Plane crash in Amazon forest: ರಣ ರೋಚಕ ಘಟನೆ: ವಿಮಾನ ಪತನದ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ ಸಿಕ್ಕ 11 ತಿಂಗಳ ಮಗುವೂ ಸೇರಿದಂತೆ 4 ಮಕ್ಕಳು !
International news Plane crash in Amazon forest 4 children including 11 months baby found alive after 40 days in colombia
Plane crash in Amazon forest : ಇದು ಧೈರ್ಯದ ಕಥೆ, ಕಷ್ಟ ಕಾಲದಲ್ಲೂ ಬದುಕಬೇಕು ಎಂದು ಕೊಂಡು ಬದುಕಿ ತೋರಿಸಿದ ಮಕ್ಕಳ ಕಥೆ. ಎಲ್ಲರಿಗೂ ಸ್ಪೂರ್ತಿ ಆಗುವಂತಿದೆ ಈ ಚಿಕ್ಕವರ ನೋವಿನ ಕಥೆ. ಅದು ಅಮೆಜಾನ್ ನ ದಟ್ಟ ದಟ್ಟ ಕಾಡು. ಮನುಷ್ಯ ಪಳಗಿಸಲಾರದ ಕಾಡು ಎನ್ನುವ ನಿಬೀಡಾ ಸೂರ್ಯಕಿರಣ ಒಳಹೊಕ್ಕಲಾರದ ಅರಣ್ಯದಲ್ಲಿ ನಾಲ್ಕು ಮಕ್ಕಳು 40 ದಿನ ಸಾವು ಬದುಕಿನ ನಡುವೆ ಹೋರಾಟ ಮಾಡಿ ಇವತ್ತು ಬದುಕಿ ಬಂದಿದ್ದಾರೆ. ಅಮೆಜಾನ್ ಅರಣ್ಯದಲ್ಲಿ (Amazon Forest) ವಿಮಾನವೊಂದು ಪತನವಾಗಿ (Plane Crash) 40 ದಿನಗಳ ಬಳಿಕ 4 ಮಕ್ಕಳನ್ನು (Children) ಜೀವಂತವಾಗಿ ರಕ್ಷಿಸಲಾಯಿತು ಎಂದು ಕೊಲಂಬಿಯಾದ (Colombia) ಸೇನಾಪಡೆ ತಿಳಿಸಿದೆ.
ಮೇ 1, 2023 ರಂದು 7 ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಇದ್ದ ಸೆಸ್ನಾ ಸಿಂಗಲ್ ಎಂಜಿನ್ನ ಸಣ್ಣ ವಿಮಾನವೊಂದು ಯಾನ ಹೊರಟಿತ್ತು. ಆದರೆ ದಾರಿಯ ಮಧ್ಯ ಎಂಜಿನ್ ವೈಫಲ್ಯದಿಂದಾಗಿ ಅದು ಪತನವಾಗಿತ್ತು. ಘಟನೆಯ ಬಳಿಕ ಬದುಕುಳಿದವರಿಗಾಗಿ ತೀವ್ರ ತರದ ಹುಡುಕಾಟ ನಡೆಸಲಾಗಿತ್ತು. ಅಪಘಾತವಾಗಿ 2 ವಾರಗಳ ಬಳಿಕ ಅಮೆಜಾನ್ ದಟ್ಟ ಕಾಡಿನಲ್ಲಿ ಪತನವಾಗಿದ್ದ ವಿಮಾನವನ್ನು ಕಂಡುಹಿಡಿಯಲಾಗಿದ್ದು, ಅದರಲ್ಲಿ ಮೂವರು ವಯಸ್ಕರ ಮೃತದೇಹಗಳನ್ನೂ ಗುರುತಿಸಲಾಯಿತು. ಆದರೆ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 4 ಮಕ್ಕಳ ಪತ್ತೆ ಆಗಿರಲಿಲ್ಲ. ಮಕ್ಕಳು ಅಪಘಾತದ ಜಾಗದಲ್ಲಿ ಸಿಕ್ಕಿರಲಿಲ್ಲ. ಆಗ ಸೇನಾಪಡೆಗಳಿಗೆ ಉಂಟಾಗಿತ್ತು ಅನುಮಾನ.
ನಾಪತ್ತೆಯಾಗಿದ್ದ 4 ಮಕ್ಕಳಲ್ಲಿ ಎಲ್ಲ ಮಕ್ಕಳೂ ಒಡಹುಟ್ಟಿದವರಾಗಿದ್ದರು. 13 ವರ್ಷ, 9 ವರ್ಷ, 4 ವರ್ಷದ ಮಕ್ಕಳಾಗಿದ್ದರೆ ಅವರ ಜತೆಗೆ 11 ತಿಂಗಳ ಪುಟ್ಟ ಮಗು ಕೂಡಾ ಪ್ರಯಾಣ ನೆಲೆಸಿತ್ತು. ಆದರೆ ಆಶ್ಚರ್ಯ ಎಂಬಂತೆ ಪುಟ್ಟ ಮಗು ಸೇರಿದಂತೆ ಯಾವುದೇ ಮಕ್ಕಳ ಶವ ಪತ್ತೆಯಾಗಿರಲಿಲ್ಲ. ಆಗ ಅಲ್ಲಿನ ಸರ್ಕಾರ ಮಕ್ಕಳ ಪತ್ತೆಗಾಗಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಾರೆ. ಆಗ ಸಿಕ್ಕಿತ್ತು ದಾರಿಯ ಮಧ್ಯ ಅಲ್ಲಲ್ಲಿ ಹಣ್ಣು ತಿಂದು, ಅರ್ಧ ತಿಂದ ಹಣ್ಣುಗಳ ಸಾಕ್ಷಿಗಳು. ಜತೆಗೆ ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಮಕ್ಕಳ ಹೆಜ್ಜೆ ಗುರುತು ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿತ್ತು. ಹೀಗಾಗಿ ಮಕ್ಕಳು ಬದುಕಿರುವ ನಿರೀಕ್ಷೆಯಲ್ಲಿ ಹುಡುಕಾಟವನ್ನು ಇನ್ನಷ್ಟು ತೀವ್ರಗೊಳಿಸಲಾಯಿತು.
ಮಕ್ಕಳನ್ನು ಪತ್ತೆಹಚ್ಚಲು ಬೇಟೆಯಲ್ಲಿ ಪಳಗಿದ 50 ನಾಯಿಗಳನ್ನು ಕಾಡಿನ ಒಳಕ್ಕೆ ನುಗ್ಗಿಸಲಾಯಿತು. 150 ಸೈನಿಕರು ಕೂಂಬಿಂಗ್ ಆಪರೇಶನ್ ಗೆ ಇಳಿದರು. ತೀವ್ರವಾಗಿ ಹುಡುಕಾಟ ನಡೆಸಿದರು. ಜತೆಗೆ ಕಾಡನ್ನು ಸಲೀಸಾಗಿ ಅರ್ಥ ಮಾಡಿಕೊಳ್ಳಬಲ್ಲ ಸ್ಥಳೀಯ ಬುಡಕಟ್ಟಿನ ನೂರಾರು ಸ್ವಯಂಸೇವಕರೂ ಕಾರ್ಯಾಚರಣೆಗೆ ಕಾಡಿಗೆ ನುಗ್ಗಿದ್ದಾರೆ. ಮಕ್ಕಳು ಬದುಕುಳಿದಿರೋ ಮಕ್ಕಳು ಮುಂದೆ ಸಾಗದಂತೆ ತಡೆಯಲು ಕಾಡಿನಾದ್ಯಂತ ಮೈಕ್ ನಲ್ಲಿ ಧ್ವನಿ ಪ್ರಸಾರ ಮಾಡಲಾಗಿತ್ತು. ಮಕ್ಕಳು ಬದುಕಿದ್ದರೆ ಹಸಿವಿನಿಂದ ಅವರು ಸಾಯಬಾರದು ಎಂಬ ಕಾರಣಕ್ಕೆ ಕಾಡಿನಲ್ಲಿ ಆಹಾರ ಮತ್ತು ನೀರಿನ ಬಾಟಲಿಗಳನ್ನು ಹೆಲಿಕಾಪ್ಟರ್ ಮೂಲಕ ಮೇಲಿನಿಂದ ಕಾಡಿನೊಳಗಡೆ ಎಸೆಯಲಾಗಿತ್ತು.
http://pic.twitter.com/cvADdLbCpm
ಕೊನೆಗೂ ಇಡೀ ದೇಶದ ಪ್ರಾರ್ಥನೆ ಫಲಿಸಿದೆ. 40 ದಿನಗಳ ಬಳಿಕ ಕೊನೆಗೂ ನಾಪತ್ತೆಯಾಗಿದ್ದ ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೋ ಪೆಟ್ರೋ, ” ಇದೊಂದು ವಿಸ್ಮಯಕಾರಿ ಘಟನೆ. ಹುಡುಕಾಟದ 40 ದಿನಗಳ ಬಳಿಕ ಸೇನಾಪಡೆ ಹಾಗೂ ಸ್ಥಳೀಯ ಜನರು ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿಯೂ ಈ ಮಕ್ಕಳು ದೈರ್ಯದಿಂದ ಬದುಕುಳಿಯುವ ಮಾರ್ಗಗಳನ್ನು ಕಂಡುಹಿಡಿದಿರುವುದನ್ನು ಇತಿಹಾಸ ನೆನಪಿನಲ್ಲಿಟ್ಟುಕೊಳ್ಳುತ್ತದೆ ” ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಅಧ್ಯಕ್ಷ ಪೆಟ್ರೋ ಟ್ವೀಟ್ ಮಾಡಿ, ಮಕ್ಕಳು ಪತ್ತೆಯಾಗಿರುವುದಾಗಿ ಹೇಳಿದ್ದರು. ಮರುದಿನ ತಾವು ತಪ್ಪು ಮಾಹಿತಿ ನೀಡಿರುವುದನ್ನು ತಿಳಿಸಿ, ಮಕ್ಕಳ ಕೆಲವು ಸಾಕ್ಷ್ಯಗಳು ಕಾಡಿನಲ್ಲಿ ಪತ್ತೆಯಾಗಿರುವುದಾಗಿ ಹೇಳಿಕೆಯನ್ನು ಸರಿಪಡಿಸಿಕೊಂಡಿದ್ದರು. ಆದರೆ ಈಗ ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ. ಬದುಕುಳಿಯಲು ನಿರಂತರ ಮಾರ್ಗಗಳನ್ನು ಅನ್ವೇಷಿಸಿದ ಆ ಎಳೆಯ ಮಕ್ಕಳು, ಜತೆಗೇ ನಡೆಯಲಾರದ ಪುಟಾಣಿ ಮಗುವನ್ನೂ ಎತ್ತಿಕೊಂಡು ಜೀವನ ಪ್ರೇಮ ಮೆರೆದ ಘಟನೆ ಇದೀಗ ಇಡೀ ವಿಶ್ವದ ಕಣ್ಣುಗಳನ್ನು ತೇವಗೊಳಿಸಿದೆ. ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೋ ಪೆಟ್ರೋ ಹೇಳಿದಂತೆ ಇತಿಹಾಸ ಇದನ್ನು ನೆನಪಲ್ಲಿ ಇಟ್ಟುಕೊಳ್ಳಲಿದೆ !!!