Bengaluru City University: ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಉಪನ್ಯಾಸಕ ಹುದ್ದೆ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

Bengaluru City University: ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಹಾಗೂ ವಿಶ್ವವಿದ್ಯಾನಿಲಯದ ಬಹುಶಿಸ್ತೀಯ ಮಹಿಳಾ ಘಟಕ ಕಾಲೇಜು (Bengaluru City University), ಮಲ್ಲೇಶ್ವರಂನಲ್ಲಿ ಈ ಕೆಳಕಂಡ ವಿವಿಧ ಸ್ನಾತಕೋತ್ತರ / ಸ್ನಾತಕ ವಿಷಯಗಳಿಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸ್ನಾತಕ / ಸ್ನಾತಕೋತ್ತರ ವಿಷಯಗಳ ಬೋಧನಾ ಕಾರ್ಯದ ನಿರ್ವಹಣೆಗಾಗಿ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ವಿಶ್ವವಿದ್ಯಾನಿಲಯದ ವೆಬ್‌ ಸೈಟ್ www.bcu.ac.in ನಲ್ಲಿ ತೋರಿಸಿರುವ bcugfportal.in ಲಿಂಕ್‌ನ್ನು ಆಯ್ಕೆ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 07,09,2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22.09.2023ರ ಸಂಜೆ 5.00 ಗಂಟೆಯೊಳಗೆ

ಅರ್ಜಿ ಶುಲ್ಕ: ನಿರ್ವಹಣಾ ಶುಲ್ಕ ರೂ. 200/- (SC/ST/CAT-1 Rs.100/-) ಗಳೊಂದಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ ವಿಶ್ವವಿದ್ಯಾನಿಲಯದ ವೆಬ್ ಸೈಟ್ www.bcu.ac.in ನೋಡಬಹುದು.

ಭರ್ತಿ ಮಾಡಿದ ಅರ್ಜಿಯ ಭೌತಿಕ ಪ್ರತಿಯನ್ನು ದಿನಾಂಕ: 30.09.2023ರೊಳಗೆ ಕುಲಸಚಿವರ ಕಛೇರಿ, ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಸೆಂಟ್ರಲ್ ಕಾಲೇಜ್ ಆವರಣ, ಡಾ|| ಅಂಬೇಡ್ಕರ್ ವೀಧಿ, ಬೆಂಗಳೂರು – 560 001ರಲ್ಲಿ ಸಲ್ಲಿಸಬಹುದಾಗಿದೆ.

ವಿಜ್ಞಾನ ವಿಷಯಗಳು : 1. ರಸಾಯನಶಾಸ್ತ್ರ 2. ಜೀವರಸಾಯನಶಾಸ್ತ್ರ 3, ಸಸ್ಯವಿಜ್ಞಾನ 4, ಪ್ರಾಣಿವಿಜ್ಞಾನ 5. ಗಣಿತಶಾಸ್ತ್ರ 6. ಭೌತಶಾಸ್ತ್ರ 7. ಉಡುಪು ಮತ್ತು ತಂತ್ರಜ್ಞಾನ 8. ಪರಿಸರ ವಿಜ್ಞಾನ 9. ಗಣಕ ವಿಜ್ಞಾನ(ಬಿಸಿಎ/ಎಂ.ಎಸ್ಸಿ)

ಕಲಾ ವಿಷಯಗಳು: 1. ಕನ್ನಡ 2, ಇಂಗ್ಲೀಷ್ 3, ಅರ್ಥಶಾಸ್ತ್ರ 4, ಇತಿಹಾಸ 5, ರಾಜ್ಯಶಾಸ್ತ್ರ 6. ಸಮಾಜಶಾಸ್ತ್ರ 7. ಸಮಾಜಕಾರ್ಯ 8. ಸಂವಹನ ಮತ್ತು ಪತ್ರಿಕೋದ್ಯಮ 9. ಜಾಗತಿಕ ಭಾಷೆಗಳು, (ಜರ್ಮನ್, ಫ್ರೆಂಚ್ , ಸ್ಪ್ಯಾನಿಷ್, ಜಪಾನೀಸ್, ಕೊರಿಯನ್, ಚೈನೀಸ್) 10. ಹಿಂದಿ

ವಾಣಿಜ್ಯ ವಿಷಯಗಳು: 1. ಎಂ.ಕಾಂ., (ಮಾಸ್ಟರ್ ಆಫ್ ಕಾಮರ್ಸ್‌) 2, ಎಂ.ಕಾಂ. (ಫೈನಾನ್ಸ್ ಮತ್ತು ಅಕೌಂಟಿಂಗ್), 3. ಎಂ.ಕಾಂ (ಇಂಟ‌ನ್ಯಾಷನಲ್ ಬಿಸಿನೆಸ್), ಎಂ.ಟಿ.ಟಿ.ಎಂ. (ಮಾಸ್ಟರ್ ಆಫ್ ಟೂರಿಸಂ ಅಂಡ್ ಟ್ರಾವಲ್ ಮ್ಯಾನೇಜ್‌ಮೆಂಟ್), ಬಿ.ಕಾಂ, ಬಿ.ಕಾಂ (Accounting & Finance), ಬಿ.ಕಾಂ (Data Analytics)

ಮ್ಯಾನೇಜೆಮೆಂಟ್: 1. ಎಂ.ಬಿ.ಎ. (ಡೇ ಮತ್ತು ಸಂಜೆ), ಬಿಬಿಎ

ಇದನ್ನೂ ಓದಿ: ರಾಜ್ಯದಲ್ಲಿ ಬಂಪರ್‌ ಖಾಲಿ ಹುದ್ದೆ, 2 ತಿಂಗಳಲ್ಲಿ 22,000 ಹುದ್ದೆಗಳ ಶೀಘ್ರ ಭರ್ತಿ- ಸರಕಾರದ ಆದೇಶ

Leave A Reply

Your email address will not be published.