Kolara : ಕುಡಿದು ಮೂತ್ರ ಸಿಡಿಸಿದ ಆಸಾಮಿ- ಪ್ರಶ್ನಿಸಿದಕ್ಕೆ ನಡೆದೇ ಹೋಯ್ತು ಮಾರಾಮಾರಿ, ಬಿದ್ದೆ ಬಿಡ್ತು ಹೆಣ !!

Crime news kolara man kills trader for questioning urinating on him

Kolara: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ,ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೇಯ ಕೃತ್ಯ ಎಸಗಿದ ಘಟನೆ ವರದಿಯಾಗಿದೆ.ಕೋಲಾರ ಜಿಲ್ಲೆಯ (Kolara News) ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಕುಡಿತದ ಮತ್ತಿನಲ್ಲಿದ್ದ (Alcoholic) ವ್ಯಕ್ತಿ ಮೂತ್ರ (Urination) ಮಾಡುವಾಗ ಇನ್ನೊಬ್ಬನ ಮೇಲೆ ಸಿಡಿಸಿದ್ದಾನೆ. ಈ ಹೇಯ ಕೃತ್ಯ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲದೇ ಮನೆಗೆ ನುಗ್ಗಿ ಕೊಲೆ (Murder Case) ಮಾಡಿರುವ ಘಟನೆ ವರದಿಯಾಗಿದೆ.

ಕೋಲಾರ ಜಿಲ್ಲೆಯ ಗೌನಿಪಲ್ಲಿ ತರಕಾರಿ ವ್ಯಾಪಾರ ಮಾಡುತ್ತಾ ಎಲ್ಲರ ವಿಶ್ವಾಸಕ್ಕೆ ಪಾತ್ರನಾಗಿದ್ದ ವೆಂಕಟರಾಯಪ್ಪ(55) ಅವರ ಮೇಲೆ ಶಂಕರಪ್ಪ(45) ಕುಡಿದ ಮತ್ತಿನಲ್ಲಿ ಮೂತ್ರ ಮಾಡಿ ಸಿಡಿಸಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಶಂಕರಪ್ಪ ಬೀದಿ ರಂಪಾಟ ಮಾಡಿದ್ದಾನೆ. ಈ ಸಂದರ್ಭ ಗೌನಿಪಲ್ಲಿ ಸಂತೆ ಮೈದಾನದಲ್ಲಿದ್ದವರು ಮತ್ತು ವ್ಯಾಪಾರಿಗಳು ಸೇರಿ ಜಗಳವನ್ನು ಬಿಡಿಸಿದ್ದಾರೆ.

ವೆಂಕಟರಾಯಪ್ಪ ಅವರು ವ್ಯಾಪಾರ ಮುಗಿಸಿ ರಾತ್ರಿ ಮನೆಗೆ ಹೋದ ನಂತರ ಏಕಏಕಿ ಶಂಕರಪ್ಪ ಮನೆಯೊಳಗೆ ನುಗ್ಗಿ ಹಲ್ಲೆ ಮಾಡಲು ಮುಂದಾಗಿದ್ದಾನೆ. ಶಂಕರಪ್ಪ ವೆಂಕಟರಾಯಪ್ಪರನ್ನು ನೆಲಕ್ಕೆ ಕೆಡವಿ ಹಾಕಿ ಎದೆಗೆ ಗುದ್ದಿದ್ದಾನೆ. ನಂತರ ಎದೆಗೆ ಮರ್ಮಾಂಗಕ್ಕೆ ಹೊಡೆದಿದ್ದಾನೆ.ನಂತರ ಮನೆಯವರನ್ನು ಹೆದರಿಸಿ ತೆರಳಿದ್ದಾನೆ. ವೆಂಕಟರಾಯಪ್ಪನವರನ್ನು ಮನೆಯವರು ಶ್ರೀನಿವಾಸಪುರ ಆಸ್ಪತ್ರೆಗೆ ಸಾಗಿಸುವಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರಕರಣ ದಾಖಲಾಗಿದೆ. ಕೊಲೆ ಮಾಡಿದ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Basanagouda Patil Yatnal Deepavali Gift:ದೀಪಾವಳಿಗೆ ಈ ಕುಟುಂಬಗಳಿಗೆ ಸಿಗ್ತಿದೆ 2,000 !! ನಿಮಗೂ ಸಿಗುತ್ತದೆಯೇ? ಈಗಲೇ ಚೆಕ್ ಮಾಡಿ

Leave A Reply

Your email address will not be published.