Srujan Lokesh: ಮಜಾ ಟಾಕೀಸ್‌ ನಿಲ್ಲಿಸಿದರ ಹಿಂದಿನ ಕಾರಣ ಬಿಚ್ಚಿಟ್ಟ ಸೃಜನ್ ಲೋಕೇಶ್ ; ಮತ್ತೆ ಶುರುವಾಗುತ್ತಾ ನಕ್ಕು ನಗಿಸುವ ಮಜಾ ಟಾಕೀಸ್‌ ?

Entertainment kannada TV shows news srujan Lokesh reveals reason behind stopping colors Kannada maja talkies show

Srujan Lokesh: ಸೃಜನ್ ಲೋಕೇಶ್ (srujan lokesh) ನಿರೂಪಣೆಯ ಕನ್ನಡದ ಜನಪ್ರಿಯ ಶೋ ಮಜಾ ಟಾಕೀಸ್‌ ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿ ಜನ ಮನ್ನಣೆ ಪಡೆದುಕೊಂಡಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಲೋಕೇಶ್ ಪ್ರೋಡಕ್ಷನ್​ನಲ್ಲಿ ಮೂಡಿಬರುತ್ತಿದ್ದ ಮಜಾ ಟಾಕೀಸ್ (maja Takis) ಕಾರ್ಯಕ್ರಮ ಮನೆಮಾತಾಗಿಬಿಟ್ಟಿದೆ.

ಪ್ರತಿ ಶನಿವಾರ ಮತ್ತು ರವಿವಾರ ರಾತ್ರಿ 8 ಗಂಟೆ ಆಗುತ್ತಿದ್ದಂತೆ ಮನೆಯ ಸದಸ್ಯರು ಮಜಾ ಟಾಕೀಸ್ ನೋಡಲು ರೆಡಿ ಆಗಿ ಬಿಡುತ್ತಿದ್ದರು. ಆದರೆ, ಸದ್ಯ ಮಜಾ ಟಾಕೀಸ್‌ ಶೋ ನಿಂತು ಹೋಗಿದೆ.

ಕಾರಣ ಏನು ಗೊತ್ತಾ? ಮಜಾ ಟಾಕೀಸ್‌ ನಿಲ್ಲಿಸಲು ಕಾರಣ ಏನೆಂದು ಸೃಜನ್ ಲೋಕೇಶ್ ಹೇಳಿಕೊಂಡಿದ್ದಾರೆ.

ಯುಟ್ಯೂಬ್ ಚಾನೆಲ್‌ವೊಂದರಲ್ಲಿ ಸೃಜನ್ ಮಜಾ ಟಾಕೀಸ್ ಬಗ್ಗೆ ಮಾತನಾಡಿದ್ದಾರೆ. ಕೇವಲ 32 ಎಪಿಸೋಡ್‌ ಎಂದುಕೊಂಡು ಮಜಾ ಟಾಕೀಸ್ ಆರಂಭಿಸಲಾಯಿತು.

Roman Empire: ‘ರೋಮ’ ನ್ ಸಾಮ್ರಾಜ್ಯದ ಪತನದ ಬಗ್ಗೆ

ಆದರೆ, ಕೊನೆಯಲ್ಲಿ 32 ರಿಂದ 600 ಎಪಿಸೋಡ್‌ಗಳು ಆಯ್ತು. ಜನರು ಮಜಾ ಟಾಕೀಸ್ ಹೆಚ್ಚು ಇಷ್ಟಪಡುತ್ತಿದ್ದರು.

ಸ್ವಲ್ಪ ಬ್ರೇಕ್ ತಗೊಂಡು ನಂತರ ಮಜಾ ಟಾಕೀಸ್ ಆರಂಭಿಸಲಾಯಿತು. ಆದರೆ, ಅಷ್ಟರಲ್ಲಿ ಕೊರೋನಾ ಹಾವಳಿ ಬಂದಿತು. ಮತ್ತೊಮ್ಮೆ ಶೋಗೆ ಬ್ರೇಕ್ ತೊಗೋಳೋ ಹಾಗಾಯ್ತು ಎಂದು ಸೃಜನ್ ಹೇಳಿದರು.

ಈಗ ಮಜಾ ಟಾಕೀಸ್ ನಿಂತು ಹೋಗಿದೆ.

ಅದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಕೋವಿಡ್ ಪ್ರಮುಖ ಕಾರಣವಾಗಿದೆ. ಕೊರೋನಾ ಸಂದರ್ಭದಲ್ಲಿ ಲಿಮಿಟೆಡ್ ವ್ಯಕ್ತಿಗಳ ಜೊತೆ ಸದಾ ಮಾಸ್ಕ್‌ ಹಾಕಿಕೊಂಡು ಕೆಲಸ ಮಾಡುವುದು ಕಷ್ಟವಾಗುತ್ತಿತ್ತು.

ಆ ಸಂದರ್ಭದಲ್ಲಿ ಕಲಾವಿದರು ಕೂಡ ಹೊರಗಡೆ ಬರುವುದಕ್ಕೆ ಹೆದರಿಕೊಳ್ಳುತ್ತಿದ್ದರು. ಅಲ್ಲದೆ, ಸಿನಿಮಾ ಕೆಲಸಗಳು ನಡೆಯುತ್ತಿರಲಿಲ್ಲ.

Ants Or Humans: ಇರುವೆಗಳೆಂಬ ಪುರಾತನ ಕೃಷಿಕರು | ಅವು ನಾಟಿ ಕಾರ್ಯಕ್ಕೆ ಇಳಿದು 65 ಮಿಲಿಯನ್ ವರ್ಷಗಳಾಯಿತು ಎಂದರೆ…

ಸಿನಿಮಾ ರಿಲೀಸ್ ಆಗುತ್ತಿರಲಿಲ್ಲ. ಸರ್ಕಾರ ಹೊಸ ಹೊಸ ನಿಯಮಗಳನ್ನು ತರುತ್ತಿತ್ತು. ಒಳಗೆ ಚಿತ್ರೀಕರಣ ಮಾಡುವಂತೆ ಇರಲಿಲ್ಲ.

ಈಗ ಕೋವಿಡ್ ಮಹಾಮಾರಿ ಹೊರಟು ಹೋಗಿದೆ. ಆ ಪರಿಸ್ಥಿತಿ ದಾಟಿ ಹೋಗಿದೆ. ಈಗ ತುಂಬಾ ಸಿನಿಮಾ ರಿಲೀಸ್ ಆಗುತ್ತಿದೆ ಕನ್ನಡ ಚಿತ್ರರಂಗ ನೆಮ್ಮದಿಯಾಗಿದೆ.

ಮಜಾ ಟಾಕೀಸ್ ನಿಂದಾಗಿ ಸಿನಿಮಾ ಪ್ರಚಾರಕ್ಕೆ ಬಹಳಷ್ಟು ಸಹಾಯವಾಗಿದೆ. 450 ರಿಂದ 600 ಸಿನಿಮಾಗಳಿಗೆ ಒಂದು ರೂಪಾಯಿಯೂ ಪಡೆಯದೆ ಪ್ರಚಾರ ಮಾಡಲಾಗಿದೆ. ಸಾಮಾನ್ಯವಾಗಿ ಪ್ರಚಾರಕ್ಕೆ ತುಂಬಾ ಹಣ ಖರ್ಚಾಗುತ್ತದೆ. ಆದರೆ ಮಜಾ ಟಾಕೀಸ್ ಮೂಲಕ ಪ್ರಚಾರ ಸಿಕ್ಕಿದೆ.

ಇದು ತುಂಬಾ ಖುಷಿಯ ವಿಚಾರ.

ಇದಕ್ಕಿಂತ ಹೆಮ್ಮೆಯ ವಿಚಾರ ಏನು ಬೇಕಿಲ್ಲ ಎಂದು ಸೃಜನ್ ಹೇಳಿದ್ದಾರೆ.

ಅಲ್ಲದೆ, ಈಗಾಗಲೇ ನಿಂತು ಹೋಗಿರುವ ಮಜಾ ಟಾಕೀಸ್‌ನ ಮತ್ತೆ  ಆರಂಭಿಸುತ್ತೀನಿ. ಅದು ಬಿಡುವಂತ ಶೋ ಅಲ್ಲ. ಕನ್ನಡ ಕಿರುತೆರೆ ಪ್ರೇಕ್ಷಕರನ್ನು ಭರಪೂರ ನಕ್ಕು ನಗಿಸಿದ ಶೋ.

ಈ ಕಾರ್ಯಕ್ರಮಕ್ಕೆ ಅಪಾರ ವೀಕ್ಷಕರ ವರ್ಗ ಕೂಡ ಇದೆ. ಜೊತೆಗೆ ನನಗೆ ಖುಷಿ ಕೊಡುವ ಕೆಲಸ ಎಂದರೆ ಆಂಕರಿಂಗ್. ಇದು ನನ್ನ ವೃತ್ತಿ ಜೀವನದ ಪ್ಲಸ್ ಪಾಯಿಂಟ್ ಆಗಿರುತ್ತದೆ ಎಂದು ಹೇಳಿದರು.

ಸೃಜನ್ ಲೊಕೇಶ್ ಮೊದಲು ಆಡು ಆಟ ಆಡು ಶೋ ಆರಂಭಿಸಿದರು. ಹಲವು ಶೋಗಳಲ್ಲಿ ಕಾಣಿಸಿಕೊಂಡರು. ಚೋಟಾ ಚಾಂಪಿಯನ್ , ಮಜಾ ಟಾಕೀಸ್, ರಾಜಾ ರಾಣಿ ರಿಯಾಲಿಟಿ ಶೋ (Raja Rani reality show), ನನ್ನಮ್ಮ ಸೂಪರ್ ಸ್ಟಾರ್ , ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಕಾಣಿಹಿಕೊಂಡಿದ್ದು, ಜನರಿಗೆ ಭರ್ಜರಿ ಮನರಂಜನೆ ನೀಡಿದ್ದಾರೆ.

ಇದನ್ನೂ ಓದಿ: Flight Ticket Price Increase: ದುಬೈ-ಮಂಗಳೂರು ವಿಮಾನ ಟಿಕೆಟ್‌ ದರ ಭಾರೀ ಹೆಚ್ಚಳ ; ಎಷ್ಟಿದೆ ಸಿಂಗಲ್‌ ವೇ ಪ್ರಯಾಣ ದರ ?

Leave A Reply

Your email address will not be published.