Jio ಸಿಮ್ ಬಳಕೆದಾರರಿಗೆ ಭರ್ಜರಿ ಸುದ್ದಿ- ಇನ್ನು ನಿಮ್ಗೆ ಉಚಿತವಾಗಿ ಸಿಗಲಿದೆ ಈ ಅವಕಾಶ !

Technology news new offer from reliance jio watch freely cricket world cup 2023

Jio Prepaid Offer: ಟೆಲಿಕಾಮ್ ಕಂಪನಿಗಳಲ್ಲಿ(Telocom Company)ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ(Reliance Jio) ಹೊಸ ಹೊಸ ಆಫರ್(Jio Prepaid Offer )ಮೂಲಕ ಗ್ರಾಹಕರ ಮನ ಸೆಳೆಯುತ್ತಿದೆ. ಇದೀಗ, ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿಯಿದ್ದು, Reliance Jio ಫ್ರೀಪೈಡ್ ಬಳಕೆದಾರರಿಗೆ ಉಚಿತವಾಗಿ ಈ ಅವಕಾಶ ಸಿಗಲಿದೆ.

ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 19 ರಂದು ನಡೆಯಲಿದ್ದು, ಹೊಸ ಡಿಸ್ನಿ+ ಹಾಟ್‌ಸ್ಟಾರ್ ಯೋಜನೆಗಳೊಂದಿಗೆ ಕಂಪನಿಯ ಪ್ರಿಪೇಯ್ಡ್ ಬಳಕೆದಾರರು ಕ್ರಿಕೆಟ್ ವರ್ಲ್ಡ್ ಕಪ್ ಪಂದ್ಯಾವಳಿಯ ಲೈವ್ ಪಂದ್ಯಗಳನ್ನು HD ಗುಣಮಟ್ಟದಲ್ಲಿ ಕ್ರೀಡಾಂಗಣದಿಂದ ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಪಡೆಯಲಿದ್ದಾರೆ. ಜಿಯೋ 28 ದಿನಗಳ ಮಾಸಿಕ ಯೋಜನೆಯನ್ನು ಕೂಡ ನೀಡಿದ್ದು, ಇದರಲ್ಲಿ ದಿನಕ್ಕೆ 2 GB ಡೇಟಾ ಪ್ರಯೋಜನ ಸಿಗಲಿದ್ದು, ಇದು ಒಂದು ವರ್ಷದವರೆಗೆ ಡಿಸ್ನಿ+ ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯೊಂದಿಗೆ ಬರುತ್ತದೆ. ಜಿಯೋ ವಾರ್ಷಿಕ ಪ್ರಿಪೇಯ್ಡ್ ಯೋಜನೆಯ ಬೆಲೆ 3,178 ರೂ.ಆಗಿದ್ದು, ಇದರಲ್ಲಿ, ನೀವು ದಿನಕ್ಕೆ 2 GB ಡೇಟಾವನ್ನು ಹಾಗೂ ಒಂದು ವರ್ಷಕ್ಕೆ Disney + Hotstar ನ ಚಂದಾದಾರಿಕೆಯನ್ನು ಪಡೆಯಬಹುದು.

ದೇಶಾದ್ಯಂತ ವಿಶ್ವಕಪ್ ಕ್ರಿಕೆಟ್ ನೋಡಲು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಹೊಸ ಡಿಸ್ನಿ+ ಹಾಟ್‌ಸ್ಟಾರ್ ಯೋಜನೆಗಳೊಂದಿಗೆ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಬಳಕೆದಾರರು ಈ ಪಂದ್ಯಾವಳಿಯ ಲೈವ್ ಪಂದ್ಯಗಳನ್ನು HD ಗುಣಮಟ್ಟದಲ್ಲಿ ಕ್ರೀಡಾಂಗಣದಿಂದ ಉಚಿತವಾಗಿ ವೀಕ್ಷಿಸುವ ಸುವರ್ಣ ಅವಕಾಶ ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಕಂಪನಿಯು ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದ್ದು, ಇದು ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು Disney+ Hotstar ಮೊಬೈಲ್ ಅಪ್ಲಿಕೇಶನ್‌ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ. ಈ ಪ್ಲಾನ್‌ಗಳನ್ನು ಆಯ್ಕೆ ಮಾಡುವ ಬಳಕೆದಾರರು ರಿಚಾರ್ಜ್ ಮಾಡಿದ ಅದೇ ರಿಲಯನ್ಸ್ ಜಿಯೋ ಸಂಖ್ಯೆಯಿಂದ ತಮ್ಮ ಮೊಬೈಲ್‌ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ಗೆ ಸೈನ್ ಇನ್ ಮಾಡಬೇಕಾಗುತ್ತದೆ.

ಜಿಯೋ ಪ್ರಿಪೇಯ್ಡ್ ಬಳಕೆದಾರರು ಮಾಸಿಕ ಇಲ್ಲವೇ ತ್ರೈಮಾಸಿಕ ರೀಚಾರ್ಜ್ ಯೋಜನೆಗಳನ್ನು ಆಯ್ಕೆ ಮಾಡಲು ಅವಕಾಶವಿದೆ. 84 ದಿನಗಳ ಮಾನ್ಯತೆ ಜೊತೆಗೆ ಡಿಸ್ನಿ + ಹಾಟ್‌ಸ್ಟಾರ್‌ನ ಮೂರು ತಿಂಗಳ ಚಂದಾದಾರಿಕೆಯ ತ್ರೈಮಾಸಿಕ ರೀಚಾರ್ಜ್ ಯೋಜನೆಯ ಬೆಲೆ 758 ರೂ.ಆಗಿದೆ. ಈ ಯೋಜನೆಯ ಮೂಲಕ ಬಳಕೆದಾರರು ದಿನಕ್ಕೆ 1.5 GB ಡೇಟಾವನ್ನು ಪಡೆಯಲಿದ್ದು, ದಿನಕ್ಕೆ 2 ಜಿಬಿ ಡೇಟಾ ಹೊಂದಿರುವ ಯೋಜನೆಗೆ ನೀವು 808 ರೂಪಾಯಿ ಪಾವತಿಸಬೇಕು. 28 ದಿನಗಳ ಮಾನ್ಯತೆ ಹೊಂದಿರುವ ಕಂಪನಿಯ ರೀಚಾರ್ಜ್ ಯೋಜನೆಯ ಬೆಲೆ 328 ರೂ. ಆಗಿದ್ದು, ಇದರಲ್ಲಿ 1.5 ಜಿಬಿ ಡೇಟಾ ಪ್ರಯೋಜನ ಪಡೆಯಬಹುದು. ಇದರ ಜೊತೆಗೆ 388 ರೂ. ರೀಚಾರ್ಜ್ ಯೋಜನೆಯಲ್ಲಿ ದಿನಕ್ಕೆ 2 ಜಿಬಿ ಡೇಟಾ ಪ್ರಯೋಜನ ಸಿಗಲಿದೆ.

ಇದನ್ನೂ ಓದಿ: Haryana Pran Vayu Devta Pension:ಈ ತಿಂಗಳಿಂದ ಮರಗಳಿಗೂ ಸಿಗಲಿದೆ ಪಿಂಚಣಿ – 70 ವರ್ಷ ಮೇಲ್ಪಟ್ಟ ಮರಗಳಿದ್ರೆ ಪ್ರತೀ ವರ್ಷ ಸಿಗಲಿದೆ 2,750 ರೂ. ಗ್ಯಾರಂಟಿ !!

Leave A Reply

Your email address will not be published.