Basanagouda Patil Yatnal Deepavali Gift:ದೀಪಾವಳಿಗೆ ಈ ಕುಟುಂಬಗಳಿಗೆ ಸಿಗ್ತಿದೆ 2,000 !! ನಿಮಗೂ ಸಿಗುತ್ತದೆಯೇ? ಈಗಲೇ ಚೆಕ್ ಮಾಡಿ

Political news BJP MLA Basanagouda Patil yatnal planning to give 2000 Rupees for these families news

Basanagouda Patil Yatnal Deepavali Gift : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಇತ್ತೀಚೆಗಷ್ಟೇ ಕ್ಷೇತ್ರದ ಎಲ್ಲ ಗಣೇಶ ಮಂಡಳಿಗಳಿಗೆ ತಲಾ 5 ಸಾವಿರ ರೂ. ನೀಡಲು ತೀರ್ಮಾನ ಕೈಗೊಂಡಿದ್ದರು. ಇದೀಗ, ದೀಪಾವಳಿ ಹಬ್ಬದ ಸಂಭ್ರಮ ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್(Basanagouda Patil Yatnal Deepavali Gift) ಈ ಕ್ಷೇತ್ರದ ಜನರಿಗೆ ದೀಪಾವಳಿ ಹಬ್ಬದ ಗಿಫ್ಟ್‌ (Deeapvali Gift)ನೀಡಲಿದ್ದಾರೆ.

Basanagouda Patil Yatnal Deepavali Gift

ಗಣೇಶೋತ್ಸವ ಸಂದರ್ಭದಲ್ಲಿ ವಿಜಯಪುರ ನಗರದ ಎಲ್ಲ ಗಜಾನನ ಮಂಡಳಿಗಳಿಗೆ ತಲಾ 5 ಸಾವಿರ ರೂ. ದೇಣಿಗೆಯನ್ನು ಬಸನಗೌಡ ಪಾಟೀಲ್‌ ಯತ್ನಾಳ್‌ ನೀಡಿದ್ದರು. ಇದೀಗ, ವಿಜಯಪುರ ನಗರ ಕ್ಷೇತ್ರದ ಜನರಿಗೆ ಯತ್ನಾಳ್‌ ದೀಪಾವಳಿ ಗಿಫ್ಟ್‌ ನೀಡಲು ಸಚಿವರು ತೀರ್ಮಾನ ಮಾಡಿದ್ದಾರೆ. ಹೀಗಾಗಿ, ವಿಜಯಪುರ ಕ್ಷೇತ್ರದ 11 ಸಾವಿರ ಕುಟುಂಬಗಳಿಗೆ ತಲಾ 2 ಸಾವಿರ ರೂ. ಉಡುಗೊರೆ ನೀಡಲಿದ್ದಾರೆ.

ವಿಜಯಪುರದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದ ಸೇನೆಯಿಂದ ಸನಾತನ ಹಿಂದೂ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಗಿದ್ದ ಸಂದರ್ಭ ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಎಲ್ಲ ಚುನಾವಣೆ ಸಂದರ್ಭ ಆಸೆ, ಅಮಿಷ ಒಡ್ಡುತ್ತಾರೆ. ಆದರೆ, ನಾನು ದೀಪಾವಳಿ ಹಬ್ಬ ಆಚರಿಸಲು ಕ್ಷೇತ್ರದ 11 ಸಾವಿರ ಕುಟುಂಬಗಳಿಗೆ ತಲಾ 2 ಸಾವಿರ ನೀಡಲು ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.ಇದಕ್ಕಾಗಿ ಸುಮಾರು 2.2 ಕೋಟಿ ರೂ. ಖರ್ಚಾಗಲಿದೆ ಎಂದು ಕೂಡ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾಹಿತಿ ನೀಡಿದ್ದಾರೆ.

“ಸನಾತನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಸಾಕಷ್ಟು ಜನ ಬಂದು ಹೋದರೂ ಏನೂ ಮಾಡಲು ಆಗಿಲ್ಲ. ಉಳಿದ ಧರ್ಮಗಳಿಗೆ ಸಂಸ್ಥಾಪಕರಿದ್ದಾರೆ. ಆದರೆ, ನಮ್ಮ ಸನಾತನ ಹಿಂದೂ ಧರ್ಮ ದೇವರಿಂದ ಹುಟ್ಟಿಕೊಂಡಿದೆ. ಬ್ರಹ್ಮ, ವಿಷ್ಣು, ಮಹೇಶ್ವರರೇ ನಮ್ಮ ಧರ್ಮದ ಸಂಸ್ಥಾಪಕರು. ನಮ್ಮ ಧರ್ಮ ಯಾರಿಗೂ ಅನ್ಯಾಯ ಮಾಡಿಲ್ಲ. ಮತ್ತೇಕೆ ಮಾತನಾಡಬೇಕೆಂದು “ಇದೆ ವೇಳೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Rakhi Sawant:ರಾಖಿ ಸಾವಂತ್ ಬಯೋಪಿಕ್ ಗೆ ಕನ್ನಡದ ಈ ಖ್ಯಾತ ನಿರ್ದೇಶಕನದೇ ಡೈರೆಕ್ಷನ್ ?! ಏನಿದು ಹೊಸ ಸುದ್ದಿ ?!

Leave A Reply

Your email address will not be published.