Odisha train accident: ಒಡಿಶಾ ರೈಲು ದುರಂತ: ಹಲವು ದಿನ ರಾಶಿ ರಾಶಿ ಶವಗಳ ನಡುವೆ ಇದ್ದರೂ, ಪವಾಡವೆಂಬಂತೆ ಬದುಕಿ ಬಂದ ವ್ಯಕ್ತಿ!!

Odisha Balsore train accident Odisha train crash Survivor wakes up among the dead grabs

Odisha train accident: ಒಡಿಶಾದ(Odisha) ಬಾಲಸೋರ್‌ನಲ್ಲಿ(Balsore) ಕಳೆದ ಶುಕ್ರವಾರ ಸಂಜೆ ಸಂಭವಿಸಿದ ರೈಲು ಅಪಘಾತದಲ್ಲಿ (Odisha Train accident) ನೂರಾರು ಜನರು ಸಾವನ್ನಪ್ಪಿದ್ದಾರೆ. ಇವುಗಳಲ್ಲಿ 100ಕ್ಕೂ ಹೆಚ್ಚು ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ನಡುವೆ ಕೆಲವು ಕುಟುಂಬಗಳು ಅನಾಥವಾಗಿ ರೋದಿಸುವ, ಮನಮಿಡಿಯುವಂತಹ ಘಟನೆಗಳು ಕಣ್ಣಲ್ಲಿ ನೀರು ತರಿಸುತ್ತಿದೆ. ಅಂತೆಯೇ ಇದೆಲ್ಲದರ ನಡುವೆ ಈ ದುರಂತಮಯ ಅಪಘಾತದಲ್ಲಿ ಬದುಕುಳಿದ್ರೂ ಕೂಡ ಶವಗಳ ಜತೆ ಹಲವು ದಿನ ಕಾಲ ಕಳೆದು, ಕೊನೆಗೂ ಪವಾಡ ಸದೃಶ್ಯ ಎಂಬಂತೆ ವ್ಯಕ್ತಿಯೊಬ್ಬರು ಬದುಕಿ ಬಂದಿರೋ ಅಚ್ಚರಿಯ ಘಟನೆಯೊಂದು ನಡೆದಿದೆ.

 

ಹೌದು, ಮೊನ್ನೆ ಮೊನ್ನೆ ತಾನೆ ತಂದೆಯೊಬ್ಬ ಶವಗಾರದಲ್ಲಿ ಬಿಸಾಕಿದ್ದ ಮಗನನ್ನು ಹುಡುಕಿ ಕರೆದೊಯ್ದು ಬದುಕಿಸಿದ ಘಟನೆಯೊಂದು ಸಾಕಷ್ಟು ಸುದ್ಧಿಯಾಗಿತ್ತು. ಇದರ ಬೆನ್ನಲೇ ಮೊಹಮ್ಮದ್ ಸರ್ಫರಾಜ್(Mohammad sarfaz) ಎಂಬುವವರ ಪತ್ನಿ ಹಾಗೂ ಮಗಳು ರೈಲು ದುರಂತದಲ್ಲಿ ಮೃತಟ್ಟಿದ್ದು, ಇದೀಗ ಪತ್ನಿ ದೇಹ ಸಿಕ್ಕಿದ್ದು ಅಂತ್ಯಕ್ರಿಯೆಯನ್ನು ನೆರವೇರಿಸಿ ಮತ್ತೆ ಮಗಳ ದೇಹವನ್ನು ಹುಡುಕಲು ಹೋಗಿದ್ದ ಮನ ಮಿಡಿಯುವ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಇದರ ನಡುವೆ ರಾಬಿನ್ ನೈಯಾ(Rabin naiya) ಎಂಬುವರು ಬದುಕುಳಿದ್ರೂ ಕೂಡ ಶವಗಳ ಜತೆ ಹಲವು ದಿನ ಕಾಲ ಕಳೆದು, ಕೊನೆಗೂ ಪವಾಡ ಸದೃಶ್ಯ ಎಂಬಂತೆ ಬದುಕಿ ಬಂದಿದ್ದಾರೆ.

ಅಂದಹಾಗೆ ರೈಲು ಅಪಘಾತದ ನಂತರ ರಾಬಿನ್ ನೈಯಾ ಎಂಬುವರು ರೈಲು ಹಳಿಗಳ(Track)ಮೇಲೆ ಪ್ರಜ್ಞೆ ತಪ್ಪಿ ಮಲಗಿದ್ದರು. ಆದರೆ ಅವರನ್ನು ಮೃತಪಟ್ಟಿದ್ದಾರೆ ಎಂದು ಭಾವಿಸಿ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ, ರೈಲು ಅಪಘಾತದ ಸ್ಥಳಕ್ಕೆ ಸಮೀಪವಿರುವ ಒಡಿಶಾದ ಬಾಲಸೋರ್‌ನ ಶಾಲಾ ಕೊಠಡಿಯಲ್ಲಿ ನೂರಾರು ಶವಗಳೊಂದಿಗೆ ಎತ್ತಿಕೊಂಡು ಹೋಗಿ ಹಾಕಿದ್ದಾರೆ. 35 ವರ್ಷ ವಯಸ್ಸಿನ ಈ ವ್ಯಕ್ತಿ ಕ್ಲಾಸ್ಟ್ರೋಫೋಬಿಕ್ (Claustrophobik) ಶಾಲೆಯ ಕೋಣೆಯಲ್ಲಿ ಹತ್ತಾರು ದೇಹಗಳ ನಡುವೆ ನೋವಿನ ಕ್ಷಣಗಳ ನಡುವೆಯೂ ಬದುಕಿದ್ದಾರೆ.

ರಕ್ಷಣಾ ಕಾರ್ಯಕರ್ತರು ಶಾಲೆಯ ಕೋಣೆಯಲ್ಲಿನ ಮೃತದೇಹಗಳನ್ನು ಹೊರತೆಗೆಯುತ್ತಿದ್ದಾಗ ಒಂದು ಕೈ ಇದ್ದಕ್ಕಿದ್ದಂತೆ ಒಬ್ಬರ ಕಾಲನ್ನು ಹಿಡಿದಂತೆ ಭಾಸವಾಗಿದೆ. ಅಲ್ಲದೆ “ನಾನು ಬದುಕಿದ್ದೇನೆ, ಸತ್ತಿಲ್ಲ, ದಯವಿಟ್ಟು ನನಗೆ ನೀರು ಕೊಡಿ.” ಎಂದು ಸದ್ದಿಲ್ಲದ ನರಳುವಿಕೆಯನ್ನು ಕೇಳಿದ್ದಾರೆ. ಮೊದಲಿಗೆ ಗಾಬರಿಯಾದರೂ ನಂತರ 35 ವರ್ಷದ ರಾಬಿನನ್ನು ನೋಡಿದ್ದಾರೆ. ಆಗ ರಾಬಿನ್ ತನ್ನನ್ನು ಉಳಿಸುವಂತೆ ಮನವಿ ಮಾಡಿದ್ದಾನೆ. ತಕ್ಷಣ ಅವರನ್ನು ರಕ್ಷಕರು ಆಸ್ಪತ್ರೆಗೆ ಸೇರಿಸಿದ್ದಾರೆ.

ಅಂತೂ ಕೊನೆಗೂ ಪಶ್ಚಿಮ ಬಂಗಾಳದ(West bengal) ಉತ್ತರ 24 ಪರಗಣದ ಚಾರ್ನೇಖಲಿ ಗ್ರಾಮದ ನಿವಾಸಿ ರಾಬಿನ್ ನೈಯಾ ಅಪಘಾತದಲ್ಲಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದರೂ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ರಾಬಿನ್‌ ನೈಯಾ ಅವರ ಚಿಕ್ಕಪ್ಪ ಮನಬೇಂದ್ರ ಸರ್ದಾರ್ ‘ನನ್ನ ಸಂಬಂಧಿ ರಾಬಿನ್, ಆಂಧ್ರಕ್ಕೆ ಪ್ರಯಾಣಿಸುತ್ತಿದ್ದರು. ರೈಲು ಅಪಘಾತಕ್ಕೀಡಾಗುತ್ತಿದ್ದಂತೆ, ಅವರು ಪ್ರಜ್ಞೆ ಕಳೆದುಕೊಂಡರು. ದೇಹಗಳ ರಾಶಿಯ ನಡುವೆ ಅವನು ತನ್ನನ್ನು ಕಂಡುಕೊಂಡನು. ಅವನು ನೀರು ಕೇಳಿ ರಕ್ಷಕನ ಕಾಲು ಹಿಡಿದಿದ್ದು, ನಂತರ ಅವನು ಪತ್ತೆಯಾಗಿದ್ದಾನೆ ನಂತರ ರಕ್ಷಕರು ಅವನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Balasore Train Accident: 40 ಮೃತದೇಹದಲ್ಲಿ ಒಂದೇ ಒಂದು ಗಾಯದ ಗುರುತಿಲ್ಲ, ಆದರೂ ಸಾವು ಸಂಭವಿಸಿದೆ…ಏನು ಕಾರಣ?

Leave A Reply

Your email address will not be published.