Kerala: ಫೋನಲ್ಲಿ ಮಾತಾಡುತ್ತಾ ಕಣಗಿಲೆ ಹೂ ತಿಂದು ಯುವತಿ ಸಾವು !!

Kerala: ಸಾವು ಯಾರಿಗೆ ಯಾವಾಗ, ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಮರಾಯ ಜೀವ ತೆಗೆಯಲು ಹೇಗಾದರೂ ಬರಬಹುದು. ಅಂತೆಯೇ ಇಲ್ಲೊಬ್ಬಳು ಸುಂದರ ಯುವತಿಗೆ ಕಣಗಿಲೆ ಹೂವೇ ಸಾವನ್ನು ತಂದೊಡ್ಡಿದೆ.

ಇದನ್ನೂ ಓದಿ: Sonu Shrinivas Gouda: ಸೋನು ಶ್ರೀನಿವಾಸ್ ಗೌಡ ರಾಜಯಕೀಯಕ್ಕೆ ಎಂಟ್ರಿ ?!

ಹೌದು, ಕೇರಳದಲ್ಲಿ (Kerala) ಈ ರೀತಿಯ ಮನ ಮಿಡಿಯುವ ಘಟನೆ ನಡೆದಿದ್ದು, ಫೋನಲ್ಲಿ ಮಾತಾಡುತ್ತಾ ಅರಿವಿಲ್ಲದೇ ಕಣಗಿಲೆ ಹೂವನ್ನು ಕಿತ್ತು ತಿಂದ ನರ್ಸ್ (Nurse) ಸಾವನ್ನಪ್ಪಿದ್ದಾರೆ. ವಿದೇಶದಲ್ಲಿ ಕೆಲಸ ಮಾಡಿ ತಂದೆ ತಾಯಿಗೆ ಆಸರೆಯಾಗಬೇಕೆಂದು ಬಯಸಿದ್ದ ಹುಡುಗಿ, ಅನಿರೀಕ್ಷಿತ ರೀತಿಯಲ್ಲಿ ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾಳೆ. ಒಂದೇ ಒಂದು ಹೂವು ಮತ್ತು ಎಲೆ ಆಕೆಯ ಪ್ರಾಣವನ್ನೇ ಕಸಿದುಕೊಂಡಿದೆ.

ಇದನ್ನೂ ಓದಿ: Beauty Tips: ಎರಡೇ ಎರಡು ಹನಿ ಕ್ರೀಮ್‌ ಮುಖಕ್ಕೆ ಹಚ್ಚಿ ನೋಡಿ, ನಿಮ್ಮ ತ್ವಚೆಯ ಕಾಂತಿ ಹೊಳೆಯುತ್ತೆ!

ಅಂದಹಾಗೆ ಕೇರಳದ ಅಲಪ್ಪುಳದ ಹರಿಪತ್ ಪ್ರದೇಶದ ಸೂರ್ಯ ಸುರೇಂದ್ರನ್ (24) ಎಂಬುವವಳು ಮೃತ ಯುವತಿ. ಈಕೆಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನರ್ಸ್ ಆಗಿ ಕೆಲಸ ಸಿಕ್ಕಿತು. ಲಕ್ಷಾಂತರ ರೂಪಾಯಿ ಸಂಬಳ ಇತ್ತು. ಸೂರ್ಯ ಕೆಲವೇ ಗಂಟೆಗಳಲ್ಲಿ ಯುಕೆಗೆ ತೆರಳಬೇಕಿತ್ತು. ವಿದೇಶಕ್ಕೆ ಹೋಗುವ ಖುಷಿಯಲ್ಲಿ ನೆರೆಮನೆಯವರನ್ನು ಮಾತನಾಡಿಸಿಕೊಂಡು ಬರಲು ಹೋಗಿದ್ದಳು.

ಇಂಗ್ಲೆಂಡಿನಲ್ಲಿ (England) ಕೆಲಸ ಸಿಕ್ಕಿದ್ದರಿಂದ ಅಕ್ಕಪಕ್ಕದವರಿಗೆ ವಿಷಯ ತಿಳಿಸಿ ವಿಮಾನ ನಿಲ್ದಾಣಕ್ಕೆ (Airport) ಹೋಗಲು ಪ್ರಯಾಣ ಬೆಳೆಸಿದ್ದರು. ಆದರೆ ಪ್ರಯಾಣಕ್ಕೂ ಮುನ್ನ ಸೆಲ್ ಫೋನ್ ನಲ್ಲಿ ಮಾತನಾಡುತ್ತಾ ತನಗೆ ಅರಿವಿಲ್ಲದೆ ಓಲಿಯಂಡರ್ (ಕನ್ನಡದಲ್ಲಿ ಕಣಗಿಲೆ ಗಿಡ) ಎಲೆಯ ಒಂದು ಭಾಗವನ್ನು ಮತ್ತು ಹೂವನ್ನು ಸೇವಿಸಿದ್ದಾಳೆ. ಬಳಿಕ ಸೂರ್ಯ ಸುರೇಂದ್ರನ್ ವಿದೇಶ ಪ್ರಯಾಣ ಬೆಳೆಸಲು ನೆಡುಂಬಸ್ಸೆರಿಯ ವಿಮಾನ ನಿಲ್ದಾಣಕ್ಕೆ ಹೋಗುವಾಗ ಆಲಪ್ಪುಳವನ್ನು ತಲುಪುತ್ತಿದ್ದಂತೆ ವಾಂತಿ ಮಾಡಲು ಆರಂಭಿಸಿದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬಳಿಕ ಅವರಿಗೆ ಚಿಕಿತ್ಸೆ ಕೊಡಿಸಿ ಮನೆಗೆ ವಾಪಸ್ ಕರೆತಂದಿದ್ದಾರೆ. ಆದರೆ ಮನೆಗೆ ಆಗಮಿಸುತ್ತಿದ್ದಂತೆ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪರುಮಲೈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷಾ ವರದಿಯು ಪ್ರಕಾರ ಒಲಿಮಾಂಡರ್ ಅಥವಾ ಕಣಗಿಲೆ ಗಿಡದ ವಿಷವು ಆಕೆಯ ಹೃದಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಪ್ರಾಣವನ್ನು ತೆಗೆದಿದೆ ಎಂಬುದು ಬಯಲಾಗಿದೆ.

ಕಣಗಿಲೆ ಎಲೆ ಬಗ್ಗೆ ಇರಲಿ ಎಚ್ಚರ!!

ಕಣಗಿಲೆ ಗಿಡದಲ್ಲಿ ಶಕ್ತಿಯುತವಾದ ವಿಷವಿದ್ದು ಹೃದಯ ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ಸಸ್ಯದ ವಿವಿಧ ಭಾಗಗಳು ಅನೇಕ ಆಯುರ್ವೇದ ಔಷಧಗಳಲ್ಲಿ ಉಪಯೋಗದಲ್ಲಿವೆ. ಈ ಗಿಡದ ಬೇರು, ತೊಗಟೆ, ಬೀಜ ಮತ್ತು ಇತರ ಭಾಗಗಳೂ ವಿಷಕಾರಿಯಾದವು ಎಂದು ಹೇಳಿದ್ದಾರೆ.

Leave A Reply

Your email address will not be published.