iPhone 11: ಗಣೇಶ ಹಬ್ಬಕ್ಕೆ ಭರ್ಜರಿ ಆಫರ್ ಕೊಟ್ಟ ‘iPhone’ – ನೀವೆಂದೂ ಊಹಿಸದ ದರದಲ್ಲಿ ಕೈಗುಟಕಲಿದೆ ಈ ಫೋನ್

Technology NEWS Ganesh festival offer price cut on iPhone 11 buy only at 2999 rupees

Apple iPhone 11: ಖ್ಯಾತ Appleನ ಐಫೋನ್ ಕೊಂಡುಕೊಳ್ಳಬೇಕೆಂಬ ಆಸೆ ಎಲ್ಲರಲ್ಲೂ ಇದೆ. ಆದರೆ ಐಪೋನ್ ದುಬಾರಿ ಆಗಿರುವ ಕಾರಣ ಕನಸು ಹಾಗೆಯೇ ಉಳಿದಿರಬಹುದು. ಇದೀಗ ನಿಮ್ಮ ಕನಸು ನನಸು ಆಗಲಿದೆ. ಹೌದು, ಐಫೋನ್ 11(iPhone 11) ಅನ್ನು ಗ್ರಾಹಕರು ಕೈಗೆಟಕುವ ದರದಲ್ಲಿ ತಮ್ಮದಾಗಿಸಿಕೊಳ್ಳಬಹುದು.

ಹೊಸ ಐಫೋನ್ 15 ಬಿಡುಗಡೆ ಮೊದಲು, ಹಳೆಯ ಐಫೋನ್‌ಗಳ ಬೆಲೆ ಇದ್ದಕ್ಕಿದ್ದಂತೆ ಕುಸಿದಿದ್ದು, ಈಗ ಐಫೋನ್ 11 ಅನ್ನು 3 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

ಹೌದು, Apple Event 2023 ಅನ್ನು ಇಂದು ಅಂದರೆ ಸೆಪ್ಟೆಂಬರ್ 12 ರಂದು ಆಯೋಜಿಸಲಾಗಿದ್ದು, ಹೊಸ ಐಫೋನ್ 15 ಆಗಮನದ ಮೊದಲು, ಹಳೆಯ ಐಫೋನ್‌ಗಳ ಬೆಲೆಯನ್ನು, ಫ್ಲಿಪ್‌ಕಾರ್ಟ್ ಐಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತಿದೆ. ಆದ್ದರಿಂದ ನೀವು ಹೊಸ ಐಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಇದು ಅತ್ಯುತ್ತಮ ಸಮಯ. ಫ್ಲಿಪ್‌ಕಾರ್ಟ್‌ನಿಂದ ಐಫೋನ್ 11 ಅನ್ನು 3 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

iPhone 11ರ ಮಾರುಕಟ್ಟೆ ಬೆಲೆ 43,900 ರೂ. ಆಗಿದೆ. ಆದರೆ, ಇದು ಫ್ಲಿಪ್‌ಕಾರ್ಟ್‌ನಲ್ಲಿ 37,999 ರೂ.ಗೆ ಲಭ್ಯವಿದೆ. ಇನ್ನು ಫೋನ್ ಖರೀದಿಸಲು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, 1,900 ರೂಪಾಯಿ ರಿಯಾಯಿತಿ ಸಿಗುತ್ತದೆ. ಅದರ ನಂತರ ಫೋನ್ ಬೆಲೆ 36,099 ರೂ. ಆಗಲಿದೆ. ಇದಾದ ನಂತರ ಎಕ್ಸ್ ಚೇಂಜ್ ಆಫರ್ ಕೂಡಾ ಇದೆ.

Apple iPhone 11 ಎಕ್ಸ್ಚೇಂಜ್ ಆಫರ್ :
Apple iPhone 11ರ ಖರೀದಿ ಮೇಲೆ 33,100 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ನೀಡಲಾಗುತ್ತಿದೆ. ಈ ಆಫರ್ ಮೂಲಕ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಇಷ್ಟು ರಿಯಾಯಿತಿ ಸಿಗುತ್ತದೆ. ಆದರೆ, ಫೋನ್ ಇತ್ತೀಚಿನದ್ದಾಗಿದ್ದು, ಉತ್ತಮ ಸ್ಥಿತಿಯಲ್ಲಿರಬೇಕು. ಹೀಗೆ ಸಂಪೂರ್ಣ ರಿಯಾಯಿತಿ ಪಡೆಯುವುದು ಸಾಧ್ಯವಾದರೆ
Apple iPhone 11 ಬೆಲೆ 2,999 ರೂ.ಗೆ ಇಳಿಯುತ್ತದೆ.

iPhone 11 ವೈಶಿಷ್ಟತೆ:
• ಐಫೋನ್ 11 ಸ್ಮಾರ್ಟ್‌ಫೋನ್‌ 6.1 ಇಂಚಿನ ಲಿಕ್ವಿಡ್ ರೆಟಿನಾ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 828 x 1792 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದೆ.
• ಇದು ಆಪಲ್‌ನ A13 ಬಯೋನಿಕ್ ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಈ ಪ್ರೀಮಿಯಂ ಸ್ಮಾರ್ಟ್‌ಫೋನ್ 12 ಮೆಗಾಪಿಕ್ಸೆಲ್ ಲೆನ್ಸ್‌ಗಳೊಂದಿಗೆ ಎರಡು ಕ್ಯಾಮೆರಾಗಳನ್ನು ಹೊಂದಿದೆ.
• ಇದರೊಂದಿಗೆ ನೀವು 4K ಗುಣಮಟ್ಟದಲ್ಲಿ ಅತ್ಯುತ್ತಮ ಫೋಟೋಗಳು ಮತ್ತು ವೀಡಿಯೊಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ.
• ಇದು ನೈಟ್ ಮೋಡ್, ಪೋರ್ಟ್ರೇಟ್ ಮೋಡ್ ಮತ್ತು ಸ್ಮಾರ್ಟ್ HDRನಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ: ಹಿರಿಯ ನಾಗರಿಕರೆ.. ನಿವೃತ್ತಿ ನಂತರವೂ ನಿಮಗೆ ಸಿಗಲಿದೆ ಸರ್ಕಾರದ ಆದಾಯ !! ಹೊಸ ಯೋಜನೆ ಜಾರಿಗೆ ಸರ್ಕಾರದಿಂದ ಮಹತ್ವದ ನಿರ್ಧಾರ !!

Leave A Reply

Your email address will not be published.