Murder: ಯುವತಿಯೋರ್ವಳ ಕೊಲೆಯ ಹಿಂದಿತ್ತು ಮೂವರು ಚಿಕ್ಕಮ್ಮಂದಿರ ಕೈವಾಡ! ಕಾರಣ ತಿಳಿದರೆ ಖಂಡಿತ ಬೆಚ್ಚಿಬೀಳ್ತೀರ!

Latest Karnataka crime news Police arrested 5 accused in relation to dead body found at forest

Murder: ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಮನುಷ್ಯರು ರಾಕ್ಷಸರಂತೆ ವರ್ತಿಸುತ್ತಿರುವುದು ನಾನಾ ರೀತಿಯಲ್ಲಿ ಕಾಣುತ್ತಿದ್ದೇವೆ ಮತ್ತು ಕೇಳುತ್ತಿದ್ದೇವೆ. ಹಾಗೆಯೇ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವಿಮನೆ ಪ್ರದೇಶದಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದ್ದು, ಇದೀಗ ಈ ಕೃತ್ಯದ (Murder) ಹಿಂದೆ ತನ್ನ ಸಂಬಂಧಿಕರೇ ಪ್ರಮುಖ ಆರೋಪಿಗಳಾಗಿದ್ದಾರೆ.

 

ಹೌದು, ದೇವಿಮನೆ ಘಟ್ಟ ಪ್ರದೇಶದ ಕಾಡಿನಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆ ಸಂಬಂಧ ಐವರನ್ನು ಬಂಧಿಸಿದ್ದಾರೆ. ವಿಶೇಷವೆಂದರೆ ಆರೋಪಿಗಳ ಪೈಕಿ ಸಾವಿಗೀಡಾದ ಯುವತಿಯ ಮೂವರು ಚಿಕ್ಕಮ್ಮಂದಿರೂ ಆಗಿದ್ದಾರೆ.

ಪ್ರಕರಣವನ್ನು ಭೇದಿಸಿದ ಪೊಲೀಸರು, ಶವವನ್ನು ಶಿಗ್ಗಾವಿ ಮೂಲದ ತನುಜಾ (26) ಎಂದು ಪತ್ತೆ ಹಚ್ಚಿದ್ದಲ್ಲದೆ, ಕೊಲೆಗಾರರಾದ, ತನುಜಾ ಪತಿಯ ಸಹೋದರ ಮಹೇಶ್, ವಾಹನ ಚಾಲಕ ಅಮಿತ್ ಹಾಗೂ ಆಕೆಯ ಚಿಕ್ಕಮ್ಮಂದಿರಾದ ಗೌರಮ್ಮ, ನೀಲಕ್ಕ, ಕಾವ್ಯ ಇವರನ್ನು ಉತ್ತರಕನ್ನಡ ಜಿಲ್ಲೆಯ ಕುಮಟಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತನುಜಾಳನ್ನು ಜೂ. 16ರಂದು ಕೊಲೆ ಮಾಡಿ ದೇವಿಮನೆ ಘಟ್ಟದಲ್ಲಿ ಶವವನ್ನು ಎಸೆಯಲಾಗಿತ್ತು. ಕುತ್ತಿಗೆ ಭಾಗದಲ್ಲಿ ಗಾಯದ ಗುರುತು ಆಧರಿಸಿ ತನಿಖೆ ಕೈಗೊಂಡ ಕುಮಟಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೀಲ ಶಂಕಿಸಿ ಈ ಕೊಲೆ ಮಾಡಿರುವುದು ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದ್ದು, ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

ಇದನ್ನೂ ಓದಿ: Gruha Jyoti: ಗೃಹ ಜ್ಯೋತಿ ನೋಂದಣಿ ಈಗ ಬಹಳ ಸುಲಭ: ನೋಂದಣಿ ಮಾಡುವ ಹೊಸ ಲಿಂಕ್, ವಿಧಾನ ಇಲ್ಲಿದೆ

Leave A Reply

Your email address will not be published.