Home International Bank robbery: ಬ್ಯಾಂಕ್‍ ದರೋಡೆಗೆ ತೆರಳಿದ ಕಳ್ಳ, ಪೊಲೀಸರು ಬರುವವರೆಗೂ ತಾಳ್ಮೆಯಿಂದ ಕಾಯುತ್ತಿದ್ದ, ಯಾಕೆ ಅನ್ನೋದೇ...

Bank robbery: ಬ್ಯಾಂಕ್‍ ದರೋಡೆಗೆ ತೆರಳಿದ ಕಳ್ಳ, ಪೊಲೀಸರು ಬರುವವರೆಗೂ ತಾಳ್ಮೆಯಿಂದ ಕಾಯುತ್ತಿದ್ದ, ಯಾಕೆ ಅನ್ನೋದೇ ವಿಚಿತ್ರ !

Bank robbery
Freepik

Hindu neighbor gifts plot of land

Hindu neighbour gifts land to Muslim journalist

Bank Robbery: ಇಲ್ಲೊಬ್ಬ ಕಿಲಾಡಿ ಕಳ್ಳ, ತನ್ನ ಅತೀ ಬುದ್ದಿವಂತಿಕೆಯಿಂದ ಪೊಲೀಸ್ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಹೌದು, ಬ್ಯಾಂಕ್‍ ದರೋಡೆಗೆಂದು (Bank Robbery) ತೆರಳಿದ್ದ ಕಳ್ಳ, ತನಗೆ ಅರಿವೇ ಇಲ್ಲದಂತೆ ಪೊಲೀಸರ ವಶವಾಗಿದ್ದಾನೆ.

ಫ್ಲೋರಿಡಾದ PNC ಬ್ಯಾಂಕ್‍ನ ಶಾಖೆಯಲ್ಲಿ ಜುಲೈ 7ರ ಶುಕ್ರವಾರ ನಡೆದ ಘಟನೆಯಲ್ಲಿ ದರೋಡೆಕೋರ ಜೇಮ್ಸ್ ಟಿಮತಿ ಕೆಲ್ಲಿ ಎಂಬಾತ, ಜಾಲರಿಯ ರೀತಿಯಿದ್ದ ಚೀಲವನ್ನು ಹೊತ್ತುಕೊಂಡು ಬ್ಯಾಂಕ್‍ಗೆ ಪ್ರವೇಶಿಸಿ ನಿಮ್ಮಲ್ಲಿರುವ ಎಲ್ಲ ಹಣವನ್ನು ಕೊಡಿ ಎಂದು ಅಲ್ಲಿದ್ದ ಕ್ಯಾಷಿಯರ್ ಕೈಗೆ ಚೀಟಿ ಕೊಟ್ಟಿದ್ದಾನೆ.

ಕ್ಯಾಷಿಯರ್ ಕಳ್ಳ ಕೊಟ್ಟ ಚೀಟಿಯನ್ನು ನೋಡದಂತೆ ನಟಿಸಿದಾಗ, ತಾನು ಬ್ಯಾಂಕನ್ನು ದೋಚಲು ಬಂದಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾನೆ.

ಆದರೆ ತನ್ನ ಮತ್ತು ಇತರರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದ ಬ್ಯಾಂಕ್ ಉದ್ಯೋಗಿ ಜಾಣತನದಿಂದ ಕೆಲ್ಲಿಗೆ ಹಣ ವಿಥ್‍ಡ್ರಾ ಮಾಡುವ ಸ್ಲಿಪ್ಅನ್ನು ಹಸ್ತಾಂತರಿಸಿದ್ದು, ಅದನ್ನು ಭರ್ತಿ ಮಾಡುವಂತೆ ಕೇಳಿಕೊಂಡಿದ್ದಾರೆ. ಆಗ ಈ ಟಿಮತಿ ಕೆಲ್ಲಿ, ನಾನು ನಿಮ್ಮನ್ನು ದೋಚಲು ಬಂದಿದ್ದೇನೆ ಎಂದು ಸ್ಪಷ್ಟವಾಗಿ ಕ್ಯಾಷಿಯರ್ ಗೆ ಹೇಳಿದ್ದಾನೆ.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಕ್ಯಾಷಿಯರ್, ಆಫೀಸಿನಲ್ಲಿ ಕಂಪ್ಯೂಟರ್ ಸಮಸ್ಯೆ ಇದೆ ಎಂದು ನಟಿಸಿ, ಹಣ ತರುವ ತನಕ ಕಾಯಿರಿ ಎಂದು ಕೇಳಿಕೊಂಡಿದ್ದಾರೆ. ಇದನ್ನು ನಂಬಿದ ಕೆಲ್ಲಿ ಕ್ಯಾಷಿಯರ್ ನೀಡಿದ ಸೂಚನೆಗಳನ್ನು ಪಾಲಿಸಿದ. ಈ ಸಂದರ್ಭ ಒಳ ಹೋದ ಕ್ಯಾಷಿಯರ್‍ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾಳೆ. ಇದ್ಯಾವುದರ ಪರಿವೆಯೇ ಇಲ್ಲದೇ ಆತ ಪೊಲೀಸರು ಬರುವ ತನಕವೂ ಕಾಯುತ್ತಿದ್ದ ಕಾರಣ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ನಂತರ ಟಿಮತಿ ಕೆಲ್ಲಿಯನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಮಿಯಾಮಿ ಕಚೇರಿಗೆ ಕರೆದೊಯ್ಯಲಾಯಿತು. ಅಲ್ಲಿ ಆತ ಬ್ಯಾಂಕ್ ಶಾಖೆಯಲ್ಲಿ ದರೋಡೆಗೆ ಪ್ರಯತ್ನಿಸಿದ್ದನ್ನು ಒಪ್ಪಿಕೊಂಡ. ಜೇಮ್ಸ್ ಟಿಮತಿ ಕೆಲ್ಲಿ ತನ್ನ ವಿಫಲ ದರೋಡೆ ಪ್ರಯತ್ನಕ್ಕಾಗಿ ಗರಿಷ್ಠ 20 ವರ್ಷಗಳ ಜೈಲು ಶಿಕ್ಷೆಯನ್ನು ಪಡೆದಿದ್ದಾನೆ.

ಸದ್ಯ ಈ ಕಳ್ಳತನ ನಡೆಯದಂತೆ ತಡೆದದ್ದು ಓರ್ವ ಮಹಿಳಾ ಉದ್ಯೋಗಿ. ಈ ಮೂಲಕ ಬ್ಯಾಂಕ್‍ ದರೋಡೆ ತಡೆದ ಆ ಮಹಿಳಾ ಉದ್ಯೋಗಿಯ ಬುದ್ಧಿವಂತಿಕೆಗೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಶೀ…!! ತನ್ನ ತಾಯಿಗೆ ಮುಖ ತೋರಿಸಲಾಗದ ಕೆಲಸ ಮಾಡಿದ್ದರು ರಾಹುಲ್ ದ್ರಾವಿಡ್, ಏನದು ಗೊತ್ತೇ ?