದಂತೆ ಇಬ್ಬರು ಪ್ರೊಫೆಸರ್ ಅವರ ಕಾರಿಗೆ ಇಬ್ಬರು ವಿದ್ಯಾರ್ಥಿನಿಯರು ಆಕಸ್ಮಿಕವಾಗಿ ಅಡ್ಡ ಬಂದಿದ್ದಾರೆ. ಆಗ, ಪ್ರೊಫೆಸರ್ ಅವರು ಕೊಂಚ ಗಾಬರಿಯಾಗಿ ಕಾರಿನ ಬ್ರೇಕ್ ಒತ್ತುವ ಬದಲಾಗಿ, ಆ್ಯಕ್ಸಿಲರೇಟರ್ ಒತ್ತಿದ್ದಾರೆ.

ಆ್ಯಕ್ಸಿಲರೇಟರ್ ಒತ್ತಿದ ಕಾರಣ ಕಾರು ಏಕಾಏಕಿ 250 ಕಿ.ಮೀ. ವೇಗದಲ್ಲಿ ಬಂದು ಆ ಹುಡುಗಿಯರಿಗೆ ಹಾಗೂ ಅದೇ ಆವರಣದಲ್ಲೇ ನಿಲ್ಲಿಸಲಾಗಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಆ ಕಾರಿನ ಪಕ್ಕದಲ್ಲೇ ನಿಂತಿದ್ದ ಶಿಕ್ಷಕಿಗೂ ಕಾರು ಗುದ್ದಿದ್ದರಿಂದಾಗಿ ಅವರಿಗೂ ಗಾಯಗಳಾಗಿವೆ. ಅವರಲ್ಲಿ ಅಶ್ವಿನಿ ಎಂಬ ಪ್ರಥಮ ವರ್ಷದ ವಿದ್ಯಾರ್ಥಿನಿಗೇ ಕಾರು ಮೊದಲು ಗುದ್ದಿದ್ದರಿಂದಾಗಿ, ಆಕೆಯ ಕಾಲು ಹಾಗೂ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ಅವರು ಸ್ಥಳದಲ್ಲೇ ಮೂರ್ಛೆ ಹೋಗಿದ್ದರು. ಅವರು ಸೇರಿದಂತೆ ಗಾಯಗೊಂಡ ಎಲ್ಲರನ್ನೂ ಕಾಲೇಜಿಗೆ ಹತ್ತಿರವಿರುವ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಪ್ರತ್ಯಕ್ಷದರ್ಶಿಗಳಾದ ಕೆಲವು ವಿದ್ಯಾರ್ಥಿನಿಯರ ಹೇಳಿಕೆಯ ಪ್ರಕಾರ, ಪ್ರೊಫೆಸರ್ ನಾಗರಾಜ್ ಅವರು ಮೃದು ಸ್ವಭಾವದವರಾಗಿದ್ದು, ಅವರ ನಡವಳಿಕೆ, ನುಡಿ – ನಡೆ ಎಲ್ಲವೂ ಸರಳವಾಗಿದೆ. ಶನಿವಾರ ನಡೆದ ಅಪಘಾತದ ವೇಳೆ ಅವರು ಏಕಾಏಕಿ ಟೆನ್ಷನ್ ಆಗಿದ್ದು ಬ್ರೇಕ್ ಬದಲು ಆ್ಯಕ್ಸಿಲರೇಟರ್ ಒತ್ತಿದ್ದರಿಂದ ಅಪಘಾತವಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಸದ್ಯ ತೀವ್ರವಾಗಿ ಗಾಯಗೊಂಡಿರುವ ಅಶ್ವಿನಿ ಅವರಿಗೆ ಮಾರ್ಥಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ಬೆಂಗಳೂರಿನ ವಸಂತ ನಗರದ ಜೈನ್ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಕೆಲವು ಮೂಲಗಳ ಮೂಲಕ ತಿಳಿದು ಬಂದಿದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಈ ಯೋಜನೆಯಡಿ ಇನ್ವೆಸ್ಟ್ ಮಾಡಿ, ಡಬಲ್ ಹಣ ಪಡೆಯಿರಿ

Leave A Reply

Your email address will not be published.