WhatsApp Feature: ವಾಟ್ಸಪ್ ನಲ್ಲಿ ಅಪರಿಚಿತರು ಕರೆ ಮಾಡಿ ಕಿರಿಕಿರಿ ಆಗ್ತಿದೆಯೇ, ಹೀಗೆ ಮಾಡಿ – ಎಲ್ಲಾ ಸೈಲೆಂಟ್ ಆಗೋಗತ್ತೆ !

latest news technology news new WhatsApp feature has arrived

WhatsApp Feature: ಜನಪ್ರಿಯ ಸೋಶಿಯಲ್ ಮೀಡಿಯಾಗಳಲ್ಲಿ ಒಂದಾದ ವಾಟ್ಸಪ್(WhatsApp), ಎಲ್ಲಾ ಬಳಕೆದಾರರ ಮನ ಗೆದ್ದಿದೆ. ವಾಟ್ಸಪ್ ಒಳ್ಳೆದು ಕೆಟ್ಟದು ಎರಡೂ ಅಂಶಗಳನ್ನು ಒಳಗೊಂಡಿದೆ. ವಾಟ್ಸಪ್ ನಲ್ಲಿ ಹಲವಾರು ಫೀಚರ್ ಗಳು ಅಪ್ಡೇಟ್ ಆಗುತ್ತಲೇ ಇರುತ್ತದೆ. ಇದೀಗ ಮತ್ತೊಂದು ಫೀಚರ್ (WhatsApp Feature) ವಾಟ್ಸಪ್’ನ ಬತ್ತಳಿಕೆಗೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಅಪರಿಚಿತ ಸಂಖ್ಯೆಗಳಿಂದ ಬರುವ ವಾಟ್ಸಾಪ್ ಕರೆಗಳಿಂದಾಗಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇಂತಹ ತೊಂದರೆಗಳಿಗೆ ಪರಿಹಾರ ನೀಡಲೆಂದು ವಾಟ್ಸಾಪ್ ಇತ್ತೀಚೆಗೆ ಹೊಸ ವೈಶಿಷ್ಟ್ಯವೊಂದನ್ನು (new features) ಪರಿಚಯಿಸಿದೆ. ಇದು ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳನ್ನು ಅಟೋಮ್ಯಾಟಿಕ್ ಆಗಿ ಮ್ಯೂಟ್ ಮಾಡುತ್ತದೆ. ಸ್ಪ್ಯಾಮ್ ಕರೆಗಳ ಹೆಚ್ಚಳದ ವರದಿಯ ಬೆನ್ನಲ್ಲೇ ಕಾರ್ಯಪ್ರವೃತ್ತವಾದ ವಾಟ್ಸಾಪ್ , `ಸೈಲೆಂಟ್ ಅನ್‌ನ್ನೋನ್ ಕಾಲ್ಸ್‌’ ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದೆ.

ಭಾರತದ ವಾಟ್ಸಾಪ್ ಬಳಕೆದಾರರಿಗೆ (WhatsApp users) ವಿದೇಶಗಳಿಂದ ಅನಪೇಕ್ಷಿತ ಹಾಗೂ ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬರುತ್ತಿದ್ದು, ಇದು ವಾಟ್ಸಾಪ್ ಬಳಕೆದಾರರಿಗೆ ಬಹಳಷ್ಟು ಕಿರಿಕಿರಿಯನ್ನುಂಟು ಮಾಡಿದೆ. ಬಳಕೆದಾರರಿಗೆ ಹೆಚ್ಚಿನ ಗೌಪ್ಯತೆಯನ್ನು ಒದಗಿಸಲು, ಸ್ಪ್ಯಾಮ್, ವಂಚನೆ ಮತ್ತು ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳನ್ನು ನಿಯಂತ್ರಿಸುವ ಸಲುವಾಗಿ ಇಂತಹದ್ದೊಂದು ಫೀಚರ್‌ ಅನ್ನು ಪರಿಚಯಿಸಲಾಗಿದೆ ಎಂದು ವಾಟ್ಸಪ್ ಸ್ಪಷ್ಟನೆ ನೀಡಿದೆ.

ಅಪರಿಚಿತ ಕರೆಗಳನ್ನು (unknown call) ಮ್ಯೂಟ್ ಮಾಡುವುದು ಹೇಗೆ? ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ. ಆಂಡ್ರಾಯ್ಡ್‌, ಐಫೋನ್ ಅಥವಾ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ವಾಟ್ಸಾಪ್ ಅಪ್ಲಿಕೇಷನನ್ನು ತೆರೆಯಿರಿ. ಅಲ್ಲಿ `ಸೆಟ್ಟಿಂಗ್ಸ್‌’ ಮೆನುವಿಗೆ ಹೋಗಿ. ಆಂಡ್ರಾಯ್ಡ್‌ನಲ್ಲಿ, ಸೆಟ್ಟಿಂಗ್ ಮೆನುವಿಗಾಗಿ ಮೊಬೈಲ್ ಸ್ಕ್ರೀನಿನ ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೆನು ಐಕಾನ್ ಅನ್ನು ಒತ್ತಿರಿ. ಐಓಎಸ್‌ನಲ್ಲಿ, ನೀವು ವಾಟ್ಸಪ್ಪ್ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದೀರಿ ಎಂದಾದರೆ, ಕೆಳಗಿನ ಎಡಮೂಲೆಯಲ್ಲಿರುವ ಸೆಟ್ಟಿಂಗ್ಸ್‌ ಐಕಾನ್‌ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

ನಂತರ ‘ಪ್ರೈವೆಸಿ’ ಎಂಬ ಆಯ್ಕೆಯನ್ನು ಟ್ಯಾಪ್ ಮಾಡಿ. ಅಲ್ಲಿ `ಕರೆಗಳು’ (Calls) ಆಯ್ಕೆಯನ್ನು ಟ್ಯಾಪ್ ಮಾಡಿದ ನಂತರ `ಸೈಲೆಂಟ್ ಅನ್‌ನ್ನೋನ್ ಕಾಲರ್ಸ್’ (silent unknown callers) ಎಂಬ ಆಯ್ಕೆಯನ್ನು ಟ್ಯಾಪ್ ಮಾಡಿರಿ. ಈ ಫೀಚರ್ನಿಂದಾಗಿ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳನ್ನು ಮ್ಯೂಟ್ ಮಾಡಬಹುದು.

 

ಇದನ್ನು ಓದಿ: LPG Cylinder Price: ಜುಲೈ ತಿಂಗಳ ಆರಂಭದಲ್ಲಿ LPG ಸೇರಿದಂತೆ ಯಾವುದೆಲ್ಲ ದರಗಳು ವ್ಯತ್ಯಯವಾಗಲಿದೆ ಗೊತ್ತಾ? 

Leave A Reply

Your email address will not be published.