Rotten coconut in pooja: ಪೂಜೆಯಲ್ಲಿ ತೆಂಗಿನಕಾಯಿ ಬಳಸುವ ಮುನ್ನ ಎಚ್ಚರ..!! ತೆಂಗಿನಕಾಯಿ ಕೊಳೆತರೆ ಈ ಎಲ್ಲಾ ತೊಂದರೆ ಅನುಭವಿಸುತ್ತಿರಾ!

latest news Rotten coconut life style these problems will occur if the coconut rots during the pooja

Rotten coconut in pooja: ಹಿಂದೂ ಸಂಪ್ರದಾಯದಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಹಲವು ರೀತಿಯ ಪೂಜೆಗಳು, ಹೋಮಗಳು, ಪ್ರತಿ ದೇವರಿಗೂ ಹಬ್ಬಗಳು ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡುತ್ತೇವೆ. ಈ ಶುಭ ಕಾರ್ಯಗಳಿಗೆ, ನಾವು ಪವಿತ್ರವೆಂದು ಭಾವಿಸುವುದು ಹಾಗೂ ಬಳಸುವುದು ತೆಂಗಿನಕಾಯಿ. ತೆಂಗಿನಕಾಯಿಯಿಲ್ಲದೇ ನಮ್ಮ ಪೂಜೆ ಅಥವಾ ಆಚರಣೆಗಳು ಅಪೂರ್ಣವೆಂದು ಹೇಳಲಾಗುತ್ತದೆ. ಇನ್ನು ಯಾವ ಜೀವಿಯೂ ಎಂಜಲು ಮಾಡದ ಹಣ್ಣು ಅಂತಾ ಕರೆಯಲ್ಪಡುವ ತೆಂಗಿನಕಾಯಿ ದೇವರ ನೈವೇದ್ಯಕ್ಕೆ ಸರ್ವಶ್ರೇಷ್ಠ.

ಹಿಂದೂ ಧರ್ಮೀಯರು ಪ್ರತಿಯೊಂದು ಕಾರ್ಯದಲ್ಲೂ ತೆಂಗಿನಕಾಯಿಯನ್ನು ಒಡೆಯುವ ಸಂಪ್ರದಾಯವನ್ನು ಹೊಂದಿರುತ್ತಾರೆ. ಈ ಕಾರಣದಿಂದ ನಾವು ಮಾಡುವ ಪೂಜೆಯಲ್ಲಿ ತೆಂಗಿನಕಾಯಿಯನ್ನು ಬಳಸುವುದು ಕಡ್ಡಾಯವಾಗಿರುತ್ತದೆ. ಆದರೆ ,ನಾವು ಪೂಜೆಗೆ ತೆಗೆದುಕೊಂಡು ಹೋದ ತೆಂಗಿನಕಾಯಿ ಇದ್ದಕ್ಕಿದ್ದಂತೆ ಕೊಳೆತು ಹೋಗಿರುತ್ತದೆ (Rotten coconut in pooja). ಇದು ನಿಜವಾಗಿಯೂ ಏನನ್ನು ಸೂಚಿಸುತ್ತದೆ ಮತ್ತು ಈ ರೀತಿ ಆದಾಗ ಏನು ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ.

ಪೂಜಾ ಕಾರ್ಯಗಳಲ್ಲಿ ಪ್ರಾಮುಖ್ಯತೆಯನ್ನು ಹೊಂದಿರುವಂತಹ ಈ ತೆಂಗಿನಕಾಯಿ, ಯಾವಾಗಲೂ ಶುಭಕರವೇ, ಶುಭದ ಸಂಕೇತವೇ ಆಗಿರುತ್ತದೆ. ಇಷ್ಟೊಂದು ಮಹತ್ವವುಳ್ಳ ಈ ತೆಂಗಿನಕಾಯಿ ಕೊಳೆತು ಹೋದರೆ ಅದು ಯಾವುದೇ ಅಶುಭದ ಸಂಕೇತವಲ್ಲ.ಅದರ ಹಿಂದಿನ ಅರ್ಥ ಬೇರೆಯೇ ಇದೆ.

ತೆಂಗಿನ ಕಾಯಿಯನ್ನು ದೇವರಿಗೆ ಸಮರ್ಪಿಸಿದಾಗ ಅದೇನಾದರು ಕೆಟ್ಟು ಹೋಗಿದ್ದರೆ, ಅದನ್ನು ಬದಿಯಲ್ಲಿಟ್ಟು ಮತ್ತೊಮ್ಮೆ ಕೈ ಕಾಲುಗಳನ್ನು ಸ್ವಚ್ಛ ಪಡಿಸಿ, ಪುನಃ ದೇವರ ಮಂತ್ರವನ್ನು ಪಠಿಸುವುದರಿಂದ ಯಾವುದೇ ರೀತಿಯಲ್ಲೂ ದೋಷವಿರುವುದಿಲ್ಲ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ.

ಇನ್ನು ವಾಹನಗಳಿಗೆ ತೆಂಗಿನಕಾಯಿಯನ್ನು ಅಡ್ಡವಾಗಿ ಹೊಡೆದಾಗ ಅದೇನಾದರೂ ಕೆಟ್ಟಿದ್ದರೆ, ಆ ವಾಹನಕ್ಕೆ ಆದ ದೃಷ್ಟಿ ತನ್ನಂತಾನೆ ನಿವಾರಣೆಯಾಗಿದೆ ಎಂಬುದರ ಸೂಚನೆ ಇದಾಗಿರುತ್ತದೆ. ಆದ ಕಾರಣ ಪೂಜೆಯಲ್ಲಿ ತೆಂಗಿನಕಾಯಿ ಕೆಟ್ಟಿದ್ದರೆ ಯೋಚನೆ ಮಾಡುವ ಅಥವಾ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಈ ರೀತಿ ಆದಾಗ ಮತ್ತೊಂದು ಬಾರಿ ವಾಹನವನ್ನು ಸ್ವಚ್ಛಗೊಳಿಸಿ ಮತ್ತು ಮತ್ತೊಮ್ಮೆ ತಾಜಾ ತೆಂಗಿನಕಾಯಿಯನ್ನು ಗಾಡಿಗೆ ಒಡೆಯಿರಿ.

ಹಿಂದೂ ಧಾರ್ಮಿಕ ನಂಬಿಕೆಯಲ್ಲಿ ತೆಂಗಿನಕಾಯಿಗೆ ಪ್ರಾಮುಖ್ಯತೆ ನೀಡಲಾಗಿದೆ. ತೆಂಗಿನಕಾಯಿಯು ಅಶುಭವಲ್ಲ. ನಿಮಗೆ ತಿಳಿಯದೇ ನೀವು ಪೂಜೆಯಲ್ಲಿ ಕೊಳೆತ ಅಥವಾ ಹಾಳಾದ ತೆಂಗಿನಕಾಯಿಯನ್ನು ಬಳಸಿದರೆ ಈ ಮೇಲಿನ ಕ್ರಮಗಳನ್ನು ತೆಗೆದುಕೊಳ್ಳಿ.

ಹಿಂದೂ ಶಾಸ್ತ್ರ ಪುರಾಣಗಳ ಪ್ರಕಾರ, ತೆಂಗಿನಕಾಯಿಯಲ್ಲಿ ತ್ರಿದೇವನಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಇದರಲ್ಲಿ ನೆಲೆಸಿದ್ದಾರೆ ಎನ್ನುವ ನಂಬಿಕೆಯಿದೆ. ಅಲ್ಲದೆ ಭಗವಾನ್ ವಿಷ್ಣು ಭೂಮಿಯಲ್ಲಿ ಅವತರಿಸಿದಾಗ ತನ್ನೊಂದಿಗೆ ಲಕ್ಷ್ಮಿ ದೇವಿ, ತೆಂಗಿನ ಮರ ಮತ್ತು ಕಾಮಧೇನು ಹಸುವನ್ನು ತೆಗೆದುಕೊಂಡು ಬಂದನು. ಹಾಗಾಗಿ ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ತೆಂಗಿನ ಕಾಯಿಯ ಮೇಲಿರುವ ಕಣ್ಣಿನ ಆಕಾರವನ್ನು ಮಹಾಸ್ವರೂಪಿ ಶಿವನಿಗೆ ಹೋಲಿಸಲಾಗಿದೆ.

ಇನ್ನೊಂದು ನಂಬಿಕೆಯ ಪ್ರಕಾರ, ವಿಶ್ವಮಿತ್ರನು ಇಂದ್ರನ ಮೇಲೆ ಕೋಪಗೊಂಡು ಮತ್ತೊಂದು ಸ್ವರ್ಗವನ್ನು ಸೃಷ್ಟಿಸಲು ಪ್ರಾರಂಭಿಸಿದರು ಈ ರೀತಿ ನಿರ್ಮಿಸುವಾಗ ತೆಂಗಿನಕಾಯಿಯನ್ನು ಮಾನವನ ರೂಪದಲ್ಲಿ ರಚಿಸಿದ್ದಾರೆ ಎನ್ನಲಾಗಿದೆ. ತೆಂಗಿನ ಚಿಪ್ಪಿನ ಹೊರಭಾಗದಲ್ಲಿ ಎರಡು ಕಣ್ಣುಗಳು ಮತ್ತು ಬಾಯಿಯ ವಿನ್ಯಾಸವಿರುವುದನ್ನು ನೀವು ಗಮನಿಸಿರಬಹುದು.

Leave A Reply

Your email address will not be published.