Kodagu: ಕೊಡಗು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಭೀಕರ ಹತ್ಯೆ ಪ್ರಕರಣ; ರುಂಡ ಪತ್ತೆ

Kodagu: SSLC ಪಾಸಾದ ವಿದ್ಯಾರ್ಥಿನಿ ಮೀನಾ (16) ತಲೆ ಕಡಿದು ಹತ್ಯೆ ಮಾಡಿದ್ದ ಮೊಣ್ಣಂಡ ಪ್ರಕಾಶ್‌ ಯಾನ್‌ ಪಾಪು (34) ಆರೋಪಿಯನ್ನು ಪೊಲೀಸರು ಶನಿವಾರ ಬೆಳಗ್ಗೆ ಬಂಧನ ಮಾಡಿದ್ದರು. ಇದೀಗ ಮೃತ ಬಾಲಕಿಯ ರುಂಡವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: Kodagu: SSLC ವಿದ್ಯಾರ್ಥಿನಿಯ ತಲೆ ಕಡಿದು ಹತ್ಯೆ ; ಆರೋಪಿ ಬಂಧನ

ಹತ್ಯೆ ಮಾಡಿದ ಸ್ವಲ್ಪ ದೂರದಲ್ಲಿಯೇ ಬಾಲಕಿಯ ತಲೆ ಪತ್ತೆಯಾಗಿದ್ದು, ಹತ್ಯೆ ಮಾಡಿದ ನಂತರ ತಲೆಯನ್ನು ಆರೋಪಿ ಪ್ರಕಾಶ್‌ ಮರದ ಮೇಲೆ ಇಟ್ಟಿದ್ದು. ಇದೀಗ ಪೊಲೀಸರು ಬಾಲಕಿಯ ತಲೆ ಹಾಗೂ ಆಕೆಯ ಚಪ್ಪಲಿಯನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Pakistan Honey Trapping: ಪಾಕಿಸ್ತಾನಿ ಮಹಿಳೆಯ ಹನಿಟ್ರ್ಯಾಪ್‌ಗೆ ಸಿಲುಕಿದ ಭಾರತೀಯ ಡ್ರೋನ್ ಇಂಜಿನಿಯರ್ : ಸೇನೆಯ ಪ್ರಮುಖ ಮಾಹಿತಿ ಸೋರಿಕೆ

ಪ್ಲಾಸ್ಟಿಕ್‌ ಚೀಲದ ಬ್ಯಾಗಿಗೆ ಅಪ್ರಾಪ್ತೆಯ ತಲೆಯನ್ನು ಹಾಕಿ, ಆರೋಪಿಯನ್ನು ಸ್ಥಳ ಮಹಜರಿಗೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಮನೆ ಬಳಿ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗೆ ಪೊಲೀಸರು ತಲೆಯನ್ನು ಕೊಡಗು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಿದ್ದಾರೆ.

Photo Credit: News 18 Kannada

 

ಬಾಲಕಿಯ ಮುಂಡಕ್ಕೆ ರುಂಡ ಹೊಂದಾಣಿಕೆ ಆಗುತ್ತಾ ಎಂದು ಪರಿಶೀಲನೆ ಮಾಡಿ, ಹೊಂದಾಣಿಕೆ ಆದಲ್ಲಿ ಬಳಿಕ ಶವ ಪರೀಕ್ಷೆ ನಡೆಯಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: POK ಯಲ್ಲಿ ಪಾಕ್ ಸೇನೆಯ ಮೇಲೆ ಸ್ಥಳೀಯರ ದಾಳಿ, ಮೊದಲ ಸಲ ಹಾರಿದ ಭಾರತ ಧ್ವಜ, ಭುಗಿಲೆದ್ದು ಹಿಂಸಾಚಾರ !!

Leave A Reply

Your email address will not be published.