Tilak Mehta: ಅಬ್ಬಬ್ಬಾ…ಆಟ ಆಡೋ ವಯಸ್ಸಲ್ಲೇ 100 ಕೋಟಿ ಅಧಿಪತಿಯಾದ 13 ರ ಪೋರ !! ಇವನ ಮಾಸ್ಟರ್ ಪ್ಲಾನ್ ಕೇಳಿದ್ರೆ ನೀವೇ ದಂಗಾಗ್ತೀರಾ !!

Tilak Mehta success story India’s youngest entrepreneur with a 100 crore annual turnover

Tilak Mehta: 13 ನೇ ವಯಸ್ಸು ಇರೋದು ಮೈದಾನಕ್ಕೆ ಇಳಿದು ಆಟ ಆಡಲು. ಅಥವಾ ಚಿಕ್ಕ ವಯಸ್ಸಿನಲ್ಲಿ ಪುಸ್ತಕ ಹಿಡಿದು ತಲೆ ಬಗ್ಗಿಸಿ ಓದುವ ಸಮಯ. ಆದರೆ ಇಲ್ಲೊಬ್ಬ ಇಷ್ಟು ಚಿಕ್ಕ ವಯಸ್ಸಿನಲ್ಲೇ ವ್ಯವಹಾರವನ್ನು ಪ್ರಾರಂಭಿಸಿ ಬಿಟ್ಟು ಇದೀಗ 100 ಕೋಟಿ ರೂಪಾಯಿ ಗಳಿಸಿಯೇ ಬಿಟ್ಟಿದ್ದಾನೆ. ಆತ ಬೇರೆ ಯಾರೂ ಅಲ್ಲ, ಮುಂಬೈ ಮೂಲದ ತಿಲಕ್ ಮೆಹ್ತಾ( Tilak Mehta) ಎಂಬ ಬಾಲ ಉದ್ಯಮಿ. ಹೌದು, ಆತ ತನ್ನ ಕೇವಲ 13 ನೇ ವಯಸ್ಸಿನಲ್ಲಿ ವ್ಯವಹಾರವನ್ನು ಪ್ರಾರಂಭಿಸಿ ಬಿಟ್ಟಿದ್ದು, ಈಗ 100 ಕೋಟಿ ರೂಪಾಯಿಗಳ ಕಂಪನಿಯ ಮಾಲೀಕರಾಗಿದ್ದು, ಭಾರತದ ಅತ್ಯಂತ ಕಿರಿಯ ಉದ್ಯಮಿಗಳಲ್ಲಿ ಒಬ್ಬನಾಗಿದ್ದಾನೆ. ಬನ್ನಿ ಆತನ ಸಾಹಸದ ಅವರ ಕಥೆಯನ್ನು ಇಲ್ಲಿ ತಿಳಿಯೋಣ.

ಈತ ಬಿಸಿನೆಸ್ ಮ್ಯಾನ್ ಆದದ್ದು ಹೀಗೆ ?
13 ವರ್ಷದ ಬಾಲಕ ತಿಲಕ್ ಮೆಹ್ತಾ ಒಮ್ಮೆ ತನ್ನ ಚಿಕ್ಕಪ್ಪನ ಮನೆಗೆ ಭೇಟಿ ನೀಡಿದ್ದ. ಆ ತಾತ ತನ್ನ ಪುಸ್ತಕಗಳನ್ನು ಚಿಕ್ಕಪ್ಪನ ಮನೆಯಲ್ಲಿ ಮರೆತು ಬಂದಿದ್ದ. ಆ ನಂತರ ಅದು ಆತನಿಗೆ ಗೊತ್ತಾಯಿತು. ಅವನು ತನ್ನ ಚಿಕ್ಕಪ್ಪನ ಸ್ಥಳದಲ್ಲಿ ತನ್ನ ಪುಸ್ತಕಗಳನ್ನು ಬಿಟ್ಟು ಹೋಗಿರುವುದನ್ನು ಅರಿತುಕೊಂಡ ನಂತರ ಮುಂಬರುವ ಪರೀಕ್ಷೆಗಳಿಗೆ ತನ್ನ ಸಿದ್ಧತೆಗಳನ್ನು ಪ್ರಾರಂಭಿಸಲು ತಕ್ಷಣವೇ ಪುಸ್ತಕಗಳು ಜರೂರಾಗಿ ಅಗತ್ಯವಿದೆ ಎನ್ನಿಸಿದೆ ಆತನಿಗೆ.

ಇದೇ ಸಂದಿಗ್ಧತೆಯಲ್ಲಿ ಸಿಲುಕಿದ ಆತ ಹೇಗಾದರೂ ಜರುರಾಗಿ ಆ ಪುಸ್ತಕಗಳನ್ನು ತನ್ನ ಮನೆಗೆ ತಂದುಕೊಳ್ಳಬೇಕೆಂದು ಆತ ಯೋಚಿಸಿದ್ದಾನೆ. ತನ್ನ ಪಾರ್ಸೆಲ್‌ ಅನ್ನು ಒಂದೇ ದಿನ ತನ್ನ ಮನೆಗೆ ತಲುಪಿಸಬಹುದಾದ ಕೊರಿಯರು ಸರ್ವೀಸ್ ಗಳಿಗಾಗಿ ಆತ ಹುಡುಕಾಡಿದ್ದಾನೆ. ಪುಸ್ತಕ ವಿತರಣೆಗಾಗಿ ವಿವಿಧ ಏಜೆನ್ಸಿಗಳ ಬಾಗಿಲು ತಟ್ಟಿದ್ದನಾತ. ಆದರೆ ಕೊರಿಯರ್ ಸೇವೆಗಳು ತುಂಬಾ ದುಬಾರಿಯಾಗಿದ್ದು, ಅದೇ ದಿನದಲ್ಲಿ ವಿತರಣೆಯ ಸರ್ವೀಸ್ ಲಭ್ಯವಿಲ್ಲ ಎನ್ನುವ ಮಾಹಿತಿಯನ್ನು ಕೊರಿಯರ್ ಕಂಪನಿಗಳು ತಿಳಿಸಿದ್ದಾರೆ. ತನ್ನ ಸಮಸ್ಯೆಗೆ ಪರಿಹಾರ ಸಿಗದ ಕಾರಣದಿಂದಲೇ, ಆತನ ಮನಸ್ಸಿನಲ್ಲಿ ಒಂದು ಕಂಪನಿ ಹುಟ್ಟಿಕೊಂಡಿದೆ.

ಹೇಗಾದರೂ ಸರಿ, ವ್ಯಕ್ತಿಯು ತುರ್ತು ಸಂದರ್ಭಗಳಲ್ಲಿ ತಮ್ಮ ಪಾರ್ಸೆಲ್ ಅನ್ನು ಸಾಧ್ಯವಾದಷ್ಟು ಬೇಗ ಪಡೆಯಲು ಸಾಧ್ಯವಿರುವ ಹಲವು ಮಾರ್ಗಗಳ ಬಗ್ಗೆ ಯೋಚಿಸುವಂತೆ ಈ ಘಟನೆ ಆತನನ್ನು ಮಾಡಿದೆ. ಮನಸ್ಸಿನೊಳಗೆ ಯೋಚನೆ ಬಲವಾಗುತ್ತಿದ್ದಂತೆ ಆತ ತನ್ನ ಕಂಪನಿ ಶುರು ಮಾಡಲು ನಿರ್ಧರಿಸಿದ. ಪಾರ್ಸೆಲ್ ನೀಡಿದ ದಿನವೇ ಡೆಲಿವರಿ ಮಾಡುವ ಹೊಸ ಉತ್ಸಾಹ ದೊಂದಿಗೆ ಹಾಗೆ ಕಂಪನಿ ಶುರುವಾಗಿತ್ತು. ಹಾಗೆ ತಮ್ಮ ಕಂಪನಿ ‘ಪೇಪರ್ ಎನ್ ಪಾರ್ಸೆಲ್ಸ್’ ಅನ್ನು ಆತ ಸ್ಥಾಪಿಸಿದ್ದ.

ತನ್ನ ಹೊಸ ಬಿಸಿನೆಸ್ ಮತ್ತು ಈ ಹೊಸ ಸೇವೆಯ ವೆಚ್ಚ ಮತ್ತು ಪರಿಣಾಮಕಾರಿತ್ವದ ಬಗ್ಗೆ ಚಿಂತಿತರಾದ ಯುವ ಉದ್ಯಮಿ ಮುಂಬೈನ ಟಿಫಿನ್ ಬಾಕ್ಸ್ ಸಪ್ಲೈಸಂಸ್ಥೆ ಡಬ್ಬಾವಾಲಾಗಳಿಂದ ಸ್ಫೂರ್ತಿ ಪಡೆಯಲು ಪ್ರಯತ್ನಿಸಿದ್ದ. ಜತೆಗೆ ಆತನ ತಂದೆ ತಿಲಕ್ ಅವರ ಆರಂಭಿಕ ಹಣಕಾಸಿನ ಬೆಂಬಲದೊಂದಿಗೆ, ಕಡಿಮೆ ವೆಚ್ಚದಲ್ಲಿ ನಗರದೊಳಗೆ ಪಾರ್ಸೆಲ್‌ಗಳನ್ನು ತಲುಪಿಸಲು ಆತ ಶುರು ಮಾಡುತ್ತಾನೆ. ಅದಕ್ಕೆ ಈ ಡಬ್ಬಾವಾಲಾಗಳನ್ನು ಆತ ಬಳಸಿಕೊಳ್ಳುತ್ತಾನೆ. ಮುಂದಿನದೆಲ್ಲ ಇತಿಹಾಸ, ಮತ್ತು ಇದೀಗ ದುಡಿದಿರುವ 100 ಕೋಟಿ ರೂಪಾಯಿಗಳು ವಾಸ್ತವ !

ನಂತರ ಆತ ತಿರುಗಿ ನೋಡಲೇ ಇಲ್ಲ. ತನ್ನ ತಂದೆಯ ಆರಂಭಿಕ ಸಹಾಯದ ಜತೆಗೆ ಆತ ತನ್ನ ಬಿಸಿನೆಸ್ ಅನ್ನು ವಿಸ್ತರಿಸುತ್ತಾನೆ. ಅವರು 2018 ರಲ್ಲಿ ವ್ಯಾಪಾರಗಳಿಗೆ ತಮ್ಮ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಅಗತ್ಯಗಳಿಗೆ ಸಹಾಯ ಮಾಡುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿಬಿಡುತ್ತಾನೆ. ಹೊಸ ಬಿಜಿನೆಸ್ ಅಂದ್ರೆ ಏನು ಸಾಮಾನ್ಯ ಕೆಲಸವೇ ? ದಿನವಿಡೀ ಬಿಡುವಿಲ್ಲದ ಕೆಲಸ. ಹೊಸ ಹೊಸ ಸಮಸ್ಯೆಗಳ ಅಧಿಕಾರ ಹುಡುಕುವ ಕಾರ್ಯ. ಆದರೂ ಆಡುವ ವಯಸ್ಸಿನ ಈ ಹುಡುಗ ಯಾವುದಕ್ಕೂ ತೃತೀಯ ತಾನು ಶುರು ಮಾಡಿದ ಕೈ ಹಚ್ಚಿದ ಕೆಲಸದಲ್ಲಿ ನೂರಕ್ಕೆ ನೂರು ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ ತನ್ನ ಕುಟುಂಬ ಕೂಡ ಅದರಲ್ಲಿ ಪೂರ್ತಿ ಭಾಗವಹಿಸುತ್ತೆ. ಹೀಗೆ ನಿರಂತರ ಮತ್ತು ಸಮರ್ಪಿತ ಪ್ರಯತ್ನಗಳಿಂದ ಆತ ತನ್ನ ಕಂಪನಿಯನ್ನು ಅತ್ಯುತ್ತಮವಾದ ಎತ್ತರಕ್ಕೆ ಕೊಂಡೊಯ್ಯಲು ಸಮರ್ಥರಾಗಿದ್ದಾನೆ. ಮತ್ತು ಈಗ ಕಂಪನಿಯು ವಹಿವಾಟು ನಡೆಸುತ್ತಿದೆ 100 ಕೋಟಿ ರೂಪಾಯಿಯ ತಿಲಕ್ ಮೆಹ್ತಾ ವ್ಯವಹಾರ.

ಈಗ ತಿಲಕ್ ಮೆಹ್ತಾನ ಅಂದಾಜು ನಿವ್ವಳ ಮೌಲ್ಯವು 2021 ರ ವೇಳೆಗೆ 65 ಕೋಟಿ ರೂ.ಗಳಾಗಿದ್ದು, ಅವರ ಮಾಸಿಕ ಆದಾಯವು 2 ಕೋಟಿ ರೂಪಾಯಿ ಆಗಿದೆ. 25,000 ದುಡಿದರೆ ಅದು ದೊಡ್ಡದು, ಇದೇ ಒಳ್ಳೆಯ ಕೆಲಸ, ಗ್ರೇಟ್ ಜಾಬ್ ಅಂತ ನಾವು – ನೀವು ಅಂದುಕೊಂಡಿರುವ ಈ ಸಂದರ್ಭದಲ್ಲಿ ಕೇವಲ ಈ 13ರ ಇನ್ನೂ ಮೀಸೆ ಮೊಳಕೆ ಒಡೆಯದ ಹುಡುಗ ತಿಂಗಳಿಗೆ ಬರೋಬ್ಬರಿ 2 ಕೋಟಿ ರೂಪಾಯಿಗಳನ್ನು ಎಣಿಸಿ ಅಥವಾ ಎಣಿಸದೆಯೇ ಜೇಬಿಗೆ ಹಾಕಿಕೊಳ್ಳುತ್ತಿದ್ದಾನೆ. ಗೆಳೆಯರೇ ಸಕ್ಸಸ್ ಅಂದರೆ ಇದೇ ತಾನೆ ?!

ಇದನ್ನೂ ಓದಿ: Indian Railway Intresting Facts: ಚಲಿಸುತ್ತಿರುವ ಟ್ರೈನ್ ಕೋಚ್​ ಬೇರೆಯಾಗಿದೆ ಎಂದು ಚಾಲಕನಿಗೆ ಹೇಗೆ ತಿಳಿಯುತ್ತೆ?

Comments are closed.