Senior Citizen Investment: ಹಿರಿಯ ನಾಗರಿಕರೆ.. ನಿವೃತ್ತಿ ನಂತರವೂ ನಿಮಗೆ ಸಿಗಲಿದೆ ಸರ್ಕಾರದ ಆದಾಯ !! ಹೊಸ ಯೋಜನೆ ಜಾರಿಗೆ ಸರ್ಕಾರದಿಂದ ಮಹತ್ವದ ನಿರ್ಧಾರ !!

Senior citizen investment tips super schemes for senior citizen after retirement

Senior Citizen Investment : ಪ್ರತಿಯೊಬ್ಬರಿಗೂ ಒತ್ತಡ ರಹಿತ ಜೀವನ ನಡೆಸಲು ನಿವೃತ್ತಿ ಯೋಜನೆ (Retirement Planning) ಅತ್ಯಗತ್ಯ. ಅದಲ್ಲದೆ ಹೂಡಿಕೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡುವುದರ ಜೊತೆಗೆ ಅದಕ್ಕಿಂತ ಹೆಚ್ಚು ರಿಟರ್ನ್ ಎಷ್ಟಿದೆ ಎಂಬ ಕಡೆ ಗಮನ ಹರಿಸಬೇಕು . ಯಾಕೆಂದರೆ ಇದರಿಂದ ನಿಮ್ಮ ಉಳಿದ ಜೀವನವನ್ನು ಸಂತೋಷದಿಂದ ಕಳೆಯಬಹುದು.

ಮುಖ್ಯವಾಗಿ ಹಿರಿಯ ನಾಗರಿಕರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಸರ್ಕಾರ ಹೊಸ ಹೊಸ ಯೋಜನೆ ಪರಿಚಯಿಸುತ್ತಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಲಕ್ಷಗಳಲ್ಲಿ ಹಣ ಸಂಗ್ರಹಿಸಬಹುದು. ಮೊದಲು ನೀವು ಅಂತಹ ಯೋಜನೆ ಬಗ್ಗೆ ಮಾಹಿತಿ ತಿಳಿಯಿರಿ.

ಹಿರಿಯ ನಾಗರಿಕ ಉಳಿತಾಯ ಯೋಜನೆ (Senior Citizen Investment) :
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸಣ್ಣ ಉಳಿತಾಯ ಯೋಜನೆ, ಅಂದರೆ ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS)ಯಲ್ಲಿ ಹೂಡಿಕೆ ಮಾಡಬಹುದು. ಈ ಹೂಡಿಕೆ ಮೇಲೆ ನಿಯಮಿತ ಬಡ್ಡಿ ಆದಾಯವನ್ನು ಗಳಿಸಬಹುದು.

ಮುಖ್ಯವಾಗಿ ಈ ಯೋಜನೆಯಲ್ಲಿ ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ. ಠೇವಣಿ ಮಾಡಿದ ದಿನಾಂಕದಿಂದ 31ನೇ ಮಾರ್ಚ್/30ನೇ ಜೂನ್/30ನೇ ಸೆಪ್ಟೆಂಬರ್/31ನೇ ಡಿಸೆಂಬರ್ ವರೆಗೆ ಅನ್ವಯಿಸುತ್ತದೆ ಈ ಬಡ್ಡಿ ಅನ್ವಯವಾಗುತ್ತದೆ. ಇದರ ಅಡಿಯಲ್ಲಿ, ಅಸಲು ಮೊತ್ತಕ್ಕೆ ಐದು ವರ್ಷಗಳ ಲಾಕ್-ಇನ್ ಅವಧಿ ಇದೆ.

ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ (SCSS) ಒಬ್ಬ ವ್ಯಕ್ತಿಯಿಂದ ತೆರೆಯಲಾದ ಎಲ್ಲಾ SCSS ಖಾತೆಗಳು ಕನಿಷ್ಠ ಠೇವಣಿ 1000 ರೂ ಮತ್ತು ಗರಿಷ್ಠ ಮಿತಿ 30 ಲಕ್ಷ ರೂ ಆಗಿದೆ. ಮತ್ತು SCSS ಖಾತೆಯನ್ನು ಸಂಗಾತಿಯೊಂದಿಗೆ ಜಂಟಿಯಾಗಿಯೂ ತೆರೆಯಬಹುದು. ಇಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಠೇವಣಿಗಳನ್ನು ಚೆಕ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ. ಈ ಯೋಜನೆಯಲ್ಲಿ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡಾ ಸಿಗುತ್ತದೆ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಖಾತೆ :
POMIS (ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ) ಮತ್ತೊಂದು ಸಣ್ಣ ಉಳಿತಾಯ ಯೋಜನೆಯಾಗಿದೆ. ಪ್ರಸ್ತುತ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ 9 ಲಕ್ಷದವರೆಗೆ ಉಳಿತಾಯ ಮಾಡಬಹುದು. ಅದೇ ಸಮಯದಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ ಪ್ರತಿ ತಿಂಗಳು ಆದಾಯವನ್ನು ಪಡೆಯಬಹುದು.

ಪ್ರಸ್ತುತ ಈ ಯೋಜನೆಯ ಬಡ್ಡಿ ದರವು ಶೇಕಡಾ 7.4 ಆಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರ ಬದಲಾಗುತ್ತದೆ. ಆದರೆ POMIS ನಲ್ಲಿನ ಹೂಡಿಕೆಗಳ ಮೇಲೆ ತೆರಿಗೆ ವಿನಾಯಿತಿ ಇರುವುದಿಲ್ಲ. ಇದರಲ್ಲಿ ಸಿಗುವ ಬಡ್ಡಿಯು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ.

ಸ್ಥಿರ ಠೇವಣಿ (FD):
ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಗರಿಷ್ಠ ಹೂಡಿಕೆ ಮಿತಿಯನ್ನು ಹೊಂದಿದೆ. ಆದರೆ, FD ಯೋಜನೆಯಲ್ಲಿ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಇದಲ್ಲದೆ ಇದು ಹಲವು ಆಯ್ಕೆಗಳೊಂದಿಗೆ ಬರುತ್ತದೆ. ಆದ್ದರಿಂದ, ಇದು ಅವರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಆದಾಯದ ಮೂಲವಾಗಿದೆ.

ಇದನ್ನೂ ಓದಿ: ನೀವೇನಾದರೂ ಮನೆಯಲ್ಲಿ ಈ ಗಿಡಗಳನ್ನು ಬೆಳೆಸ್ತಿದಿದ್ದೀರಾ ? ಹಾಗಿದ್ರೆ ನೀವೇ ಖುದ್ದು ನಷ್ಟವನ್ನು ಮನೆಯೊಳಗೆ ಕರೆದಂತೆ!

Leave A Reply

Your email address will not be published.