Jewellery Tips: ಚಿನ್ನಾಭರಣ ಲಾಕರ್‌ನಲ್ಲೇ ಸೇಫ್‌ ಅಲ್ಲ, ಚಪಾತಿ ಹಿಟ್ಟಲ್ಲೂ ಇಟ್ಟರೆ ಸೇಫಂತೆ! ಇದರ ಲಾಭ ಅನೇಕ!

Latest news Jewellery Tips Wheat flour is also safer than Lokar to keep jewellery.

Jewellery Tips: ಚಿನ್ನಾಭರಣ ಎಂದರೆ ಮಹಿಳೆಯರಿಗೆ ಪಂಚಪ್ರಾಣ. ಸಾಮಾನ್ಯವಾಗಿ ಚಿನ್ನಾಭರಣವನ್ನು ತೊಳೆಯಲು ಮಹಿಳೆಯರು ಹಲವಾರು ರೀತಿಯ ಪ್ರಯತ್ನಗಳನ್ನು (Jewellery Tips) ಮಾಡುತ್ತಲೇ ಇರುತ್ತಾರೆ. ಒಡವೆಗಳನ್ನು ಧರಿಸಿದಾಗ ಸಮಯ ಕಳೆದಂತೆ ಮಣ್ಣು ಸೇರಿ ಹೊಳಪು ಕಳೆದುಕೊಳ್ಳುವ ಒಡವೆಯನ್ನು ಸೂಪರ್ ಫಾಸ್ಟ್ ಆಗಿ ತೊಳೆಯುವ ಸುಲಭ ವಿಧಾನ ಇಲ್ಲಿ ತಿಳಿಸಲಾಗಿದೆ. ಹೌದು, ಚಪಾತಿ ಹಿಟ್ಟಿನಲ್ಲಿ ಚಿನ್ನಾಭರಣ ಹಾಕಿ ಹೊಳೆಯುವಂತೆ ಮಾಡಬಹುದು.

ಗೃಹಿಣಿಯೊಬ್ಬರು ಶೇರ್ ಮಾಡಿಕೊಂಡಿರುವ ವೀಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗೃಹಿಣಿಯೊಬ್ಬರು ಗೋಧಿ ಹಿಟ್ಟಿನಲ್ಲಿ ಆಭರಣಗಳನ್ನು ಹಾಕಿ. ಅವುಗಳನ್ನು ಕ್ಲೀನ್ ಮಾಡಿರುವ ವೀಡಿಯೊ ಹಂಚಿಕೊಂಡಿದ್ದಾರೆ.

ಆಭರಣಗಳನ್ನು ಬಳಸಿದ ನಂತರ ಅದರ ಕೆಲವು ಮೂಲೆಗಳು ಕಪ್ಪು ಬಣ್ಣಕ್ಕೆ ತಿರುಗುವುದನ್ನು ನೀವು ಗಮನಿಸಬಹುದು. ಮತ್ತು ಮಣ್ಣು ಸಂಗ್ರಹವಾಗುತ್ತದೆ. ಇವುಗಳನ್ನು ಸರಳವಾದ ಬಟ್ಟೆಯಿಂದ ಅಥವಾ ನೀರಿನಿಂದ ತೊಳೆಯುವುದರಿಂದ ಹೊರಬರುವುದಿಲ್ಲ. ಆದರೆ ಈ ಟ್ರಿಕ್ಸ್ ಬಳಸುವ ಮೂಲಕ ಸಲೀಸಾಗಿ ಅವುಗಳನ್ನು ತೆಗೆದು ಹಾಕಬಹುದು ಎಂದು ಮಹಿಳೆ ತಿಳಿಸಿದ್ದಾರೆ.

ವೀಡಿಯೊದಲ್ಲಿ, ಸ್ವಲ್ಪ ಗೋಧಿ ಹಿಟ್ಟನ್ನು ಬಟ್ಟಲಿನಲ್ಲಿ ತೆಗೆದುಕೊಳ್ಳುವುದನ್ನು ನೋಡಬಹುದು. ನಂತರ ಅದರಲ್ಲಿ ಚಿನ್ನದ ಆಭರಣಗಳನ್ನು ಹಾಕಿದ್ದಾರೆ. ಹಿಟ್ಟು ಆಭರಣಗಳಿಗೆ ಸಂಪೂರ್ಣವಾಗಿ ಅಂಟಿಕೊಂಡ ನಂತರ ಮಹಿಳೆ ತೂತ್ ಬ್ರಶ್ ತೆಗೆದುಕೊಂಡು ಆಭರಣದಲ್ಲಿ ಅಂಟಿಕೊಂಡಿರುವ ಹಿಟ್ಟನ್ನು ತೆಗೆಯುವುದನ್ನು ತೋರಿಸಲಾಗಿದೆ.

ಸದ್ಯ ಈ ಮಹಿಳೆ ಮಾಡಿರುವ ವಿಡಿಯೋ ಗೆ ಸಾಕಷ್ಟು ಪಾಸಿಟಿವ್ ಕಾಮೆಂಟ್ ಬಂದಿದ್ದು, ಇದೊಂದು ಒಳ್ಳೆಯ ಉಪಾಯ ಎಂದಿದ್ದಾರೆ.

Leave A Reply

Your email address will not be published.